ಮೊದಲ ಬಾರಿಗೆ ಅತೀ ಹೆಚ್ಚು OBC ನಾಯಕರಿಗೆ ಮಂತ್ರಿಗಿರಿ; ಐತಿಹಾಸಿಕ ಕ್ಯಾಬಿನೆಟ್​​ಗೆ ಮುನ್ನುಡಿ

ಮೊದಲ ಬಾರಿಗೆ ಅತೀ ಹೆಚ್ಚು OBC ನಾಯಕರಿಗೆ ಮಂತ್ರಿಗಿರಿ; ಐತಿಹಾಸಿಕ ಕ್ಯಾಬಿನೆಟ್​​ಗೆ ಮುನ್ನುಡಿ

ನವದೆಹಲಿ: ಭಾರೀ ನಿರೀಕ್ಷೆ ಮೂಡಿಸಿರುವ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇಂದು ಸಂಜೆಗೆ ಅಂತಿಮವಾಗುವ ಸಾಧ್ಯತೆಗಳಿದ್ದು ಈ ಹಿಂದಿನ ಸಚಿವರು/ನೂತನ ಸಚಿವರು ಸೇರಿದಂತೆ ಒಟ್ಟು 43 ಸಚಿವರು ಮೋದಿ ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ಕೇಂದ್ರ ಕ್ಯಾಬಿನೆಟ್​ ಒಟ್ಟು 81 ಸದಸ್ಯರ ಬಲ ಹೊಂದಿದ್ದು ಸದ್ಯ 53 ಸಚಿವರು ಸಂಪುಟದಲ್ಲಿದ್ದಾರೆ.

ಈ ಬಾರಿಯ ಸಂಪುಟ ವಿಸ್ತರಣೆಯ ವಿಶೇಷತೆ ಎಂದರೆ ಸ್ವಾತಂತ್ರೋತ್ತರ ಭಾರತದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು ಓಬಿಸಿ ನಾಯಕರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಯುವಕರು ಮತ್ತು ಓಬಿಸಿ ಕ್ಯಾಟಗರಿಯ ನಾಯಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಮಾದರಿ ಕ್ಯಾಬಿನೆಟ್​ ರಚಿಸಲು ಮೋದಿ ಪ್ಲಾನ್ ಮಾಡಿದ್ದಾರಂತೆ.

ನೂತನ ಕ್ಯಾಬಿನೆಟ್​​ನಲ್ಲಿ ನಾಲ್ವರು ಮಾಜಿ ಸಿಎಂಗಳು ಹಾಗೂ 16 ಮಾಜಿ ಸಚಿವರೂ ಸಹ ಮಂತ್ರಿ ಸ್ಥಾನ ಪಡೆಯಲಿದ್ದಾರೆಂಬ ನಿರೀಕ್ಷೆ ಇದೆ. ಈ ಕ್ಯಾಬಿನೆಟ್​ನಲ್ಲಿ ಓರ್ವ ಮುಸ್ಲೀಂ, ಓರ್ವ ಕ್ರಿಶ್ಚಿಯನ್, ಓರ್ವ ಸಿಖ್, ಓರ್ವ ಬೌದ್ಧ ಧರ್ಮದ ನಾಯಕರೂ ಸಚಿವ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ.

ಮೋದಿ ಕ್ಯಾಬಿನೆಟ್​ ಹೇಗಿರಲಿದೆ..?

 • ಮಾಜಿ ಮುಖ್ಯಮಂತ್ರಿಗಳು -4
 • ಮಾಜಿ ಸಚಿವರು- 16
 • ಲಾಯರ್​ಗಳು- 13
 • ಡಾಕ್ಟರ್​ಗಳು- 6
 • ಎಂಜಿನಿಯರ್​ಗಳು- 5
 • ನಾಗರಿಕ ಸೇವಕರು- 7
 • ಸಂಶೋಧನಾ ಪದವೀಧರರು- 7
 • ವ್ಯಾವಹಾರಿಕ ಪದವೀಧರರು- 3
 • ಎಸ್​​ಸಿ- 12
 • ಹಿಂದುಳಿದ ವರ್ಗ- 27
 • 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು-14
 • ಈಶಾನ್ಯ ಭಾರತ- 5

The post ಮೊದಲ ಬಾರಿಗೆ ಅತೀ ಹೆಚ್ಚು OBC ನಾಯಕರಿಗೆ ಮಂತ್ರಿಗಿರಿ; ಐತಿಹಾಸಿಕ ಕ್ಯಾಬಿನೆಟ್​​ಗೆ ಮುನ್ನುಡಿ appeared first on News First Kannada.

Source: newsfirstlive.com

Source link