ಕನ್ನಡದಿಂದ ಮಾಲಿವುಡ್​ಗೆ ಶಿಫ್ಟ್ ಆಗ್ತಿದ್ದಾರೆ ಜೆನ್ನಿಫರ್ ಆ್ಯಂಟೋನಿ

ಕನ್ನಡದಿಂದ ಮಾಲಿವುಡ್​ಗೆ ಶಿಫ್ಟ್ ಆಗ್ತಿದ್ದಾರೆ ಜೆನ್ನಿಫರ್ ಆ್ಯಂಟೋನಿ

ಕನ್ನಡದ ಟಾಪ್ ಲಿಸ್ಟ್​ನಲ್ಲಿ ಒಂದಿಷ್ಟು ಧಾರವಾಹಿಗಳು ಇವೆ, ಆ ಸಾಲಿನಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಕಾವ್ಯಾಂಜಲಿ ಕೂಡಾ ಒಂದು. ಇತ್ತೀಚಿನ ದಿನಗಳಲ್ಲಿ ಕಾವ್ಯಾಂಜಲಿ ಧಾರವಾಹಿಗೆ ಫ್ಯಾನ್ಸ್ ಬಹಳಾನೇ ಇದ್ದಾರೆ.

ಕನ್ನಡಿಗರು ಇಷ್ಟಪಟ್ಟಿರೋ ಈ ಕಥೆ, ನಾಲ್ಕು ಭಾಷೆಗೆ ರಿಮೇಕ್ ಆಗ್ತಾಯಿದೆ. ಜೊತೆಗೆ ಈಗಾಗ್ಲೇ ಬಾಂಗ್ಲಾದಲ್ಲಿ ಟೆಲಿಕಾಸ್ಟ್ ಕೂಡ ಆಗ್ತಿದೆ. ಇನ್ನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಕಾವ್ಯಾಂಜಲಿ ಧಾರವಾಹಿ ರಿಮೇಕ್ ಆಗ್ತಿದೆ ಎಂಬ ವಿಷಯವನ್ನು ನಾವು ನಿಮಗೆ ತಿಳಿಸಿದ್ವಿ. ಇದೀಗ ಹೊಸ ವಿಚಾರ ಏನಪ್ಪಾ ಅಂದ್ರೆ ಮಲಯಾಳಂಗೆ ರಿಮೇಕ್ ಆಗ್ತಿರುವ ಕಾವ್ಯಾಂಜಲಿ ಧಾರವಾಹಿಯಲ್ಲಿ ಕನ್ನಡದ ನಟಿಯೊಬ್ಬರು ಅಭಿನಯಿಸ್ತಿದ್ದಾರೆ. ಯೆಸ್ ಅವರು ಮತ್ತ್ಯಾರೂ ಅಲ್ಲ ನಾಗಿಣಿ 2 ಧಾರವಾಹಿಯಲ್ಲಿ ಧಮಯಂತಿ ರೋಲ್ ಮಾಡ್ತಾ ಇರುವ ಜೆನ್ನಿಫರ್ ಆ್ಯಂಟೋನಿ.

ಹೌದು.. ಜನ್ನಿಫರ್ ಅವರು ಕನ್ನಡದಲ್ಲಿ ಸಾಕಷ್ಟು ಧಾರವಾಹಿ ಹಾಗೂ ಸಿನಿಮಾದಲ್ಲಿ ಒಳ್ಳೊಳೆ ಪಾತ್ರದ ಮೂಲಕ ನಿಮ್ಮನ್ನು ರಂಜಿಸಿದ್ದಾರೆ.. ಸದ್ಯ ನಾಗಿಣಿ 2 ಧಾರವಾಹಿಯಲ್ಲಿ ಮೋಹನ್ ಅಂದ್ರೆ ದಿಗ್ವಿಜಯ ಅವರ ಪತ್ನಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಆ ಪಾತ್ರ ಹಾಗೂ ಅವರ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಕನ್ನಡದ ಧಾರವಾಹಿ ಮಲೆಯಾಳಂ ಭಾಷೆಗೆ ರಿಮೇಕ್ ಆಗ್ತಾಯಿರೊ ಖುಷಿ ಒಂದು ಕಡೆಯಾದ್ರೆ.. ರಿಮೇಕ್ ಧಾರವಾಹಿಯಲ್ಲಿ ನಮ್ಮ ಕನ್ನಡದ ನಟಿ ಅಭಿನಯಿಸ್ತಾಯಿರುವ ಖುಷಿ ಇನ್ನೊಂದೆಡೆ.. ಕೊರೊನಾ ಲಾಕ್​ಡೌನ್​ ಮುಂಚೆ ಒಂದು ವಾರ ಶೂಟಿಂಗ್ ಮಾಡಿದ್ದೆವು.. ಇದೀಗ ಮತ್ತೆ ಚಿತ್ರೀಕರಣ ಶುರುಮಾಡಬೇಕು ಎಂದಿದ್ದಾರೆ ಜನ್ನಿಫರ್.

ಮಲೆಯಾಳಂ ಸೀರಿಯಲ್‌ಗೆ ಹೇಗೆ ಸೆಲೆಕ್ಷನ್ ಆಯ್ತೆಂಬ ನಮ್ಮ ಪ್ರಶ್ನೆಗೆ.. ನಾನೂ ಈಗಾಗಲೇ ಮಲಯಾಳಂನಲ್ಲಿ ಒಂದಿಷ್ಟು ಧಾರವಾಹಿಗಳು ಹಾಗೂ ಸಿನಿಮಾಗಳನ್ನು ಮಾಡಿದ್ದೀನಿ. ಆ ಬೇಸ್ ಮೇಲೆ ಇಲ್ಲಿ ಸೆಲೆಕ್ಷನ್ ಆಯ್ತು ಎಂದಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಪಾತ್ರದ ಮೂಲಕ ನಿಮ್ಮ ಮುಂದೆ ಬರಲು ತಯಾರಿ ನೆಡೆಸ್ತಾಯಿರುವ ಜನ್ನಿಫರ್ ಅವರಿಗೆ ಆಲ್​ ದ ಬೆಸ್ಟ್.

The post ಕನ್ನಡದಿಂದ ಮಾಲಿವುಡ್​ಗೆ ಶಿಫ್ಟ್ ಆಗ್ತಿದ್ದಾರೆ ಜೆನ್ನಿಫರ್ ಆ್ಯಂಟೋನಿ appeared first on News First Kannada.

Source: newsfirstlive.com

Source link