ಕೇಂದ್ರ ಸಚಿವೆಯಾದ ರಾಜ್ಯದ 5 ನೇ ಮಹಿಳೆ ಶೋಭಾ ಕರಂದ್ಲಾಜೆ.. ಅವರ ರಾಜಕೀಯ ಹಿನ್ನೆಲೆ ಏನು..?

ಕೇಂದ್ರ ಸಚಿವೆಯಾದ ರಾಜ್ಯದ 5 ನೇ ಮಹಿಳೆ ಶೋಭಾ ಕರಂದ್ಲಾಜೆ.. ಅವರ ರಾಜಕೀಯ ಹಿನ್ನೆಲೆ ಏನು..?

ದಕ್ಷಿಣ ಕನ್ನಡ: ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶೋಭಾ ಕರಂದ್ಲಾಜೆ ಅವರ ರಾಜಕೀಯದ ಕಂಪ್ಲೀಟ್ ಡೀಟೈಲ್ಸ್ ಹೀಗಿದೆ.

 1. ಶೋಭಾ ಕರಂದ್ಲಾಜೆಯವರು 1966, 23 ರ ಅಕ್ಟೋಬರ್‌‌ನಲ್ಲಿ ಪುತ್ತೂರು ಸಮೀಪದ ಚಾರ್ವಾಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ಬಾಲ್ಯದಿಂದಲೇ ಅವರು ಆರ್‌ಎಸ್‌ಎಸ್‌ನ ಒಡನಾಟ ಇಟ್ಟುಕೊಂಡಿದ್ದರು.
 2. 2004ರಲ್ಲಿ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯೆಯಾಗಿ ಆಯ್ಕೆಯಾದರು.
 3. ಬಳಿಕ 2008ರಲ್ಲಿ ಮೊದಲ ಬಾರಿಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಿ ಶಾಸಕಿಯಾಗಿ ಪ್ರವೇಶ ಪಡೆದರು.
 4. ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪರ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದರು.
 5. ಬಳಿಕ ಇಂಧನ ಖಾತೆಯನ್ನೂ ನಿಭಾಯಿಸಿದರು.
 6. 2013ರ ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತೊರೆದಿದ್ದ ಶೋಭಾ ಕರಂದ್ಲಾಜೆ, ಕೆಜೆಪಿ ಸೇರ್ಪಡೆ.
 7. 2013 ರಲ್ಲಿ ಕೆಜೆಪಿಯಿಂದ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಫರ್ಧಿಸಿ ಪರಾಭವಗೊಂಡಿದ್ದರು.
 8. 2014 ರಲ್ಲಿ ಕೆಜೆಪಿ ಬಿಟ್ಟು, ಬಿಜೆಪಿ ಸೇರ್ಪಡೆಯಾಗಿ, ಮೊದಲ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದರು.
 9. 2014 ರಲ್ಲಿ ಮೊದಲ ಬಾರಿಗೆ ಉಡುಪಿ-ಚಿಕ್ಕಮಗಳೂರು ಸಂಸದರಾಗಿ ಚುನಾಯಿತರಾದರು.
 10. 2019 ರಲ್ಲೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಎರಡನೇ ಬಾರಿ ಸಂಸದರಾಗಿ ಆಯ್ಕೆಗೊಂಡರು.
 11. ಈಗ ಮೊದಲ ಬಾರಿಗೆ ಕೇಂದ್ರ ಸಂಪುಟ ಸೇರ್ಪಡೆಯಾಗುತ್ತಿದ್ದಾರೆ.
 12. ಇನ್ನು ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದಿಂದ 5 ನೇ ಮಹಿಳಾ ಸಚಿವರಾಗಿ ಶೋಭಾ ಕರಂದ್ಲಾಜೆ ಸ್ಥಾನಮಾನ ಗಿಟ್ಟಿಸಿಕೊಂಡಿದ್ದಾರೆ.

The post ಕೇಂದ್ರ ಸಚಿವೆಯಾದ ರಾಜ್ಯದ 5 ನೇ ಮಹಿಳೆ ಶೋಭಾ ಕರಂದ್ಲಾಜೆ.. ಅವರ ರಾಜಕೀಯ ಹಿನ್ನೆಲೆ ಏನು..? appeared first on News First Kannada.

Source: newsfirstlive.com

Source link