ರಾಜ್ಯದಲ್ಲಿ 1.64%ಗೆ ಇಳಿದ ಕೊರೊನಾ ಪಾಸಿಟಿವಿಟಿ: ಇಂದು 2,743 ಮಂದಿಗೆ ಸೋಂಕು ದೃಢ

ರಾಜ್ಯದಲ್ಲಿ 1.64%ಗೆ ಇಳಿದ ಕೊರೊನಾ ಪಾಸಿಟಿವಿಟಿ: ಇಂದು 2,743 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 33,510 ಱಪಿಡ್ ಆ್ಯಂಟಿಜೆನ್ ಟೆಸ್ಟ್, 1,33,121 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,66,631 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 2,743 ಮಂದಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 28,62,338ಕ್ಕೆ ಏರಿಕೆಯಾಗಿದೆ.

ಇಂದು 3,081 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಈವರೆಗೆ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 27,87, 111ಕ್ಕೆ ಏರಿದೆ. ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು 75 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 35,601 ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 39,603 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ರನ್ನ ಬುಲೆಟಿನ್​ನಲ್ಲಿ ಹೇಳಿದೆ.

ಬೆಂಗಳೂರು ನಗರದಲ್ಲಿ ಇಂದು 611 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದರೆ 12 ಮಂದಿ ಸೋಂಕಿನಿಂದ ಸಾವನ್ಪಪ್ಪಿದ್ದಾರೆ. ಚಿಕ್ಕಮಗಳೂರು 151, ದಕ್ಷಿಣ ಕನ್ನಡ 304, ಹಾಸನ 220, ಕೊಡಗು 148, ಮೈಸೂರು 248, ಶಿವಮೊಗ್ಗ 149, ತುಮಕೂರು 112 ಹಾಗೂ ಉಡುಪಿ ಜಿಲ್ಲೆಯಲ್ಲಿ 101 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

blank

The post ರಾಜ್ಯದಲ್ಲಿ 1.64%ಗೆ ಇಳಿದ ಕೊರೊನಾ ಪಾಸಿಟಿವಿಟಿ: ಇಂದು 2,743 ಮಂದಿಗೆ ಸೋಂಕು ದೃಢ appeared first on News First Kannada.

Source: newsfirstlive.com

Source link