ಕೈಕೊಟ್ಟ ಬ್ಯಾಟರಿ ಸೈಕಲ್..​ ಮುಜುಗರಕ್ಕೆ ಒಳಗಾದ ಕೆಪಿಸಿಸಿ ಕಾರ್ಯಾಧ್ಯಕ್ಷ

ಕೈಕೊಟ್ಟ ಬ್ಯಾಟರಿ ಸೈಕಲ್..​ ಮುಜುಗರಕ್ಕೆ ಒಳಗಾದ ಕೆಪಿಸಿಸಿ ಕಾರ್ಯಾಧ್ಯಕ್ಷ

ಬೆಂಗಳೂರು: ಇಂಧನ ಬೆಲೆ ಏರಿಕೆಯನ್ನ ಖಂಡಿಸಿ ನಗರದಲ್ಲಿ ಇಂದು ಕಾಂಗ್ರೆಸ್​ ಮುಖಂಡರು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಏರಿದ್ದ ಬ್ಯಾಟರಿ ಚಾಲಿತ ಸೈಕಲ್​ನ ಬ್ಯಾಟರಿ ಮಧ್ಯದಲ್ಲಿಯೇ ಕೈಕೊಟ್ಟಿದೆ.

ಇದರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರು ತೀವ್ರ ಮುಜುಗರಕ್ಕೆ ಒಳಗಾದರು. ಬಳಿಕ ಸಲೀಂ ಅಹಮ್ಮದ್ ಏರಿದ್ದ ಸೈಕಲ್​ನ್ನು ಕಾರ್ಯಕರ್ತರು ತಳ್ಳುತ್ತಾ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಕೈ ನಾಯಕರನ್ನ ವಶಕ್ಕೆ ಪಡೆದ ಪೊಲೀಸರು

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಸೈಕಲ್ ಜಾಥಾ ನಡೆಸುತ್ತಿದೆ.

ಇದನ್ನೂ ಓದಿ: ಟಾಂಗಾ-ಎಲೆಕ್ಟ್ರಿಕ್ ಗಾಡಿ ಓಡಿಸಿ, ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

The post ಕೈಕೊಟ್ಟ ಬ್ಯಾಟರಿ ಸೈಕಲ್..​ ಮುಜುಗರಕ್ಕೆ ಒಳಗಾದ ಕೆಪಿಸಿಸಿ ಕಾರ್ಯಾಧ್ಯಕ್ಷ appeared first on News First Kannada.

Source: newsfirstlive.com

Source link