ಕೇಳ್ರಪ್ಪೋ ಕೇಳಿ.. ‘ಕಾಟನ್ ಪೇಟೆ ಗೇಟ್’​​​ಗೆ ಬರ್ತಿದ್ದಾಳೆ ಸನ್ನಿ ಲಿಯೋನ್!

ಕೇಳ್ರಪ್ಪೋ ಕೇಳಿ.. ‘ಕಾಟನ್ ಪೇಟೆ ಗೇಟ್’​​​ಗೆ ಬರ್ತಿದ್ದಾಳೆ ಸನ್ನಿ ಲಿಯೋನ್!

ಮೊನ್ನೇ ತನ್ನ ಗಂಡನಿಗಾಗಿ ಪಬ್ಲಿಕ್​​ನಲ್ಲಿ ಒಬ್ಬಳೆ ಮಾತ್ರೆ ತೆಗೆದುಕೊಂಡು ಬರಲು ಹೋಗಿ ಸದ್ದು ಮಾಡಿದ್ದ ಬಿಟೌನ್ ಬ್ಲೂ ಡಾಲ್ ಸನ್ನಿ ಲಿಯೋನ್ ಅತಿ ಶೀಘ್ರದಲ್ಲೇ ಬೆಂಗಳೂರಿನ ಕಾಟನ್ ಪೇಟೆಗೆ ಬರ್ತಿದ್ದಾರೆ. ಅದ್ಯಾಕೆ ಸನ್ನಿ ಕಾಟನ್ ಪೇಟೆಗೆ ಬರ್ತಿದ್ದಾರೆ!

blank

ಬಾಲಿವುಡ್ ಅಂಗಳದ ಚೆಲುವಾಂತ ಚೆಲುವೆಯರಲ್ಲಿ ಮಿರ ಮಿರ ಮುಂಚುಣಿಯ ಚೆಲುವೆ ಸನ್ನಿ ಲಿಯೋನ್. ಸನ್ನಿ ಮಾದಕ ವೈಯಾರ ವೈಭವಕ್ಕೆ ನಾಡು ನುಡಿ ಗಡಿ ಗುಡಿಯ ರೇಖೆ ಇಲ್ವೇ ಇಲ್ಲ. ಒಂಥರ ಆಲ್ ಇಂಡಿಯಾ ಪರ್ಮೆಂಟ್ ವೇಕ್ಹಲ್ ಇದ್ದಂಗೆ. ಸನ್ನಿ ಯಾವ ಸಿನಿ ಅಂಗಳಕ್ಕೆ ಕಾಲಿಟ್ಟರು ಒಂದು ವೈಬ್ರರೇಷನ್, ಪಡ್ಡೆ ಹುಡ್ಗರಿಗೆ ಒಳಗೊಳಗೆ ಸೆಲಬ್ರೇಷನ್ ಶುರುವಾಗುತ್ತೆ. ಈಗ ವಿಷಯವೆನಪ್ಪ ಅಂದ್ರೆ ಸ್ಯಾಂಡಲ್​ವುಡ್ ಸೇಸಮ್ಮ ಮತ್ತೊಮ್ಮೆ ಕನ್ನಡ ಸಿನಿ ಅಂಗಳಕ್ಕೆ ಬಂದು ನರ್ತಿಸೋ ನಿಲಾಂಬರಿಯಾಗಲಿದ್ದಾರೆ.

blank

4 ನೇ ಬಾರಿಗೆ ಕನ್ನಡ ಸಿನಿಮಾ ಹಾಡಿನಲ್ಲಿ ಸನ್ನಿ ಡ್ಯಾನ್ಸ್
ಹೌದು, ಸನ್ನಿ ಲಿಯೋನ್ ಮತ್ತೊಮ್ಮೆ ಮಗದೊಮ್ಮೆ ಚಂದನವನಕ್ಕೆ ಕ್ಯಾಬೆರೆ ಕುಣಿತಕ್ಕಾಗಿ ಬರುತ್ತಿದ್ದಾರೆ.. ಜೋಗಿ ಪ್ರೇಮ್ ಅವರ ಡಿಕೆ , ಇಂದ್ರಜೀತ್ ಲಂಕೇಶ್ ಅವರ ಲವ್​ ಯೂ ಆಲಿಯಾ ಹಾಗೂ ಕೆಲ ದಿನಗಳ ಹಿಂದೆ ಚಾಂಪಿಯನ್ ಅನ್ನೋ ಕನ್ನಡ ಸಿನಿಮಾಕ್ಕೆ ಮಾದಕ ಕುಣಿತವನ್ನ ಹಾಕಿ ಹೋಗಿದ್ದರು ಸನ್ನಿ. ಈಗ ನಾಲ್ಕನೇ ಬಾರಿಗೆ ಕನ್ನಡ ಸಿನಿರಂಗದ ಹೊಸ ಸಿನಿಮಾಕ್ಕೆ ಸನ್ನಿಯವರನ್ನ ಕರೆಸುತಿದ್ದಾರೆ. ಹಾಗಾದ್ರೆ ಯಾವುದು ಆ ಸಿನಿಮಾ ಅನ್ನೋದಕ್ಕೆ ಉತ್ತರ ಕಾಟನ್ ಪೇಟೆ ಗೇಟ್​​​.

blank

ಕಾಟನ್ ಪೇಟೆ ಗೇಟ್​​.. ಕನಕಪುರ ಶ್ರೀನಿವಾಸ್ ನಿರ್ಮಾಣದ ಮಲ್ಟಿಲಾಂಗವೇಜ್ ಸಿನಿಮಾ.. ಕನ್ನಡದಲ್ಲಿ ಕಾಟನ್ ಪೇಟೆ ಗೇಟ್, ತೆಲುಗಿನಲ್ಲಿ ಸೀತಣ್ಣ ಪೇಟೆ ಗೇಟ್.. ವಿ ರಾಜ್ ಕುಮಾರ್ ಅನ್ನೋರು ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಶೂಟಿಂಗ್ ಈಗಾಗಲೇ ಮುಗಿದು ಹೋಗಿದ್ದು ಸನ್ನಿ ಲಿಯೋನ್ ಐಟಂ ಸಾಂಗ್ ಒಂದು ಬಾಕಿ ಉಳಿದು ಕೊಂಡಿತ್ತು. ಇದೇ ತಿಂಗಳ 29 ,30, 31ನೇ ತಾರೀಖ್ ಹೈದ್ರಾಬಾದ್​​ನಲ್ಲಿ ಸನ್ನಿ ಐಟಂ ಸಾಂಗ್ ಶೂಟ್ ಆಗಿದೆ. ಬರೋಬ್ಬರಿ 50 ಲಕ್ಷ ಒಂದು ಹಾಡಿಗೆ ಸನ್ನಿ ಲಿಯೋನ್​​ಗೆ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಇದೆ.

The post ಕೇಳ್ರಪ್ಪೋ ಕೇಳಿ.. ‘ಕಾಟನ್ ಪೇಟೆ ಗೇಟ್’​​​ಗೆ ಬರ್ತಿದ್ದಾಳೆ ಸನ್ನಿ ಲಿಯೋನ್! appeared first on News First Kannada.

Source: newsfirstlive.com

Source link