ಹೊಸ ಲುಕ್​​ನಲ್ಲಿ ಕಾಣಿಸಿಕೊಂಡ ಎಂ.ಎಸ್ ಧೋನಿ.. ಅಭಿಮಾನಿಗಳು ಫಿದಾ

ಹೊಸ ಲುಕ್​​ನಲ್ಲಿ ಕಾಣಿಸಿಕೊಂಡ ಎಂ.ಎಸ್ ಧೋನಿ.. ಅಭಿಮಾನಿಗಳು ಫಿದಾ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ನಿನ್ನೆ 40ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆ ಹುಟ್ಟು ಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಅವರ ಹೊಸ ಲುಕ್‌ನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಧೋನಿ ವೃತ್ತಿಜೀವನದ ಆರಂಭದಿಂದಲೂ ವಿವಿಧ ಕೇಶ ಶೈಲಿಯ ಮೂಲಕ ಗಮನಸೆಳೆದವರು. ಇದೀಗ 40ನೇ ಜನ್ಮದಿನದಂದು ಬಿಳಿ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ. 2 ವಾರದ ಹಿಂದೆ ಅವರು ಉದ್ದ ಮೀಸೆಯ ಲುಕ್‌ನೊಂದಿಗೆ ಮಿಂಚಿದ್ದರು. ಇದೀಗ ಕಪ್ಪು-ಬಿಳುಪಿನ ಲುಕ್ ಅಭಿಮಾನಿಗಳಿಗೆ ಮತ್ತಷ್ಟು ಅಚ್ಚರಿ ತಂದಿದೆ.

The post ಹೊಸ ಲುಕ್​​ನಲ್ಲಿ ಕಾಣಿಸಿಕೊಂಡ ಎಂ.ಎಸ್ ಧೋನಿ.. ಅಭಿಮಾನಿಗಳು ಫಿದಾ appeared first on News First Kannada.

Source: newsfirstlive.com

Source link