ನೂತನ ಸಚಿವ ಮನ್ಸುಖ್ ಮಂಡವಿಯಾಗೆ ಕೇಂದ್ರ ಆರೋಗ್ಯ ಇಲಾಖೆ ಜವಾಬ್ದಾರಿ

ನೂತನ ಸಚಿವ ಮನ್ಸುಖ್ ಮಂಡವಿಯಾಗೆ ಕೇಂದ್ರ ಆರೋಗ್ಯ ಇಲಾಖೆ ಜವಾಬ್ದಾರಿ

ನವದೆಹಲಿ: ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಕೇಂದ್ರ ಸರ್ಕಾರ ಮನ್ಸುಖ್ ಮಂಡವಿಯಾ ಅವರನ್ನ ಆರೋಗ್ಯ ಇಲಾಖೆ ಸಚಿವರಾಗಿದ್ದಾರೆ. ಇವರು ಗುಜರಾತ್​ನ ರಾಜ್ಯಸಭಾ ಸದಸ್ಯರು. ಈ ಹಿಂದೆ ಡಾ. ಹರ್ಷವರ್ಧನ್ ಸಿಂಗ್ ಅವರು ಈ ಖಾತೆ ನಿಭಾಯಿಸುತ್ತಿದ್ದರು. ಹರ್ಷವರ್ಧನ್​ರಿಂದ ಇದೀಗ ಮನ್ಷುಕ ಮಂಡವಿಯಾಗೆ ಖಾತೆ ವರ್ಗಾವಣೆಯಾದಂತಾಗಿದೆ. ಅಲ್ಲದೇ ಈ ಹಿಂದೆ ಡಿ.ವಿ. ಸದಾನಂದ ಗೌಡರಿಗೆ ನೀಡಲಾಗಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಜವಾಬ್ದಾರಿಯನ್ನೂ ಮನ್ಸುಖ್ ಮಂಡವಿಯಾಗೆ ನೀಡಲಾಗಿದೆ.

The post ನೂತನ ಸಚಿವ ಮನ್ಸುಖ್ ಮಂಡವಿಯಾಗೆ ಕೇಂದ್ರ ಆರೋಗ್ಯ ಇಲಾಖೆ ಜವಾಬ್ದಾರಿ appeared first on News First Kannada.

Source: newsfirstlive.com

Source link