‘ರಾಣ’ಗೆ ಮುಹೂರ್ತ; ಮೊದಲ ದೃಶ್ಯಕ್ಕೆ ಉಪ್ಪಿ ಆ್ಯಕ್ಷನ್ ಕಟ್

‘ರಾಣ’ಗೆ ಮುಹೂರ್ತ; ಮೊದಲ ದೃಶ್ಯಕ್ಕೆ ಉಪ್ಪಿ ಆ್ಯಕ್ಷನ್ ಕಟ್

ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡುತ್ತಿರುವ ಶ್ರೇಯಸ್ ಮಂಜು ನಾಯಕನಾಗಿ ನಟಿಸಲಿರುವ ನೂತನ ಸಿನಿಮಾ ರಾಣ ಸೆಟ್ಟೇರಿದೆ. ಇತ್ತೀಚೆಗಷ್ಟೇ ಶೀರ್ಷಿಕೆ ಅನಾವರಣ ಮಾಡಿಕೊಂಡಿದ್ದ ಚಿತ್ರ ತಂಡ, ಇದೀಗ ಸರಳವಾಗಿ ಮುಹೂರ್ತ ಮುಗಿಸಿಕೊಂಡಿದ್ದು, ರಿಯಲ್ ಸ್ಟಾರ್ ಉಪೇಂದ್ರ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗುಜ್ಜಲ್ ಅವರ ತಾಯಿ ಕ್ಲಾಪ್ ಮಾಡಿ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

blank

ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯ ನೆರವೇರಿದ್ದು, ಇನ್ನೇನು ಶೀಘ್ರದಲ್ಲಿಯೇ ಸಿನಿಮಾ ಕೆಲಸಗಳನ್ನು ಶುರು ಮಾಡಲಿದ್ದಾರಂತೆ ನಿರ್ದೇಶಕ ನಂದಕಿಶೋರ್. ನಂದಕಿಶೋರ್ ಮತ್ತು ನಿರ್ಮಾಪಕ ಗುಜ್ಜಲ್ ಮೊದಲ ಬಾರಿ ಈ ಸಿನಿಮಾ ಮೂಲಕ ಒಂದಾಗಿದ್ದು, ಮಾಸ್​ ಆ್ಯಕ್ಷನ್ ಶೈಲಿಯ ಸಿನಿಮಾ ಇದಾಗಿರಲಿದೆ ಎಂಬುದು ತಂಡದ ಮಾತು. ಚಿತ್ರದ ಬಗ್ಗೆ ಮತ್ತು ಪಾತ್ರದ ಬಗ್ಗೆ ಮಾಹಿತಿ ನೀಡಿರುವ ನಟ ಶ್ರೇಯಸ್, ‘ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ರಾಣದಲ್ಲಿ ತುಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದೇನೆ ಅಂತಾ ತಿಳಿಸಿದ್ದಾರೆ.

blank

ಪುತ್ರನ ಚಿತ್ರದ ಬಗ್ಗೆ ಕೆ.ಮಂಜು ಸಹ ಪ್ರತಿಕ್ರಿಯಿಸಿದ್ದಾರೆ. ಒಳ್ಳೆ ಕಥೆ ಸಿಕ್ಕಿದೆ. ಗುಜ್ಜರ್ ಅವರು ಮೊದಲಿಂದಲೂ ನನಗೆ ಸ್ನೇಹಿತರು. ಯಾವುದಾದರೂ ಸಿನಿಮಾ ಇದ್ದರೆ ನೀಡಿ ಎಂದಿದ್ದರು. ಅದರಂತೆ ನಂದ ಕಿಶೋರ್ ಮತ್ತು ಶ್ರೇಯಸ್ ಕಾಂಬಿನೇಷನ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಗುಜ್ಜರ್ ಅವರಿಗೆ ಕೃಷ್ಣನಂತೆ ಅವರೊಂದಿಗೆ ಬೆನ್ನಿಗೆ ನಿಲ್ಲುತ್ತೇನೆ ಎಂದರು.

