ಡೆಲ್ಟಗಿಂತ ಹೆಚ್ಚು ಅಪಾಯಕಾರಿ ಲ್ಯಾಂಬ್ಡಾ ರೂಪಾಂತರಿ .. 30 ದೇಶಗಳಲ್ಲಿ ಪತ್ತೆ

ಡೆಲ್ಟಗಿಂತ ಹೆಚ್ಚು ಅಪಾಯಕಾರಿ ಲ್ಯಾಂಬ್ಡಾ ರೂಪಾಂತರಿ .. 30 ದೇಶಗಳಲ್ಲಿ ಪತ್ತೆ

ಕೊರೊನಾ ಎರಡನೇ ಅಲೆಯ ಹಾವಳಿ ಈಗಷ್ಟೇ ತಣ್ಣಗಾಗಿರುವಾಗ ಸೋಂಕಿನ ಮತ್ತೊಂದು ರೂಪಾಂತರಿ ತಳಿ ಲ್ಯಾಂಬ್ಡಾ ಪತ್ತೆಯಾಗಿದೆ. ಇದು ಡೆಲ್ಟಾ, ಡೆಲ್ಟಾ ಪ್ಲಸ್​ಗಿಂತ ಅಪಾಯಕಾರಿಯಾಗಿದೆ ಅಂತ ಹೇಳಲಾಗ್ತಿದೆ.

ಈ ಬಗ್ಗೆ ಮಾತನಾಡಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಮ್ಯಾಕ್ಸಿಮಮ್ ಕಂಟೈನ್‌ಮೆಂಟ್ ಫೆಸಿಲಿಟಿ ಮುಖ್ಯಸ್ಥ ಡಾ. ಪ್ರಜ್ಞಾ ಯಾದವ್, ಕೊರೊನಾದ ಲ್ಯಾಂಬ್ಡಾ ರೂಪಾಂತರಿ ತಳಿ ಕಳೆದ 4 ವಾರಗಳಲ್ಲಿ 30 ದೇಶಗಳಲ್ಲಿ ಪತ್ತೆಯಾಗಿದೆ. ಈ ರೂಪಾಂತರದಿಂದ ವರದಿಯಾದ ಪ್ರಕರಣಗಳ ಸಂಖ್ಯೆ ವಿವಿಧ ದೇಶಗಳಲ್ಲಿ ಹೆಚ್ಚುತ್ತಿದೆ. ಇದು ಹೆಚ್ಚು ಹರಡಬಲ್ಲದು ಎಂದು ತಿಳಿಸಿದ್ದಾರೆ.

ಪೆರುವಿನಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ವರದಿಯಾದ ಕೊರೊನಾ ಪ್ರಕರಣಗಳ ಸ್ಯಾಂಪಲ್​ಗಳಲ್ಲಿ ಶೇಕಡ 82 ರಷ್ಟು ಲ್ಯಾಂಬ್ಡಾ ತಳಿಯೇ ಇದೆ ಎಂದು ಪ್ಯಾನ್ ಅಮೇರಿಕನ್ ಹೆಲ್ತ್ ಆರ್ಗನೈಸೇಶನ್ (ಪಿಎಹೆಚ್ಒ) ಹೇಳಿರೋದಾಗಿ ವರದಿಯಾಗಿದೆ.

The post ಡೆಲ್ಟಗಿಂತ ಹೆಚ್ಚು ಅಪಾಯಕಾರಿ ಲ್ಯಾಂಬ್ಡಾ ರೂಪಾಂತರಿ .. 30 ದೇಶಗಳಲ್ಲಿ ಪತ್ತೆ appeared first on News First Kannada.

Source: newsfirstlive.com

Source link