ನಿತ್ಯ 500 ಲೋಡ್ ಕಲ್ಲು ದಿಮ್ಮಿಗಳನ್ನ ಸಾಗಾಣಿಕೆ‌ ಮಾಡ್ತಿದ್ದಾರೆ, ಪ್ರಭಾವಿಗಳಿಂದ ಕುಮ್ಮಕ್ಕು -ಸುಮಲತಾ

ನಿತ್ಯ 500 ಲೋಡ್ ಕಲ್ಲು ದಿಮ್ಮಿಗಳನ್ನ ಸಾಗಾಣಿಕೆ‌ ಮಾಡ್ತಿದ್ದಾರೆ, ಪ್ರಭಾವಿಗಳಿಂದ ಕುಮ್ಮಕ್ಕು -ಸುಮಲತಾ

ಮಂಡ್ಯ:  ಅಕ್ರಮ ಗಣಿಗಾರಿಕೆಯನ್ನ ಸಿಬಿಐ ತನಿಖೆಗೆ ವಹಿಸಬೇಕು ಅಂದಿರೋ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡಲೇ ರಾಜೀನಾಮೆ‌ ನೀಡಬೇಕು ಅಂತ ಸಂಸದೆ ಸುಮಲತಾ ಅಂಬರೀಶ್​ ಹೇಳಿಕೆ ನೀಡಿದ್ದಾರೆ.

ಗಣಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸುಮಲತಾ, ಇವತ್ತಿನ ಶಾಕ್ ನನ್ನ ಜೀವನದಲ್ಲಿ ನೋಡಿಲ್ಲ. ಡಿಸಿ ಜಿಲ್ಲೆಯ ಸುಪ್ರಿಂ, ಸಂಸದೆಯಾಗಿ ನಾನು, ಎಸಿ,‌ ತಹಶೀಲ್ದಾರ್ ಹೋದರೂ ಒಳಹೋಗದಂತೆ ಬಂದು ನಿರ್ಮಾಣ ಮಾಡಿದ್ದಾರೆ. ಕೆಲವರು ಅಲ್ಲಿ ಗೂಂಡಾ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಪಾಕಿಸ್ತಾನ, ಇಂಡಿಯಾ ಬಾರ್ಡರ್‌ನಲ್ಲೂ ಈ ರೀತಿ ಬ್ಲಾಕೇಜ್‌ ನಿರ್ಮಿಸಿರೋದನ್ನ ನಾನು ನೋಡಿಲ್ಲ‌.ಇತಿಹಾಸದಲ್ಲಿ ಪ್ರಪ್ರಥಮವಾಗಿ ಅಕ್ರಮ ಗಣಿಗಾರಿಕೆಯನ್ನ ಓಪನ್ ಎಕ್ಸ್‌ಪೋಸ್ ಮಾಡಿದ್ದೇನೆ ಎಂದರು.

ಸ್ಥಳೀಯರ ಮಾಹಿತಿ ಹಾಗೂ ಮನವಿ ಪ್ರಕಾರ ಖುದ್ದು ಪರಿಶೀಲನೆ ನಡೆಸಿದ್ದೇನೆ. ಪರಿಶೀಲನೆಗೆ ಹೋದಾಗ ಅಡಚಣೆ ಆಗಿದೆ. ಇದರಿಂದ ಬೇಬಿ ಬೆಟ್ಟಕ್ಕೆ ಹೋಗೋದು ಪೋಸ್ಟ್‌ಪೋನ್ ಮಾಡಿದೆ. ಸ್ಫೋಟದಿಂದ ಬಿರುಕು ಉಂಟಾಗಿ ಗೋಡೆಗಳು ಒಡೆದಿವೆ. ಅಕ್ರಮ ಗಣಿಗಾರಿಕೆಯಿಂದ ಆರೋಗ್ಯದಲ್ಲಿ ಏರುಪೇರು, ಹೃದಯಾಘಾತ, ಉಸಿರಾಟದ ಸಮಸ್ಯೆ ಆಗ್ತಿದೆ. ಹಂಗರಹಳ್ಳಿಯಲ್ಲಿ ಎಷ್ಟೋ ವರ್ಷದಿಂದ ಲೈಸೆನ್ಸ್ ಇಲ್ಲದೆ ಮೈನಿಂಗ್ ನಡೆಸುತ್ತಿದ್ದಾರೆ. ನಿತ್ಯ ಐನೂರು ಲೋಡ್ ಕಲ್ಲು ದಿಮ್ಮಿಗಳನ್ನ ಸಾಗಾಣಿಕೆ‌ ಮಾಡ್ತಿದ್ದಾರೆ. ಪ್ರಭಾವಿಗಳು ಇದಕ್ಕೆಲ್ಲಾ ಕುಮ್ಮಕ್ಕು ನೀಡ್ತಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯನವ್ರೆ ನೀವು ನಮ್ಮ ಸಿನಿಮಾದವ್ರು ಅಂತೀರಲ್ಲ, ರಾಜಾಕಾರಣದಲ್ಲಿ ನೀವು ಇವತ್ತು ಸಿನಿಮಾ ತೋರಿಸಿದ್ದೀರ ಅಂತ ಸುಮಲತಾ ಹರಿಹಾಯ್ದರು.