blank

ಈ ಚಿತ್ರದಲ್ಲಿ ಶ್ರೇಯಸ್​ಗೆ ಇಬ್ಬರು ನಾಯಕಿಯರು. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ ಮೊದಲ ಬಾರಿ ನಂದಕಿಶೋರ್ ಮತ್ತು ಶ್ರೇಯಸ್ ಜತೆ ಕೆಲಸ ಮಾಡುತ್ತಿದ್ದಾರೆ. ತುಂಬ ಮುದ್ದಾದ ಪಾತ್ರವನ್ನು ನೀಡಿದ್ದಾರೆ. ನಂದಕಿಶೋರ್ ಅವರ ಜೊತೆಗೆ ಕೆಲಸ ಮಾಡಬೇಕೆಂಬ ಆಸೆಯಿತ್ತು. ಅದೀಗ ಈ ಸಿನಿಮಾ ಮೂಲಕ ಈಡೇರಿದೆ ಎಂದು ಮನದಾಳವನ್ನು ನಟಿ ರೀಷ್ಮಾ ನಾಣಯ್ಯ ಹೇಳಿಕೊಂಡರು.

blank

ಪೊಗರು ಬಳಿಕ ನಂದಕಿಶೋರ್ ಜತೆಗೆ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನ ಇಲ್ಲಿಯೂ ಮುಂದುವರಿಯುತ್ತಿದೆ. ಚಿತ್ರದಲ್ಲಿ 4 ಹಾಡುಗಳಿರಲಿದ್ದು, ಮಾಸ್ ಶೈಲಿಯಲ್ಲಿ ಮೂಡಿಬರಲಿವೆಯಂತೆ. ಕೊನೆಯದಾಗಿ ಮಾತಿಗಿಳಿದ ನಂದಕಿಶೋರ್, ಮುಂದಿನ ವಾರದಿಂದ ಚಿತ್ರದ ಶೂಟಿಂಗ್​ ಬೆಂಗಳೂರಿನಲ್ಲಿ ನಡೆಯುತ್ತದೆ. ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಕೆಲ ದಿನ ನಡೆಯಲಿದೆ. ಒಟ್ಟಾರೆ 40-45 ದಿನದ ಶೂಟಿಂಗ್ ಪ್ಲಾನ್ ಹಾಕಿದ್ದೇವೆ. ಬಹುತೇಕ ಹೊಸಬರೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಲನ್ ಪಾತ್ರಕ್ಕೆ ಬಾಡಿ ಬಿಲ್ಡರ್​ ರಾಘವೇಂದ್ರ ಅವರನ್ನು ವಿಲನ್ ಪಾತ್ರದ ಮೂಲಕ ಪರಿಚಯಿಸುತ್ತಿದ್ದೇವೆ. ಇನ್ನುಳಿದ ಪಾತ್ರ ವರ್ಗದ ಮಾಹಿತಿ ಶೀಘ್ರದಲ್ಲಿ ತಿಳಿಸಲಿದ್ದೇವೆ ಎಂದರು. ಶೇಖರ್ ಚಂದ್ರ ಛಾಯಾಗ್ರಹಣ, ಸಂಗೀತ ಚಂದನ್ ಶೆಟ್ಟಿ, ಕೆ.ಎಂ. ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ, ರವಿ ವರ್ಮಾ ಸಾಹಸ ನಿರ್ದೇಶನ ಮಾಡಲಿದ್ದಾರೆ.

The post ‘ರಾಣ’ಗೆ ಮುಹೂರ್ತ; ಮೊದಲ ದೃಶ್ಯಕ್ಕೆ ಉಪ್ಪಿ ಆ್ಯಕ್ಷನ್ ಕಟ್ appeared first on News First Kannada.

Source: newsfirstlive.com

Source link