ನನಗೆ ವಯಸ್ಸಾಗಿದೆ, ಸಚಿವನಾಗಲು ಅನರ್ಹ: ಸಂಸದ ಜಿ.ಎಸ್.ಬಸವರಾಜು

ತುಮಕೂರು: ನನಗೆ 82 ವರ್ಷ ವಯಸ್ಸಾಗಿದ್ದು, ನಾನು ಸಚಿವನಾಗಲು ಅನರ್ಹನಾಗಿದ್ದೇನೆ ಎಂದು ಹಿರಿಯ ಸಂಸದ ಜಿ.ಎಸ್.ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸಂಪುಟ ಪುನಾರಚನೆಯಲ್ಲಿ ನಿಮಗೆ ಸಚಿವ ಸ್ಥಾನ ಕೈತಪ್ಪಿದೆಯಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಜಿ.ಎಸ್.ಬಸವರಾಜು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. 81 ವರ್ಷದ ನನಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದಾರೆ. ದೇವೇಗೌಡರನ್ನು ಚುನಾವಣೆಯಲ್ಲಿ ಸೋಲಿಸಿದ್ದೇ ನನಗೆ ಮಂತ್ರಿಗಿರಿಗಿಂತ ಹೆಚ್ಚು ಎಂದು ಪ್ರತಿಕ್ರಿಯಿಸಿದ್ದಾರೆ.

ನಾನು ಹಿರಿಯ ಸಂಸದನಾಗಿರೋದು ಸತ್ಯ ಆದರೆ ನನಗೆ ವಯಸ್ಸಾಗಿರೋದ್ರಿಂದಲೇ ಮಂತ್ರಿಗಿರಿ ತಪ್ಪಿದೆ ಹೊರತು ಬೇರೆ ಕಾರಣದಿಂದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶೋಭಾ ಕರಂದ್ಲಾಜೆಗೆ ಮಂತ್ರಿ ಸ್ಥಾನ ಸಿಕ್ಕಿರೋದು ಖುಷಿಯ ವಿಚಾರ ಆಕೆ ಧೈರ್ಯಶಾಲಿ ಮಹಿಳೆಯಾಗಿದ್ದಾಳೆ. ಅದರಂತೆ ಸದಾನಂದ ಗೌಡರೂ ಒಳ್ಳೆಯವರು ಆದರೂ ಸಂಪುಟ ಪುನಾರಚನೆ ಅನಿವಾರ್ಯ ಆದ್ದರಿಂದ ಅವರು ರಾಜೀನಾಮೆ ಕೊಡಬೇಕಾಯಿತು ಎಂದರು.

The post ನನಗೆ ವಯಸ್ಸಾಗಿದೆ, ಸಚಿವನಾಗಲು ಅನರ್ಹ: ಸಂಸದ ಜಿ.ಎಸ್.ಬಸವರಾಜು appeared first on Public TV.

Source: publictv.in

Source link