ಡ್ರಗ್ಸ್​ ಸ್ಮಗ್ಲರ್​ಗಳ ಹೊಸ ದಾರಿ; ಕೊರಿಯರ್​​ ಕಚೇರಿಗೆ ಡಾಗ್ ಸ್ಕ್ವಾಡ್ ದಾಳಿ

ಡ್ರಗ್ಸ್​ ಸ್ಮಗ್ಲರ್​ಗಳ ಹೊಸ ದಾರಿ; ಕೊರಿಯರ್​​ ಕಚೇರಿಗೆ ಡಾಗ್ ಸ್ಕ್ವಾಡ್ ದಾಳಿ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮಾದಕ ವಸ್ತುಗಳ ಸರಬರಾಜು ದಿನೇ ದಿನೆ ಹೆಚ್ಚುತ್ತಿದ್ದಂತೆ ಅಲರ್ಟ್​ ಆಗಿರುವ ಪೊಲೀಸರು ತೀವ್ರ ಪರಿಶೀಲನೆ ಆರಂಭಿಸಿದ್ದಾರೆ. ವಿಶಾಖಪಟ್ಟಣದಿಂದ ರಾಜ್ಯಕ್ಕೆ ಕೋರಿಯರ್​ಗಳ ಮೂಲಕ ಮಾದಕ ವಸ್ತುಗಳು ಲಗ್ಗೆ ಇಡುತ್ತಿದ್ದು, ಮಾಹಿತಿ ಪಡೆದ ಖಾಕಿ ಪಡೆ ಕೋರಿಯರ ಕಛೇರಿಗಳ ಕದ ತಟ್ಟಿದೆ.

ಕೇಂದ್ರ ವಿಭಾಗದ ವಿವೇಕನಗರ, ಅಶೋಕನಗರ, ಸಂಪಂಗಿರಾಮನಗರ, ಸದಾಶಿವನಗರ, ಶೇಷಾದ್ರಿಪುರಂ, ವೈಯಾಲಿಕಾವಲ್‌ ಭಾಗದಲ್ಲಿ ಹೆಚ್ಚಾಗಿ ಮಾದಕ ವಸ್ತುಗಳ ಸರಬರಾಜಾಗುತ್ತಿರುವ ಸಂಶಯ ವ್ಯಕ್ತ ಪಡಿಸಿದ ಪೊಲೀಸರು, ಕೇಂದ್ರ ವಿಭಾಗದ ಎಲ್ಲಾ ಕೊರಿಯರ್​ ಕಛೇರಿಗಳ ಮೇಲೆ ಶ್ವಾನ ದಳದ ಮೂಲಕ ತಪಾಸಣೆ ಮಾಡಿದ್ದಾರೆ. ಪೊಲೀಸರು ಗುರುತಿಸಿರುವ ಡ್ರಗ್​ ಸರಬರಾಜು ಪ್ರದೇಶಗಳು ಮತ್ತು ಸ್ಲಂ ಪ್ರದೇಶಗಳಲ್ಲಿನ ಡ್ರಗ್​ ಪೆಡ್ಲರ್​ಗಳ ಮನೆಗಳನ್ನು ಕೂಡ ತಪಾಸಣೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

blank

ಇನ್ನು ಈ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನ್ಯೂಸ್​ಫಸ್ಟ್​ನ ಜೊತೆ ಮಾತನಾಡಿ, ಕೇಂದ್ರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಮಾದಕ ವಸ್ತುಗಳ ಸರಬರಾಜಿನ ಮೇಲೆ ಕಣ್ಣಿಡಲಾಗಿದ್ದು, ಡ್ರಗ್​ ಪೆಡ್ಲರ್ಸ್, ಗ್ರಾಹಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದಿದ್ದಾರೆ.

The post ಡ್ರಗ್ಸ್​ ಸ್ಮಗ್ಲರ್​ಗಳ ಹೊಸ ದಾರಿ; ಕೊರಿಯರ್​​ ಕಚೇರಿಗೆ ಡಾಗ್ ಸ್ಕ್ವಾಡ್ ದಾಳಿ appeared first on News First Kannada.

Source: newsfirstlive.com

Source link