ಸಿಎಂ ಯಾರೆಂದು ಹೇಳೋದು ಯೂತ್​ ಕಾಂಗ್ರೆಸ್​ ಕೆಲಸ ಅಲ್ಲ -ನಲಪಾಡ್​ಗೆ ರಕ್ಷಾ ರಾಮಯ್ಯ ತಿರುಗೇಟು

ಸಿಎಂ ಯಾರೆಂದು ಹೇಳೋದು ಯೂತ್​ ಕಾಂಗ್ರೆಸ್​ ಕೆಲಸ ಅಲ್ಲ -ನಲಪಾಡ್​ಗೆ ರಕ್ಷಾ ರಾಮಯ್ಯ ತಿರುಗೇಟು

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ‘ನಮ್ಮ ಮುಂದಿನ ಮುಖ್ಯಮಂತ್ರಿ’ ಅಂತಾ ಹೇಳಿರುವ ಕಾಂಗ್ರೆಸ್​ನ ಯುವ ನಾಯಕ ಮೊಹಮ್ಮದ್ ನಲಪಾಡ್​​ಗೆ ಯೂತ್ ಕಾಂಗ್ರೆಸ್​ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ತಿರುಗೇಟು ನೀಡಿದ್ದಾರೆ.

ಹಿರಿಯರು ಕ್ರಮ ತೆಗೆದುಕೊಳ್ತಾರೆ
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಕ್ಷಾ ರಾಮಯ್ಯ.. ಯೂತ್​ ಕಾಂಗ್ರೆಸ್​ ಕೆಲಸ ಯಾರು ಪಿಎಂ ಆಗ್ತಾರೆ? ಯಾರು ಸಿಎಂ ಆಗ್ತಾರೆ ಎಂದು ಹೇಳೋದಲ್ಲ. ಬ್ಲಾಕ್ ಮಟ್ಟದಿಂದ ಪಕ್ಷವನ್ನ ಸಂಘಟಿಸೊದು ನಮ್ಮ ಕೆಲಸ. ಮೊದಲು ಅದನ್ನ ಸರಿಯಾಗಿ ಮಾಡೋಣ. ಈ ರೀತಿ ಮುಂದಿನ ಸಿಎಂ ವಿಚಾರವಾಗಿ ಹೇಳಿಕೆ ನೀಡುವವರ ವಿರುದ್ಧ ಪಕ್ಷದ ಹಿರಿಯರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ಇದನ್ನೂ ಓದಿ: ‘ಮುಂದಿನ ಸಿಎಂ’ ಹೇಳಿಕೆ ಬೆಂಕಿ ತಣ್ಣಗಾಗೋ ಮೊದಲೇ ತುಪ್ಪ ಸುರಿದ ನಲಪಾಡ್

The post ಸಿಎಂ ಯಾರೆಂದು ಹೇಳೋದು ಯೂತ್​ ಕಾಂಗ್ರೆಸ್​ ಕೆಲಸ ಅಲ್ಲ -ನಲಪಾಡ್​ಗೆ ರಕ್ಷಾ ರಾಮಯ್ಯ ತಿರುಗೇಟು appeared first on News First Kannada.

Source: newsfirstlive.com

Source link