ಮಮತಾ ಬ್ಯಾನರ್ಜಿಗೆ ₹5 ಲಕ್ಷ ದಂಡ ವಿಧಿಸಿದ ಕೊಲ್ಕತ್ತಾ ಹೈಕೋರ್ಟ್

ಮಮತಾ ಬ್ಯಾನರ್ಜಿಗೆ ₹5 ಲಕ್ಷ ದಂಡ ವಿಧಿಸಿದ ಕೊಲ್ಕತ್ತಾ ಹೈಕೋರ್ಟ್

ಕೊಲ್ಕತ್ತಾ:  ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಕೊಲ್ಕತ್ತಾ ಹೈಕೋರ್ಟ್ ₹5 ಲಕ್ಷ ದಂಡ ವಿಧಿಸಿದೆ. ಚುನಾವಣೆಯಲ್ಲಿ ಬಿಜೆಪಿಯ ಸುವೇಂದು ಅಧಿಕಾರಿಯ ಆಯ್ಕೆ ಕುರಿತ ಪ್ರಕರಣ ಸಂಬಂಧ ನ್ಯಾಯಮೂರ್ತಿ ಕೌಶಿಕ್ ಚಂದಾ ವಿಚಾರಣೆಯಿಂದ ಹಿಂದೆ ಸರಿಯಬೇಕೆಂದು ಮಮತಾ ಬ್ಯಾನರ್ಜಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದಿಂದ ನಿರ್ಗಮಿಸುವ ಮೊದಲು ನ್ಯಾಯಮೂರ್ತಿ ಕೌಶಿಕ್ ಚಂದಾ ಕೋಪದಿಂದ ಕೆಲವು ಮಾತುಗಳನ್ನ ಹೇಳಿದ್ರು. ಮಮತಾ ಬ್ಯಾನರ್ಜಿ ಅವರದ್ದು ನ್ಯಾಯಮೂರ್ತಿಯನ್ನ ಕೆಣಕುವ ಪೂರ್ವಯೋಜಿತ ಕ್ರಮ ಮತ್ತು ಅವರ ಸಾಂವಿಧಾನಿಕ ಕರ್ತವ್ಯವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಪ್ರಕರಣದಿಂದ ಹಿಂದೆ ಸರಿಯಬೇಕೆಂದು ಕೇಳಿರುವ ಇಂಥ ಲೆಕ್ಕಾಚಾರದ, ಮಾನಸಿಕ ಹಾಗೂ ಆಕ್ರಮಣಕಾರಿ ಪ್ರಯತ್ನವನ್ನ ದೃಢವಾಗಿ ಹಿಮ್ಮೆಟ್ಟಿಸುವ ಅಗತ್ಯವಿದೆ. ಅದಕ್ಕಾಗಿ ಅರ್ಜಿದಾರರಿಗೆ 5 ಲಕ್ಷ ದಂಡ ಹಾಕಲಾಗ್ತಿದೆ ಎಂದು ಚಂದಾ ಅವರು ಹೇಳಿದರು.

ನ್ಯಾಯಮೂರ್ತಿ ಚಂದಾ ಅವರಿಗೆ ಬಿಜೆಪಿಯೊಂದಿಗೆ ಸಂಬಂಧವಿದೆ. ಹೀಗಾಗಿ ಪಕ್ಷಪಾತ ಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ನಿಯೋಜಿಸಬೇಕೆಂದು ಕೋರಿದ್ದರು. ಈ ಪ್ರಕರಣವನ್ನು ಈಗ ಆಕ್ಟಿಂಗ್ ಜಡ್ಜ್​ ರಾಜೇಶ್ ಬಿಂದಾಲ್ ಅವರಿಗೆ ರೆಫರ್ ಮಾಡಲಾಗಿದೆ, ಅವರು ಅದನ್ನು ಮರುನಿಯೋಜಿಸಬೇಕಾಗಿದೆ.

The post ಮಮತಾ ಬ್ಯಾನರ್ಜಿಗೆ ₹5 ಲಕ್ಷ ದಂಡ ವಿಧಿಸಿದ ಕೊಲ್ಕತ್ತಾ ಹೈಕೋರ್ಟ್ appeared first on News First Kannada.

Source: newsfirstlive.com

Source link