ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ ಗಾಯಕ ನಿಹಾಲ್‌.. ಬಾಲಿವುಡ್​​ನಲ್ಲೂ ಮಾಡ್ತಾರಾ ಕಮಾಲ್..?

ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ ಗಾಯಕ ನಿಹಾಲ್‌.. ಬಾಲಿವುಡ್​​ನಲ್ಲೂ ಮಾಡ್ತಾರಾ ಕಮಾಲ್..?

ನಿಹಾಲ್‌ ತಾವ್ರೋ.. ನೀವೆಲ್ಲಾ ಈ ಪ್ರತಿಭೆಯನ್ನ ಸರಿಗಮಪದಲ್ಲಿ ನೋಡಿದ್ದೀರಿ. ಈ ಗಾಯಕನ ಹಾಡು ಕೇಳಿ ಮೆಚ್ಚಿದ್ದೀರಿ. ಈಗ ಕನ್ನಡದ ಈ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದೆ.

ಹೌದು, ನಿಹಾಲ್ ತಾವ್ರೋ ಇಂಡಿಯನ್‌ ಐಡಲ್‌ ಸೀಸನ್‌ 12ರ ಸ್ಪರ್ಧಿಯಾಗಿರೋ ವಿಚಾರವನ್ನ ನಿಮ್ಗೆ ಹೇಳಿದ್ವಿ. ಹೊಸ ವಿಷ್ಯ ಏನಂದ್ರೆ, ನಿಹಾಲ್ ಈಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್‌ನ ಘಟಾನುಘಟಿಗಳು ಕೂಡ ನಿಹಾಲ್‌ನ ಪ್ರತಿಭೆಗೆ ಮೂಕವಿಸ್ಮಿತರಾಗಿದ್ದಾರೆ.

ಇತ್ತೀಚೆಗೆ ನಿಹಾಲ್ ನೀಡಿದ ಸಂದರ್ಶನದಲ್ಲಿ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ವಿಶೇಷವಾಗಿರೋದು ಸ್ಪರ್ಧಿಗಳ ಜೊತೆಗಿನ ಬಾಂಡಿಂಗ್‌. ಈ ಬಗ್ಗೆ ಮಾತನಾಡಿರೋ ನಿಹಾಲ್‌, ಇಂಡಿಯನ್ ಐಡಲ್‌ ನನಗೆ ಫ್ಯಾಮಿಲಿಯಿದ್ದ ಹಾಗೆ, ಸ್ಪರ್ಧಿಯಿದ್ದರೂ ಸ್ಪರ್ಧಿಗಳ ಜೊತೆಗಿನ ಅನುಬಂಧ ಹೆಚ್ಚಿದೆ. ಫ್ಯಾಮಿಲಿಗಿಂತ ಹೆಚ್ಚು ಸಮಯವನ್ನ ನಾನು ಅವರ ಜೊತೆ ಸ್ಪೆಂಡ್ ಮಾಡ್ತೀನಿ. ನನಗಂತೂ ಹೊಸ ಫ್ಯಾಮಿಲಿನೇ ಸಿಕ್ಕಿದೆ ಅಂತಾ ಹೇಳಿಕೊಂಡಿದ್ದಾರೆ.

ಸರಿಗಮಪ ಶೋ ಬಗ್ಗೆಯೂ ಮಾತನಾಡಿರೋ ನಿಹಾಲ್‌, ಇಂಡಿಯನ್‌ ಐಡಲ್‌ನಲ್ಲಿ ಸ್ಪರ್ಧಿಯಾಗೋದು ನನ್ನ ಕನಸಾಗಿತ್ತು. ಇದಕ್ಕೂ ಮುನ್ನ ನಾನು ಒಂದು ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದೆ. ಅದರ ಅನುಭವ ನನಗೆ ಇಲ್ಲಿ ಸಹಕಾರಿಯಾಗಿದೆ. ಈ ಶೋನಲ್ಲಿ ಬೇರೆ ಬೇರೆ ಹಾಡುಗಳನ್ನ ಹಾಡೋದನ್ನ ನಾನು ಕಲಿತೆ. ಫಾಸ್ಟ್ ನಂಬರ್ಸ್‌ ರೊಮ್ಯಾಂಟಿಕ್‌ ಹೀಗೇ ನಾನಾ ತರಹದ ಹಾಡುಗಳನ್ನ ನಾನು ಇಲ್ಲಿ ಚೆನ್ನಾಗಿ ಕಲಿತೆ. ಅದರ ಬಗ್ಗೆ ನನಗೆ ಖುಷಿಯಿದೆ ಅಂತಾ ಹೇಳಿಕೊಂಡಿದ್ದಾರೆ.

ಇನ್ನು ಅವಿಸ್ಮರಣೀಯ ಕ್ಷಣ ಯಾವುದು ಅಂತಾ ಕೇಳಿದಾಗ ನಿಹಾಲ್‌ ಹೇಳಿದ್ದು ಯಾವುದು ಗೊತ್ತಾ? ಆಡಿಷನ್‌ನಲ್ಲಿ ಹಾಡಿದಾಗ ಸಂಗೀತ ನಿರ್ದೇಶಕ ಹಿಮೇಶ್ ರೆಶಮಿಯಾ ಹಾಡಲು ಅವಕಾಶ ನೀಡ್ತೀನಿ ಎಂದು ಹೇಳಿದ್ದು, ನಂತರ ಅವಕಾಶ ನೀಡಿದ್ದು ನನಗೆ ಮರೆಯಲಾಗದ ಕ್ಷಣ ಎಂದು ಬಣ್ಣಿಸಿದ್ದಾರೆ.

ಇನ್ನೂ ಒಂದು ರಿಯಾಲಿಟಿ ಶೋ ಅಂದ್ಮೇಲೆ ನೆಗೆಟಿವ್ ಕಮೆಂಟ್ಸ್‌ ಇದ್ದೇ ಇರುತ್ತದೆ. ಈ ಬಗ್ಗೆ ಮಾತನಾಡಿರೋ ನಿಹಾಲ್‌, ನೆಗೆಟಿವ್ ಕಾಮೆಂಟ್ಸ್‌ನ ನಾನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಕನ್ನಡದ ಹಿರಿಮೆಯನ್ನ ರಾಷ್ಟ್ರಮಟ್ಟದಲ್ಲಿ ಹೆಚ್ಚಿಸುತ್ತಿರೋ ನಿಹಾಲ್ ತಾವ್ರೋ ಬಾಲಿವುಡ್‌ನಲ್ಲಿ ಖಾಯಂ ಗಾಯಕನಾಗಲಿ ಅನ್ನೋದೇ ನಮ್ಮ ಆಶಯ. ಆಲ್‌ ದಿ ಬೆಸ್ಟ್ ನಿಹಾಲ್.

The post ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ ಗಾಯಕ ನಿಹಾಲ್‌.. ಬಾಲಿವುಡ್​​ನಲ್ಲೂ ಮಾಡ್ತಾರಾ ಕಮಾಲ್..? appeared first on News First Kannada.

Source: newsfirstlive.com

Source link