ಎ. ನಾರಾಯಣ ಸ್ವಾಮಿ ಕೇಂದ್ರ ಸಚಿವರಾಗಿದ್ದೇ ರೋಚಕ.. ತಳಮಟ್ಟದಿಂದ ಬಂದ ಕಾರ್ಯಕರ್ತ

ಎ. ನಾರಾಯಣ ಸ್ವಾಮಿ ಕೇಂದ್ರ ಸಚಿವರಾಗಿದ್ದೇ ರೋಚಕ.. ತಳಮಟ್ಟದಿಂದ ಬಂದ ಕಾರ್ಯಕರ್ತ

ಚಿತ್ರದುರ್ಗ: ಪ್ರಧಾನಿ ಮೋದಿಯ ನೂತನ ಕ್ಯಾಬಿನೆಟ್​ಗೆ ಸಚಿವರಾಗಿ 43 ಮಂದಿ ನಾಯಕರು ಆಯ್ಕೆಯಾಗಿದ್ದು ಈ ಪೈಕಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ. ನಾರಾಯಣಸ್ವಾಮಿ ಸ್ಥಾನ ಪಡೆದುಕೊಂಡಿದ್ದಾರೆ. ಆನೇಕಲ್ ಮೂಲದ ನಾರಾಯಣಸ್ವಾಮಿಯವರ ರಾಜಕೀಯ ಬದುಕಿನ ಚಿತ್ರಣ ಇಲ್ಲಿದೆ..

ಕೌಟುಂಬಿಕ ಜೀವನ
ಎ. ನಾರಾಯಣಸ್ವಾಮಿಯವರು ಆನೇಕಲ್​ನಲ್ಲಿ ಅಬ್ಬಯ್ಯ ಹಾಗೂ ಶ್ರೀಮತಿ ತಿಮ್ಮಕ್ಕ ಎಂಬ ದಂಪತಿಗಳ ಪುತ್ರರಾಗಿ 16-05-1957 ರಲ್ಲಿ ಜನ್ಮ ತಾಳಿದರು. ನಾರಾಯಣಸ್ವಾಮಿಯವರಿಗೆ ಶ್ರೀಮತಿ ವಿಜಯಲಕ್ಷ್ಮಿ ಅವರೊಂದಿಗೆ ವಿವಾಹವಾಗಿದ್ದು ಶೀಥಲ್, ಕೌಶಲ್, ಸಿರೀಶ ಎಂಬ ಮೂವರು ಹೆಣ್ಣುಮಕ್ಕಳ ತಂದೆಯಾಗಿದ್ದಾರೆ.

blank

ವೃತ್ತಿ: ಕೃಷಿ, ವ್ಯಾಪಾರ, ಸಮಾಜಸೇವೆ ಮತ್ತು ರಾಜಕೀಯ

ರಾಜಕೀಯ ಅನುಭವ..

  1. ಆನೇಕಲ್ ಪುರಸಭಾ ಸದಸ್ಯರಾಗಿ 1996 ರಲ್ಲಿ ‌ಆಯ್ಕೆಯಾಗಿದ್ದರು.
  2. 4 ಬಾರಿ ವಿಧಾನ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1997, 1998, 2004 ಹಾಗು2008 ರಲ್ಲಿ ಆಯ್ಕೆಯಾಗಿದ್ದಾರೆ.

ಸಚಿವರಾಗಿ ಅನುಭವ

  1. ಸಮಾಜಕಲ್ಯಾಣ ಸಚಿವ ಹಾಗೂ ಬಂದೀಖಾ‌ನೆ ಸಚಿವರಾಗಿ 2010 ರಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದಾರೆ.
  2. ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಗೆ ಸೇವೆ ಸಲ್ಲಿಸಿದ್ದಾರೆ.
  3. ಚಿತ್ರದುರ್ಗ ಲೋಕಸಭಾ ಸದಸ್ಯರಾಗಿ 2019 ರಲ್ಲಿ ಆಯ್ಕೆಯಾಗಿ ಪ್ರಸ್ತುತ ಕೋಟೆನಾಡಿಗೆ ಭದ್ರೆ ನೀರನ್ನು ಹರಿಸಲು ಶ್ರಮ ವಹಿಸಿರುತ್ತಾರೆ.

The post ಎ. ನಾರಾಯಣ ಸ್ವಾಮಿ ಕೇಂದ್ರ ಸಚಿವರಾಗಿದ್ದೇ ರೋಚಕ.. ತಳಮಟ್ಟದಿಂದ ಬಂದ ಕಾರ್ಯಕರ್ತ appeared first on News First Kannada.

Source: newsfirstlive.com

Source link