ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಚೈತ್ರ ರಾವ್

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಚೈತ್ರ ರಾವ್

ಕನ್ನಡ ನಟಿ, ತೆಲುಗು ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ, ಚೈತ್ರಾರಾವ್ ಇದೀಗ ತಮ್ಮ ಜೀವನದ ಪ್ರಮುಖ ಘಟ್ಟದಲ್ಲಿದ್ದಾರೆ. ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ವಿಶಾಕ ರೋಲ್ ಮೂಲಕ ಜನರಿಗೆ ಪರಿಚಯವಾದ ನಟಿ ಚೈತ್ರ ರಾವ್ ಬಳಿಕ ಕನ್ನಡದಲ್ಲಿ ಕುಸುಮಾಂಜಲಿ, ನಾಗಮಣಿ, ಪೌರ್ಣಮಿ ಹೀಗೆ ಒಂದಿಷ್ಟು ಪಾತ್ರಗಳಿಗೆ ಬಣ್ಣ ಹಚ್ಚಿ ಜನರನ್ನು ರಂಜಿಸಿದ್ರು.

ನಂತ್ರ ತೆಲಗಿನಲ್ಲಿ ಸಾಕಷ್ಟು ಸೀರಿಯಲ್​ಗಳಲ್ಲೂ ಸಖತ್ ಸದ್ದು ಮಾಡಿದ್ರು.. ಅಟ್ಟರಿಂಟುಲೊ ಅಕ್ಕಾಚೆಲ್ಲೆಲೋ.. ಧಾರವಾಹಿಯಲ್ಲಿ ಒಂದೊಳ್ಳೆ ಪಾತ್ರವನ್ನು ಮಾಡ್ತಾಯಿದ್ರು.. ಬಳಿಕಾ ಪರ್ಸನಲ್ ಕಾರಣದಿಂದಾಗಿ ಚೈತ್ರ ಆ ಧಾರವಾಹಿಯನ್ನು ಕ್ವಿಟ್ ಮಾಡಿದ್ರು.
ಹೌದು ಚೈತ್ರ ರಾವ್ ಸೀರಿಯಲ್ನಿಂದ ಹೊರಬರಲು ಮುಖ್ಯ ಕಾರಣ ಅವರು ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂಬುದು.. ತಾಯಿತನ ಎನ್ನುವುದು ಹೆಣ್ಣಿನ ದೊಡ್ಡ ಸ್ಟೇಜ್ ಹಾಗೂ ತುಂಬಾನೆ ಖುಷಿ ಕೊಡುವ ಟೈಮ್ ಅಂತಾನೆ ಹೇಳಬಹುದು.

ಸದ್ಯ ಚೈತ್ರ ಗಂರ್ಭಿಣಿಯಾಗಿದ್ದು, ಫೋಟೊ ಶೂಟ್ ಮಾಡಿಸಿದ್ದಾರೆ.. ಜೊತೆಗೆ ಆ ಫೋಟೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸ್ವೀಟ್ ಲೈನ್ಸ್ ಕೂಡಾ ಬರೆದಿದ್ದಾರೆ.. ಚೈತ್ರ ಅವರ ಫೋಟೋಗೆ ಲೈಕ್ಸ್ ಹಾಗೂ ಕಮೆಂಟ್​ಗಳ ಸುರಿಮಳೆಯೇ ಹರಿದು ಬಂದಿದೆ..
ಕೆಲಸ ಮಾಡಲು ಸಾಕಷ್ಟು ಸಮಯ ಇದೆ. ಕುಟುಂಬ ಮುಖ್ಯ ವಿಷಯವಲ್ಲ, ಅದೇ ಎಲ್ಲ. ನಾನು ಹಾಗೂ ಪ್ರಸನ್ನ ಶೆಟ್ಟಿ ಈ ವಿಷಯ ಹೇಳಲು ತುಂಬ ಖುಷಿಪಡುತ್ತೇವೆ. ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ, ಪ್ರೀತಿ ಇರಲಿ. ನನ್ನ ಜೀವನದ ಸುಂದರವಾದ ಹಂತವನ್ನು ಅನುಭವಿಸುತ್ತಿದ್ದೇನೆ” ಎಂದು ನಟಿ ಚೈತ್ರಾ ರಾವ್ ಬರೆದಿದ್ದಾರೆ.. ಒಟ್ಟಿನಲ್ಲಿ ಜೀವನದ ಪ್ರಮುಖ ಘಟ್ಟವನ್ನು ತಲುಪಿರು ಚೈತ್ರ ಅವರು ಮುಂದೆಯೂ ಹೀಗೆ ಖುಷಿಯಾಗಿರಲಿ ಹಾಗೂ ತಾವು ಅಂದುಕೊಂಡಂತೆ ಆಗಲಿ ಎಂದು ಆಶಿಸೋಣ.

The post ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಚೈತ್ರ ರಾವ್ appeared first on News First Kannada.

Source: newsfirstlive.com

Source link