ಮೋದಿ ಸಂಪುಟ ಸೇರಿದ ಎಂಜಿನಿಯರಿಂಗ್ ಪದವೀಧರ ಭಗವಂತ್ ಖೂಬಾ

ಮೋದಿ ಸಂಪುಟ ಸೇರಿದ ಎಂಜಿನಿಯರಿಂಗ್ ಪದವೀಧರ ಭಗವಂತ್ ಖೂಬಾ

ನವದೆಹಲಿ: ರಾಜ್ಯದ ಬಿಜೆಪಿ ನಾಯಕ ಭಗವಂತ್ ಖೂಬಾ ಅವರು ಇಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಪ್ರತಿಜ್ಞಾವಿಧಿ ಭೋದಿಸಿದರು.

ಭಗವಂತ ಗುರುಬಸಪ್ಪ ಖೂಬಾ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಇವರು ಬೀದರ್ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು ತುಮಕೂರಿನ ಸಿದ್ಧಗಂಗಾ ಇನ್ಸ್​ಟಿಟ್ಯೂಟ್​ ಆಫ್ ಟೆಕ್ನಾಲಜಿಯಿಂದ ತಮ್ಮ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇವರು ಆರಂಭಿಕ ದಿನಗಳಿಂದಲೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ.

ವಯಕ್ತಿಕ ಜೀವನ

  • ಪೂರ್ಣ ಹೆಸರು: ಭಗವಂತ ಖೂಬಾ
  • ಜನ್ಮ ದಿನಾಂಕ: 01 Jun 1967 (54 )
  • ಹುಟ್ಟಿದ ಸ್ಥಳ: ಔರಾದ್, ಬೀದರ್ ಜಿಲ್ಲೆ, ಕರ್ನಾಟಕ
  • ಪಕ್ಷ: ಬಿಜೆಪಿ
  • ಉದ್ಯೋಗ: ಕೃಷಿಕ, ಸಾಮಾಜಿಕ ಕಾರ್ಯಕರ್ತ
  • ತಂದೆಯ ಹೆಸರು: ಗುರುಬಸಪ್ಪ ಖೂಬಾ
  • ತಾಯಿಯ ಹೆಸರು: ಮಹಾದೇವಿ ಖೂಬಾ
  • ಅವಲಂಬಿತರ ಹೆಸರು: ಶ್ರೀಮತಿ ಶೀಲಾ ಖೂಬಾ
  • ಮಕ್ಕಳು: 1 ಪುತ್ರ, 2 ಪುತ್ರಿಯರು

2014ರ ಲೋಕಸಭಾ ಚುನಾವಣೆಯಲ್ಲಿ ಭಗವಂತ್ ಖೂಬಾ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿಯ ಉನ್ನತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗ ಗುರು ಬಾಬಾ ರಾಮದೇವ್ ಅವರಿಗೆ ತೀರಾ ನಿಕಟವಾಗಿದ್ದಾರೆ. ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ವಿರುದ್ಧ ಮತ್ತೆ ಜಯ ಸಾಧಿಸಿದ್ದಾರೆ.

ರಾಜಕೀಯ ಹಾದಿ:
2014 ರಲ್ಲಿ ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಎನ್.ಧರಂ ಸಿಂಗ್ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು. 19 ಅಕ್ಟೋಬರ್ 2016 ರಲ್ಲಿ ಆಹಾರ, ಗ್ರಾಹಕ ವ್ಯವಹಾರ ಮತ್ತು ಪಡಿತರ ಸರಬರಾಜು ಸ್ಥಾಯಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಸೆಪ್ಟೆಂಬರ್ 15, 2014ರಲ್ಲಿ ಲೋಕಸಭಾ ಸದಸ್ಯರಿಗೆ ಕಂಪ್ಯೂಟರ್ ನೀಡಲು ಪರಾಮರ್ಶೆ ಸಮಿತಿಯ ಸದಸ್ಯರಾಗಿಯಾಗಿದ್ದರು.

ಸೆಪ್ಟೆಂಬರ್ 15, 2014 ರಲ್ಲಿ ರೈಲ್ವೆ ಖಾತೆ ಸಲಹಾ ಸಮಿತಿಯ ಸದಸ್ಯರಾದರಾಗಿಯೂ ಸೇವೆ ಸಲ್ಲಿಸಿರುವ ಅವರು ಏಪ್ರಿಲ್ 3, 2018 ರಲ್ಲಿ ಯೋಜನೆ ಮತ್ತು ಆರ್ಕಿಟೆಕ್ಚರ್ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

The post ಮೋದಿ ಸಂಪುಟ ಸೇರಿದ ಎಂಜಿನಿಯರಿಂಗ್ ಪದವೀಧರ ಭಗವಂತ್ ಖೂಬಾ appeared first on News First Kannada.

Source: newsfirstlive.com

Source link