ನೀನು ಮರಿಯಾನೆಯೂ ಅಲ್ಲಾ, ಏನೂ ಅಲ್ಲಾ – ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ

ದಾವಣಗೆರೆ: ಯೋಗೇಶ್ವರ್‍ ಗೆ ಸಿಎಂ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪಕ್ಷಾಂತರಿ ರಾಜಕೀಯದ ಬಗ್ಗೆ ಮಾತನಾಡುವಾಗ ನನಗೆ ಅಸಹ್ಯವಾಗುತ್ತಿದೆ. ನೀನು ಮರಿಯಾನೆಯೂ ಅಲ್ಲಾ. ಏನೂ ಅಲ್ಲಾ ಎಂದು ಸಿ.ಪಿ.ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಹೊನ್ನಾಳಿ ತಾಲೂಕಿನ ಬಸವನಹಳ್ಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ಯೋಗೇಶ್ವರ್ ಸಿಎಂ ಯಡಿಯೂರಪ್ಪರ ಬಗ್ಗೆ ಮಾತನಾಡಲು ಯಾವುದೇ ಅಧಿಕಾರವಿಲ್ಲ. ಅವರ ವಿರುದ್ಧ ಮಾತನಾಡಿದರೆ ಬಿಜೆಪಿ ಪಕ್ಷದ ಬಗ್ಗೆ ಮಾತನಾಡಿದಂತೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದ ನಾಲ್ವರಿಗೆ ಮಂತ್ರಿಗಿರಿ – ಆಯ್ಕೆಗೆ ಮಾನದಂಡ ಏನು?

ಇದೇ ಸಂದರ್ಭದಲ್ಲಿ ಶಾಸಕ ಯತ್ನಾಳ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ದೊಡ್ಡವರಾಗ್ತೀವಿ ಎಂದು ಕೆಲವರು ಅಂದುಕೊಂಡಿದ್ದಾರೆ. ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಬಿಜೆಪಿ ಬಗ್ಗೆ ಮಾತನಾಡಿದಂತೆ. ಅವರಿಗೆ ನಾಲಿಗೆಗೂ, ಮೆದುಳಿಗೂ ಸಂಬಂಧ ಇಲ್ಲ. ಬುದ್ಧಿ ಸ್ಥಿಮಿತ ಇಲ್ಲ ಎಂದು ಅರ್ಥ. ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.

ನಾಯಕತ್ವದ ವಿರುದ್ಧ ಮಾತನಾಡುವವರ ಬಗ್ಗೆ ವರಿಷ್ಠರು ತುರ್ತಾಗಿ ಕ್ರಮ ಕೈಗೊಳ್ಳಬೇಕು. ನಾಳೆ ಬೆಂಗಳೂರಿನಲ್ಲಿ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡುತ್ತೇನೆ, ಯಡಿಯೂರಪ್ಪ ಕುಟುಂಬ ರಾಜಕಾರಣ ಎಂದೂ ಮಾಡಿಲ್ಲ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದರು.

The post ನೀನು ಮರಿಯಾನೆಯೂ ಅಲ್ಲಾ, ಏನೂ ಅಲ್ಲಾ – ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ appeared first on Public TV.

Source: publictv.in

Source link