ಕಾಂಗ್ರೆಸ್ ಜಾಥಾ: ಸೈಕಲ್​ ಏರುವ ಮೊದ್ಲೇ ಎಡವಿ ಬಿದ್ದ ಕೈ ಕಾರ್ಯಕರ್ತೆ

ಕಾಂಗ್ರೆಸ್ ಜಾಥಾ: ಸೈಕಲ್​ ಏರುವ ಮೊದ್ಲೇ ಎಡವಿ ಬಿದ್ದ ಕೈ ಕಾರ್ಯಕರ್ತೆ

ಬೆಂಗಳೂರು: ಇಂಧನ ಬೆಲೆ ಏರಿಕೆಯನ್ನ ಖಂಡಿಸಿ ನಗರದಲ್ಲಿ ಇಂದು ಕಾಂಗ್ರೆಸ್​ ಮುಖಂಡರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು, ಈ ವೇಳೆ ಱಲಿ ನಡೆಸಲು ಮುಂದಾಗುತ್ತಿದಂತೆ ಸೈಕಲ್​ ಹತ್ತಲು ಯತ್ನಿಸಿದ ಕಾರ್ಯಕರ್ತೆಯೊಬ್ಬರು ಎಡವಿ ಬಿದ್ದರು. ಕೂಡಲೇ ಸ್ಥಳದಲ್ಲಿದ್ದ ಇತರರು ಮಹಿಳೆಯ ನೆರವಿಗೆ ಬಂದರು.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ನಡೆದ ಸೈಕಲ್​ ಜಾಥಾದಿಂದ ಭಾರೀ ಟ್ರಾಫಿಕ್​ ಉಂಟಾಗಿತ್ತು. ಪರಿಣಾಮ ಕ್ವಿನ್ಸ್ ರಸ್ತೆಯಲ್ಲಿ ಪ್ರತಿಭಟನಾಕಾರರನ್ನ ತಡೆದ ಪೊಲೀಸರು ಸೈಕಲ್ ಜಾಥ ನಿಲ್ಲಿಸುವಂತೆ ಮನವಿ ಮಾಡಿದರು. ಆದರೂ ರಾಮಲಿಂಗಾರೆಡ್ಡಿ, ಸಲೀಂ ಅಹಮದ್ ಹಾಗೂ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಕಾಂಗ್ರೆಸ್​ ಕಾರ್ಯಕರ್ತರನ್ನ ಜಾಥಾವನ್ನು ಮುಂದುವರಿಸಲು ಮುಂದಾದ ಕಾರಣ ಎಲ್ಲರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದುಕೊಂಡು ಹೋದರು. ಇದರೊಂದಿಗೆ ಅರ್ಧ ತಾಸಿಗೆ ಕಾಂಗ್ರೆಸ್ ಸೈಕಲ್ ಜಾಥಾ ಮುಕ್ತಾಯಗೊಂಡಿತು.

ಇದನ್ನೂ ಓದಿ: ಟಾಂಗಾ-ಎಲೆಕ್ಟ್ರಿಕ್ ಗಾಡಿ ಓಡಿಸಿ, ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

The post ಕಾಂಗ್ರೆಸ್ ಜಾಥಾ: ಸೈಕಲ್​ ಏರುವ ಮೊದ್ಲೇ ಎಡವಿ ಬಿದ್ದ ಕೈ ಕಾರ್ಯಕರ್ತೆ appeared first on News First Kannada.

Source: newsfirstlive.com

Source link