ಬ್ಯುಸಿ ಶೆಡ್ಯೂಲ್​ನಲ್ಲಿ ಡಾಲಿ.. ಟಾಲಿವುಡ್​ನಿಂದ ಭೈರವನಿಗೆ ಬಂತು ಬುಲಾವ್!

ಬ್ಯುಸಿ ಶೆಡ್ಯೂಲ್​ನಲ್ಲಿ ಡಾಲಿ.. ಟಾಲಿವುಡ್​ನಿಂದ ಭೈರವನಿಗೆ ಬಂತು ಬುಲಾವ್!

ಅರಸೀಕೆರೆಯ ಅದ್ಭುತ ಪ್ರತಿಭೆ ಡಾಲಿ ಧನಂಜಯ್ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇರೋದು ನಿಜ. ಆದರೆ 2ನೇ ಲಾಕ್​ಡೌನ್​​ ತೆರವು ಆದ ನಂತರ ಯಾವ ಸಿನಿಮಾದ ಶೂಟಿಂಗ್ ಸೆಟ್​​ನಲ್ಲೂ ಡಾಲಿ ದಾಂಗುಡಿ ಇಟ್ಟಿರಲಿಲ್ಲ. ಈಗ ಟಾಲಿವುಡ್​ನ ಪುಷ್ಪನ ಕಡೆಯಿಂದ ಭೈರವನಿಗೆ ಬುಲಾವ್ ಬಂದಿದೆ.

ಟಾಲಿವುಡ್ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಟಾಲಿವುಡ್ ಸ್ಟಾರ್ ನಿರ್ದೇಶಕ ಸುಕುಮಾರ್ ಕಾಂಬಿನೇಷನ್​ನ ನಿರೀಕ್ಷಿತ ಸಿನಿಮಾ ಪುಷ್ಪ.. ಇಂಟ್ರಡಕ್ಷನ್ ಟೀಸರ್​ನಿಂದ ಇಡೀ ಇಂಡಿಯಾ ಸದ್ದು ಮಾಡಿದ್ದ ಪುಷ್ಪ ಸಿನಿಮಾದ ಶೂಟಿಂಗ್ ಕಾರ್ಯಗಳು ಮತ್ತೆ ಶುರುವಾಗಿದೆ.

Pushpa : Full Movie HD facts 4K| Allu Arjun | Rashmika Mandanna | Sukumar | Devi Sri Prasad - YouTube

ಇನ್ನೇನು ಆಗಸ್ಟ್ ತಿಂಗಳು ಬಂದೇ ಬಿಡ್ತೀವಿ ಎಂದುಕೊಂಡು ಟೀಸರ್ ಲಾಂಚ್ ಮಾಡಿದ್ದ ಫಿಲ್ಮ್ ಟೀಮ್ ಏಕ್​ದಮ್ ಪುಷ್ಪ ಚಿತ್ರವನ್ನ ಎರಡೆರಡು ಭಾಗಗಳಲ್ಲಿ ತರುತ್ತಿದ್ದೇವೆ, ಇನ್ನು ಶೂಟಿಂಗ್ ಬಾಕಿ ಇದೆ ಎಂದು ಯೂಟರ್ನ್ ಹೊಡೆದುಬಿಟ್ಟರು. ಈಗ ಎರಡನೇ ಕೊರೊನಾ ಅಲೆ ಹೈದ್ರಾಬಾದ್​​ನಲ್ಲಿ ಕಡಿಮೆಯಾಗಿರೋದ್ರಿಂದ ಶೂಟಿಂಗ್ ಅಡ್ಡಕ್ಕೆ ಇಳಿಸಿದೆ ಪುಷ್ಪ ಫಿಲ್ಮ್ ಟೀಮ್.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ನಮ್ಮ ಡಾಲಿ ಧನಂಜಯ್ ಸೇರಿದಂತೆ ಅನೇಕ ಸ್ಟಾರ್ ನಟರು ಪುಷ್ಪ ಸಿನಿ ಅಂಗಳದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಡಾಲಿ ಮತ್ತೊಮ್ಮೆ ಪುಷ್ಪ ಸಿನಿಮಾದ ಶೂಟಿಂಗ್ ಅಡ್ಡಕ್ಕೆ ಕಾಲಿಡಲಿದ್ದಾರೆ. ಡಾಲಿ ಧನಂಜಯ್ ಅವರಿಗೆ ಶೂಟಿಂಗ್ ಬರಲು ಪುಷ್ಪ ಫಿಲ್ಮ್ ಟೀಮ್​ನಿಂದ ಬುಲಾವ್ ಬಂದಿದೆಯಂತೆ.

blank

ಇನ್ನು ಡಾಲಿ ಸ್ನೇಹ ಬಳದಿಂದ ಮತ್ತೊಂದು ಹ್ಯಾಪಿ ನ್ಯೂಸ್ ಹೊರ ಬಂದಿದೆ. ಡಾಲಿ, ಶಿವಪ್ಪ, ರತ್ನನ್ ಪ್ರಪಂಚ, ಮಾನ್ಸುನ್ ರಾಗ, ಬಡವ ರಾಸ್ಕಲ್, ಹೆಡ್ ಬುಷ್, ತೋತಾಪುರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಡಾಲಿ ಬ್ಯುಸಿ ಇದ್ದಾರೆ. ಈಗ ರತ್ನನ್ ಪ್ರಪಂಚ ಸಿನಿಮಾವನ್ನ ನಿರ್ಮಾಣ ಮಾಡಿರೋ ಕಾರ್ತಿಕ್ ಗೌಡ ಅವರ ಕೆ.ಆರ್.ಜಿ ಬ್ಯಾನರ್​ನಲ್ಲಿ ಮತ್ತೊಂದು ಸಿನಿಮಾಕ್ಕೆ ಸಜ್ಜಾಗಿದ್ದಾರೆ. ‘ಬಂಗಾರು ಸನ್ನಾಫ್ ಬಂಗಾರದ ಮನುಷ್ಯ’ ಖ್ಯಾತಿಯ ನಿರ್ದೇಶಕ ಕಮ್ ಕಾಸ್ಟ್ಯೂಮ್ ಡಿಸೈನರ್ ಯೋಗಿ ಜಿ ರಾಜ್ ಕಲ್ಪನೆಯಲ್ಲಿ ಧನು ಅವರ ಹೊಸ ಸಿನಿಮಾ ಮೂಡಿಬರಲಿದೆ.

ಲಾಕ್ ಡೌನ್ ಮುಗಿಯೋದನ್ನ ಕಾಯತ್ತಿದ್ದ ಧನಂಜಯ್ ಮತ್ತೆ ಬ್ಯಾಕ್ ಟು ಫಾರ್ಮ್ ಎಂಬುವಂತೆ ಶೂಟಿಂಗ್ ಅಡ್ಡಗಳಿಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ ಡಾಲಿ ಬ್ಯಾಕ್ ಟು ಫಾರ್ಮ್ ಎಂದೆನ್ನಬಹುದು.

The post ಬ್ಯುಸಿ ಶೆಡ್ಯೂಲ್​ನಲ್ಲಿ ಡಾಲಿ.. ಟಾಲಿವುಡ್​ನಿಂದ ಭೈರವನಿಗೆ ಬಂತು ಬುಲಾವ್! appeared first on News First Kannada.

Source: newsfirstlive.com

Source link