15 ದಿನಗಳ ನಂತರ ಮತ್ತೆ ಲಾಕ್ ಡೌನ್..? ಜನರೇ ‘ಹುಷಾರ್’ ಎಂದ ಸಿಎಂ ಬಿಎಸ್​ವೈ

15 ದಿನಗಳ ನಂತರ ಮತ್ತೆ ಲಾಕ್ ಡೌನ್..? ಜನರೇ ‘ಹುಷಾರ್’ ಎಂದ ಸಿಎಂ ಬಿಎಸ್​ವೈ

ಚಿಕ್ಕಬಳ್ಳಾಪುರ: ಅನ್​ಲಾಕ್ ಆಗಿದೆ ಅಂತ ಜನರೇ ಮೈ ಮರೆಯಬೇಡಿ, ಸದಾ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಿ, ಸರ್ಕಾರದ ಜೊತೆ ಸಹಕರಿಸಿ, ಇಲ್ಲವಾದರೆ ಮತ್ತೆ 15 ದಿನಗಳ ನಂತರ ಈ ಹಿಂದಿನ ಲಾಕ್ ಡೌನ್ ಪರಿಸ್ಥಿತಿ ಜಾರಿ ಮಾಡಬೇಕಾಗುತ್ತೆ ಅಂತ ರಾಜ್ಯದ ಜನರಿಗೆ ಸಿಎಂ ಬಿ. ಎಸ್. ಯಡಿಯೂರಪ್ಪ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ ಮಾತನಾಡಿದ ಸಿಎಂ ಯಡಿಯೂರಪ್ಪನವರು ನಂತರ ಮಾತನಾಡಿ.. ಕೊರೊನಾ ಮೂರನೇ ಅಲೆ ಎದುರಿಸಲು ದೇಶದಲ್ಲಿ ಮೊಟ್ಟ ಮೊದಲ 70 ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಯನ್ನ ಉದ್ಘಾಟನೆ ಮಾಡಿದ್ದೇವೆ.. ಭಾರತದ ಆರು ರಾಜ್ಯಗಳಲ್ಲಿ ಮಾತ್ರವೇ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಆಗ್ತಿದೆ.. ಆದ್ರೆ ದೇಶದಲ್ಲಿ ಮೊದಲೇ ನಮ್ಮ ರಾಜ್ಯದಲ್ಲಿ ಈ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಆಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಿದ ಖಾಸಗಿ ಸಂಸ್ಥೆಗಳಿಗೆ ಸರಕಾರದಿಂದ ಧನ್ಯವಾದ ಸಲ್ಲಿಸುತ್ತೇನೆ ಅಂತ ಹೇಳಿದ್ರು.

ಕೋವಿಡ್ ನಂತರವೂ ಸಾರ್ವಜನಿಕರ ಸೇವೆಗೆ ಇದು ಲಭ್ಯವಾಗಲಿದೆ.. ಕೊರೊನಾ ಕಂಟ್ರೋಲ್​ಗೆ ಸರ್ಕಾರ ಆನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮೂರನೇ ಅಲೆಯನ್ನ ಸಮರ್ಥವಾಗಿ ಎದುರಿಸುವ ವಿಶ್ವಾಸ ನನಗಿದೆ. ಆದ್ರೆ ನಾನು ಸಾರ್ವಜನಿಕರಲ್ಲಿ ಒಂದು ಮನವಿ ಮಾಡ್ತೇನೆ.. ಜನರೇ ಲಾಕ್ ಡೌನ್ ಸಡಿಲ ಆಗಿದೆ ಅಂತ ಬೇಕಾಬಿಟ್ಟಿ ಒಡಾಡಬೇಡಿ, ವ್ಯಾಪಾರ ವಹಿವಾಟು ಮಾಡುವಾಗ ಎಚ್ಚರ ವಹಿಸಿ.. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ, ಇಲ್ಲವಾದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಬೇಕಾಗುತ್ತೆ ಅಂತ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಮತ್ತೆ 15 ದಿನಗಳ ನಂತರ ಮೊದಲ ಸ್ಥಿತಿ ತರಬೇಕಾಗುತ್ತೆ ಎಂದರು.

The post 15 ದಿನಗಳ ನಂತರ ಮತ್ತೆ ಲಾಕ್ ಡೌನ್..? ಜನರೇ ‘ಹುಷಾರ್’ ಎಂದ ಸಿಎಂ ಬಿಎಸ್​ವೈ appeared first on News First Kannada.

Source: newsfirstlive.com

Source link