ನೀವು ಕಾರ್ ಗೆದ್ದಿದ್ದೀರಿ ಎಂದವರಿಂದ 35 ಸಾವಿರ ದೋಖಾ.. ಆನ್​ಲೈನ್​ ಶಾಪಿಂಗ್​ ಪ್ರಿಯರೇ ಹುಷಾರ್

ನೀವು ಕಾರ್ ಗೆದ್ದಿದ್ದೀರಿ ಎಂದವರಿಂದ 35 ಸಾವಿರ ದೋಖಾ.. ಆನ್​ಲೈನ್​ ಶಾಪಿಂಗ್​ ಪ್ರಿಯರೇ ಹುಷಾರ್

ಬೆಂಗಳೂರು: ಆನ್​ಲೈನ್​ ಶಾಪಿಂಗ್​ ಪ್ರಿಯರೇ ಹುಷಾರ್​! ಡಿಜಿಟಲ್​ ದುನಿಯಾದಲ್ಲಿ ನಾವೆಷ್ಟೇ ಕೇರ್​ ತಗೊಂಡು ಡೀಲ್​ ಮಾಡಿದ್ರೂ, ಮೋಸ ಹೋಗುವ ಪ್ರಕರಣಗಳು ಮಾತ್ರ ಕಡಿಮೆಯಾಗೋದಿಲ್ಲ. ಯಾಕಂದ್ರೆ ಮೋಸ ಹೋಗೋರು ಇರೋ ತನಕ ಮೋಸ ಮಾಡೋರು ಇದ್ದೆ ಇರ್ತಾರೆ ಅನ್ಮೋ ಲೆಜೆಂಡರಿ ಗಾದೆ ಶುದ್ಧ ಸತ್ಯ. ಯಾಕಪ್ಪ ಹೀಗೆ ಹೇಳ್ತಿದ್ದೀವಿ ಅಂತಾ ಕನ್ಪ್ಯೂಸ್​ ಆದ್ರಾ? ಹಾಗಾದ್ರೆ ಈ ಸ್ಟೋರಿ ಓದಿ.

ನಗರದ ಗೃಹಿಣಿಯೊಬ್ಬರು ಆನ್​ಲೈನ್​ ಶಾಪಿಂಗ್​ ನಂಬಿ ಬರೋಬ್ಬರಿ 35 ಸಾವಿರ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಲಾಕ್​ಡೌನ್​ನಲ್ಲಿ ಹೊರಗಡೆ ಹೋಗೊಕೆ ಆಗಲ್ಲ ಅಂತ ಮನೆಯಲ್ಲಿಯೇ ಕೂತ್ಕೊಂಡು ಶಾಪಿಂಗ್​ ಮಾಡ್ತಿದ್ದ ಇವರಿಗೆ ನೀವು ಲಕ್ಕಿ ಡ್ರಾ ಕೂಪನ್​ನಲ್ಲಿ ಕಾರು ಗೆದ್ದಿದ್ದೀರಾ ಎಂದು ಮೊಬೈಲ್​ಗೆ ಕರೆ ಬಂದಿದೆ.

ಸಾಮಾನ್ಯವಾಗಿ ಇಂತ ಕರೆಗಳೆಲ್ಲಾ ಫೇಕ್​ ಎಂದುಕೊಂಡು ಸುಮ್ಮನಿದ್ದಾರೆ, ಆದ್ರೆ ಚಾಲಾಕಿ ವಂಚಕರು ಬಿಟ್ಟೂ ಬಿಡದೆ ಕರೆ ಮಾಡಿ ನಿಮ್ಮ ಹೆಸರಲ್ಲಿ ಕಾರ್​ ರಿಜಿಸ್ಟ್ರೇಶನ್​ ಮಾಡಬೇಕು ನಿಮ್ಮ ಆಧಾರ ಕಾರ್ಡ್​, ಪ್ಯಾನ್​ ಕಾರ್ಡ್​ ಕಳಿಸಿ ಎಂದಾಗ ನಂಬಿದ್ದಾರೆ. ಅಷ್ಟೇ ಅಲ್ಲದೇ ಕರೆ ಮಾಡಿದವನು ನಾನು ಎಸ್​.ಬಿ.ಐ ನ ಚೀಫ್ ಸೆಕ್ಯೂರಿಟಿ ಎಂದು ನಂಬಿಸಿ ಫೇಕ್​ ಐಡಿ ಕಾರ್ಡ್​ ಕಳಿಸಿದ್ದನಂತೆ. ಈ ಮೊದ್ಲೇ ಹೇಳಿದಂತೆ ಕಾರನ ರಿಜಿಸ್ಟ್ರೇಶನ್​ ಮಾಡಲು 35ಸಾವಿರ ಹಣ ಕಳಿಸಿ ಎಂದಾಗ ಗೃಹಿಣಿ ಕಳಿಸಿದ್ದಾರೆ. ಬಳಿಕ ಹಣ ಕಳಿಸುವಂತೆ ಪದೇ ಪದೇ ಕರೆ ಬಂದಾಗ ಸಂಶಯ ವ್ಯಕ್ತವಾಗಿ ಸೈಬರ್​ ಕ್ರೈಂ ಮೊರೆ ಹೋಗಿದ್ದಾರೆ. ಈ ಕುರಿತು ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಮೋಸ ಹೋದ ಗೃಹಿಣಿ ವಿನೋದಾ, ಲಾಟರಿ, ಕೂಪನ್​ ಡ್ರಾನಂತಹ ಕರೆಗಳಿಗೆ ಕಿವಿಗೊಡಬೇಡಿ ಮತ್ತು ದಯವಿಟ್ಟು ಯಾರು ಆನ್​ಲೈನ್​ ಶಾಪಿಂಗ್​ ಮಾಡ್ಲೇಬೇಡಿ ಎಂದಿದ್ದಾರೆ.

The post ನೀವು ಕಾರ್ ಗೆದ್ದಿದ್ದೀರಿ ಎಂದವರಿಂದ 35 ಸಾವಿರ ದೋಖಾ.. ಆನ್​ಲೈನ್​ ಶಾಪಿಂಗ್​ ಪ್ರಿಯರೇ ಹುಷಾರ್ appeared first on News First Kannada.

Source: newsfirstlive.com

Source link