ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜೀವ್ ಚಂದ್ರಶೇಖರ್

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜೀವ್ ಚಂದ್ರಶೇಖರ್

ಬೆಂಗಳೂರು: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್​ ಅವರು ಇಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.

ಸತತ 3ನೇ ಬಾರಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಅವರು ಕಳೆದ 15 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ಸಂಸತ್​ ಪ್ರವೇಶ ಮಾಡಿದರು. ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ, ವಿಷನ್​- 2025 ಸಮಿತಿ ಸಂಚಾಲಕರಾಗಿ ಸಾರ್ವಜನಿಕ ಲೆಕ್ಕ, ಆರ್ಥಿಕ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಇದೆ. ಜೊತೆಗೆ ಪುದುಚೇರಿ ಚುನಾವಣೆ ಉಸ್ತುವಾರಿಯನ್ನ ವಹಿಸಿಕೊಂಡು ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ.

ಯಶಸ್ವಿ ಉದ್ಯಮಿಯೂ ಹೌದು
ರಾಜೀವ್ ಚಂದ್ರಶೇಖರ್ ಅವರು ಯಶಸ್ವಿ ಉದ್ಯಮಿ ಕೂಡ ಆಗಿದ್ದಾರೆ. ಅಮೆರಿಕದಲ್ಲಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇಂಟೆಲ್​ ಪೆಂಟಿಯಮ್ ಚೀಫ್ ಆವಿಷ್ಕಾರದ ಟೀಂನಲ್ಲಿ ರಾಜೀವ್ ಚಂದ್ರಶೇಖರ್ ಇದ್ದರು. ಬಿಪಿಎಲ್ ಇಂಡಿಯಾ ಸಂಸ್ಥಾಪಕ, ಜ್ಯುಪಿಟರ್ ಕ್ಯಾಪಿಟಲ್​ ಸಂಸ್ಥೆಯ ಚೇರ್ಮನ್, ವಿವೇಕಾನಂದ ಇಂಟರ್​ ನ್ಯಾಷನಲ್ ಫೌಂಡೇಷನ್ ಸ್ಥಾಪಕರಾಗಿದ್ದಾರೆ.

ಅಲ್ಲದೇ ಕಿರಿಯ ವಯಸ್ಸಿಗೆ ಎಫ್​ಐಸಿಸಿಐ (Federation of Indian Chambers of Commerce & Industry) ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆ ಇವರದ್ದಾಗಿದೆ. ರೇರಾ ಆಯ್ಕೆ ಮತ್ತು ಜಿಎಸ್​ಟಿ ಸಮಿತಿಯಲ್ಲೂ ಸದಸ್ಯರೂ ಕೂಡ ಆಗಿದ್ದಾರೆ.

ಪ್ರಮುಖ ಹೋರಾಟ 
ರಾಜೀವ್ ಚಂದ್ರಶೇಖರ್ ಅವರು ರಾಷ್ಟ್ರೀಯ ಸೇನಾ ಸ್ಮಾರಕ ನಿರ್ಮಾಣಕ್ಕಾಗಿ ಹೋರಾಟ ಮಾಡಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಜಾರಿ ಬರುವಲ್ಲಿ ಇವರ ಪರಿಶ್ರಮವೂ ಇದೆ. ‘ಒನ್ ಱಂಕ್​ ಒನ್ ಪೆನ್ಷನ್’​ ಜಾರಿ ಹಿಂದಿನ ರೂವಾರಿಯಾಗಿದ್ದಾರೆ. ಪ್ಲಾನ್ ಬೆಂಗಳೂರು -2020 ಯೋಜನೆಯ ನೇತೃತ್ವವನ್ನ ವಹಿಸಿಕೊಂಡಿದ್ದಾರೆ. ಆಧಾರ್ ಕಾರ್ಡ್​​ ಪರಿಣಾಮಕಾರಿ ಜಾರಿಗೆ ಕೇಂದ್ರಕ್ಕೆ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಎಎ, ‘ಒಂದು ದೇಶ, ಒಂದು ಚುನಾವಣೆ’ ಜಾರಿಗೆ ಹೋರಾಟವನ್ನ ಮುಂದುರಿಸಿದ್ದಾರೆ.

The post ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜೀವ್ ಚಂದ್ರಶೇಖರ್ appeared first on News First Kannada.

Source: newsfirstlive.com

Source link