ಇನ್ನೂ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೀರ‌? ಸ್ಥಳೀಯ ಕಷ್ಟನೋವು ಕಾಣಿಸ್ತಿಲ್ವ? ಅಂತ ಮಾತಿಗೆ ಮುನ್ನ ಪ್ರಶ್ನೆ ಮಾಡ್ತೀರ‌ ನಮ್ಮನ್ನ. ನಾನು ಕೇಳ್ತೀನಿ ಇದೇನಾ ನಿಮ್ಮ ಕೊಡುಗೆ ರವಿಂದ್ರರವರೇ? ಅಕ್ರಮ‌ ಗಣಿಗಾರಿಕೆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರ? ರಾಯಲ್ಟಿ, ಪೆನಾಲ್ಟಿ ಸರಿಯಾಗಿ ವಸೂಲಿ ಮಾಡಿದ್ರೆ ಜಿಲ್ಲಾ ಖಜಾನೆಗೆ ಹಣ ಬರುತ್ತೆ. ಎಲ್ಲಿಗೆ ಹೋಗುತ್ತಿದೆ, ಯಾರ ಜೇಬು ಸೇರುತ್ತಿದೆ ಆ ಹಣ?
ಯಾರ ಬೆಂಬಲ ಇದೆ ಅಕ್ರಮ ಗಣಿಗಾರಿಕೆಗೆ? ಅಂತ ಪ್ರಶ್ನಿಸಿದ್ರು.

ಕೆಲ ಗೂಂಡಗಳನ್ನುಟ್ಟುಕೊಂಡು ಬೆದರಿಸ್ತೀರ. ಹಂಗರಹಳ್ಳಿ ಕ್ವಾರೆ ನಿಮ್ಮದೇನ ಇದು, ನಿಮ್ಮವರಿಗೆ ಸೇರಿದ್ದ? ಜನರಿಗೆ ಉತ್ತರ ಕೊಡಬೇಕು‌ ನೀವು. ಇವತ್ತಿನ ಘಟನೆಗಳನ್ನ ನೋಡಿ ನೀವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಧಿಕಾರಿಗಳು ಅವರವರ ಡ್ಯೂಟಿ ಮಾಡ್ತಿದ್ದಾರೆ.  ನಾನು ಅಕ್ರಮವನ್ನ ಬಯಲಿಗೆಳೆದಿದ್ದೇನೆ. ಕ್ರಮ ಕೈಗೊಳ್ಳೋದು ಅಧಿಕಾರಿ ವರ್ಗಕ್ಕೆ ಬಿಟ್ಟದ್ದು.ಅರಣ್ಯ, ಕಂದಾಯ, ಮೈನಿಂಗ್ ಇಲಾಖೆಯಲ್ಲಿ ಹೊಂದಾಣಿಕೆ ಇಲ್ಲ. ಯುದ್ದದಲ್ಲಿ ನೋಡ್ತಿವಲ್ಲ ಹಾಗೆ ಇವತ್ತು ಸೀನ್ ಕ್ರಿಯೇಟ್ ಮಾಡಿದ್ದಾರೆ. ಸೇತುವೆ ಕಡೆ ನೋಡೊಕೆ ಬಿಡಲಿಲ್ಲ ಅಂತ ಸುಮಲತಾ ವಾಗ್ದಾಳಿ ನಡೆಸಿದ್ರು.

The post ನಿತ್ಯ 500 ಲೋಡ್ ಕಲ್ಲು ದಿಮ್ಮಿಗಳನ್ನ ಸಾಗಾಣಿಕೆ‌ ಮಾಡ್ತಿದ್ದಾರೆ, ಪ್ರಭಾವಿಗಳಿಂದ ಕುಮ್ಮಕ್ಕು -ಸುಮಲತಾ appeared first on News First Kannada.

Source: newsfirstlive.com

Source link