‘ಆ ಯಮ್ಮನ ಬಗ್ಗೆ ನನ್ನ ಬಳಿ ಯಾಕೆ ಮಾತಾಡ್ತೀರಿ?’ -ಸುಮಲತಾಗೆ ದೇವೇಗೌಡ ಕೌಂಟರ್

‘ಆ ಯಮ್ಮನ ಬಗ್ಗೆ ನನ್ನ ಬಳಿ ಯಾಕೆ ಮಾತಾಡ್ತೀರಿ?’ -ಸುಮಲತಾಗೆ ದೇವೇಗೌಡ ಕೌಂಟರ್

ಬೆಂಗಳೂರು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ- ಸಂಸದೆ ಸುಮಲತಾ ನಡುವಿನ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ.. ನನಗೆ ಎಲ್ಲಾ ವಿಷಯ ಗೊತ್ತಿದೆ.. ಆದ್ರೆ ಈ ಬಗ್ಗೆ ನಾನು ಹೆಚ್ಚಿಗೆ ಏನೂ ಮಾತನ್ನಾಡುವುದಿಲ್ಲ.. ಇದರಲ್ಲಿ ನಾನು ಮಧ್ಯಪ್ರವೇಶಿಸುವುದೂ ಇಲ್ಲ. ಇಡೀ ಮಂಡ್ಯ 2023 ಹಾಗೂ 2024ಕ್ಕೆ ಏನಾಗಲಿದೆ ? ಮುಂದೆ ಕರ್ನಾಟಕದಲ್ಲಿ ಏನಾಗಲಿದೆ ಅನ್ನೋದನ್ನ ಇಲ್ಲಿ ಕುಳಿತು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಸುಮಲತಾ ಏನಾದರೂ ಜ್ಯೋತಿಷಿಯೇ ?
ಅಕ್ರಮ ಗಣಿಗಾರಿಕೆಯಿಂದ ಡ್ಯಾಂ ಬಿರುಕು ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು.. ಅಕ್ರಮ ಗಣಿಗಾರಿಕೆ ವಿಷಯ ಗೊತ್ತಿದೆ.. ಅದರ ಬಗ್ಗೆ ಈಗ ಯಾಕೆ ಚರ್ಚೆ..? ಇದರ ಬಗ್ಗೆ ಯಡಿಯೂರಪ್ಪ ಸರ್ಕಾರದಲ್ಲಿ ದೊಡ್ಡ ಚರ್ಚೆಯಾಗಿದೆ. ಕ್ರಮಕೈಗೊಳ್ಳುವುದಾಗಿ ಭರವಸೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: ‘KRS ಜಲಾಶಯದ ಬಾಗಿಲಿನಲ್ಲಿ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು’ -ಸುಮಲತಾ ವಿರುದ್ಧ ಹೆಚ್​​ಡಿಕೆ ಕಿಡಿ

ಸುಮಲತಾ ಏನಾದರೂ ಜ್ಯೋತಿಷಿಯೇ ? ಜ್ಯೋತಿಷಿಯಾಗಿ ಹೇಳಿದ್ದರೆ ತುಂಬಾ ಸಂತೋಷ.. ಆ ಯಮ್ಮನ ಬಗ್ಗೆ ನನ್ನ ಬಳಿ ಯಾಕೆ ಮಾತನ್ನಾಡ್ತೀರಿ..? ಎಂದು ಸುಮಲತಾ ಬಗ್ಗೆ ದೇವೇಗೌಡ ಬೇಸರ ಹೊರ ಹಾಕಿದ್ದಾರೆ.

ಪಕ್ಷ ಸಂಘಟನಾ ಸಭೆ ಬಗ್ಗೆ ಪ್ರತಿಕ್ರಿಯಿಸಿ.. ನಾನು ನಾಲ್ಕು ತಿಂಗಳಿನಿಂದ ಪಕ್ಷದ ಕಚೇರಿಗೆ ಬರಲು ಸಾಧ್ಯವಾಗಿರಲಿಲ್ಲ.. ಈಗ ಪಕ್ಷದ ಕಚೇರಿಗೆ ಬಂದಿದ್ದೇನೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ನನ್ನ ಅಭಿಪ್ರಾಯವನ್ನ ಮಂಡಿಸುತ್ತೇನೆ ಎಂದರು.

ಇದನ್ನೂ ಓದಿ: ಮಹಿಳೆ ಬಗ್ಗೆ ಇಂಥಾ ಹೇಳಿಕೆ.. ಮಾಜಿ ಸಿಎಂಗೆ ಜ್ಞಾನ ಇಲ್ವಾ.? HDK ವಿರುದ್ಧ ಮಂಡ್ಯ ಸೊಸೆ ಕೆಂಡ

ಕೇಂದ್ರ ಸಚಿವ ಸಂಪುಟ ಪುನಾರಚನೆ ಬಗ್ಗೆ ಪ್ರತಿಕ್ರಿಯೆ ನೀಡಿ.. ಹಲವರು ಸ್ಥಾನ ಪಡೆದಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ.. ರಾಜ್ಯದ ಅಭಿವೃದ್ಧಿ ಮಾಡಲಿ.. ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ..? ಸುಮಲತಾ ತೀಕ್ಷ್ಣ ಮಾತು

The post ‘ಆ ಯಮ್ಮನ ಬಗ್ಗೆ ನನ್ನ ಬಳಿ ಯಾಕೆ ಮಾತಾಡ್ತೀರಿ?’ -ಸುಮಲತಾಗೆ ದೇವೇಗೌಡ ಕೌಂಟರ್ appeared first on News First Kannada.

Source: newsfirstlive.com

Source link