ಅಕ್ರಮ ನಡೆದಿರೋದನ್ನ ನಾನೇ ಬಂದು ತೋರಿಸಬೇಕಾ.?- ಅಧಿಕಾರಿಗೆ ಸುಮಲತಾ ತರಾಟೆ

ಅಕ್ರಮ ನಡೆದಿರೋದನ್ನ ನಾನೇ ಬಂದು ತೋರಿಸಬೇಕಾ.?- ಅಧಿಕಾರಿಗೆ ಸುಮಲತಾ ತರಾಟೆ

ಮಂಡ್ಯ: ಅಕ್ರಮ ಗಣಿಗಾರಿಕೆ ನಡೆದಿರೋದನ್ನ ನಾನೇ ಬಂದು ತೋರಿಸಬೇಕಾ ಅಂತಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ ಸಂಸದೆ ಸುಮಲತಾ ತರಾಟೆ ತೆಗೆದುಕೊಂಡಿದ್ದಾರೆ.

ಚೆನ್ನನಕೆರೆ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ. ಅಕ್ರಮದ ವಿರುದ್ಧ ಎಷ್ಟು ಫೈನ್ ಹಾಕಿದ್ದೀರಾ..? ಏನು ಕ್ರಮ ಆಗಿದೆ.? ನಿನ್ನೆಯೂ ಇಲ್ಲಿ ಗಣಿ ಚಟುವಟಿಕೆ ನಡೆದಿದೆ.. ದೊಡ್ಡ ದೊಡ್ಡ ಟ್ರಕ್‌ಗಳು ಓಡಾಡಿರುವ ಗುರುತು ಕಾಣ್ತಿದೆ. ಮೀಟಿಂಗ್‌‌ನಲ್ಲಿ ಕುಳಿತು ಸುಲಭವಾಗಿ ಹೇಳುತ್ತೀರಾ.. ಇಲ್ಲಿ ಏನು ನಡೀತಿಲ್ಲಾ ಅಂತ.. ನೀವು ಅಕ್ರಮದ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಾ.? ಎಂದು ಸಂಸದೆ ಸುಮಲತಾ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.

The post ಅಕ್ರಮ ನಡೆದಿರೋದನ್ನ ನಾನೇ ಬಂದು ತೋರಿಸಬೇಕಾ.?- ಅಧಿಕಾರಿಗೆ ಸುಮಲತಾ ತರಾಟೆ appeared first on News First Kannada.

Source: newsfirstlive.com

Source link