ರಾಕಿಂಗ್​ ಸ್ಟಾರ್​ ಯಶ್​​ ಲಕ್ಕಿ ಮಂತ್​ನಲ್ಲಿ ರಿಲೀಸ್​ ಆಗುತ್ತಾ ಕೆಜಿಎಫ್​-2..?

ರಾಕಿಂಗ್​ ಸ್ಟಾರ್​ ಯಶ್​​ ಲಕ್ಕಿ ಮಂತ್​ನಲ್ಲಿ ರಿಲೀಸ್​ ಆಗುತ್ತಾ ಕೆಜಿಎಫ್​-2..?

ಅದ್ಯಾವ ಶುಭ ಘಳಿಗೆಯಲ್ಲಿ ಕೆಜಿಎಫ್ ಅಂತ ಹೆಸರನ್ನ ಚಿತ್ರತಂಡ ಇಟ್ಟಿತ್ತೊ ಗೊತ್ತಿಲ್ಲ. ಆ ಕ್ಷಣದಿಂದಲೇ ಕುತೂಹಲದ ಕೋಲಾಹಲ ಚಿತ್ರಪ್ರೇಮಿಗಳಲ್ಲಿ ಶುರುವಾಯಿತು. ಮೊದಲನೇ ಕೆಜಿಎಫ್ ಅಧ್ಯಾಯದ ರೋಚಕತೆಯನ್ನ ಕಂಡ ಸಿನಿಪ್ರೇಕ್ಷಕ ಈಗ ಎರಡನೇ ಅಧ್ಯಾಯಕ್ಕಾಗಿ ಕಾದು ಕುಳಿತ್ತಿದ್ದಾನೆ. ಈ ರೈಟ್ ಟೈಮ್​ನಲ್ಲಿ ಕೆಜಿಎಫ್ ಸಿನಿಮಾ ಪಡೆ ರಿಲೀಸ್ ಸುಳಿವನ್ನ ನೀಡಿದೆ..

ಜೂನ್ 12 2016.. ಕೆಜಿಎಫ್ ಸಿನಿಮಾಗೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸದ್ದಿಲ್ಲದೇ ಮುಹೂರ್ತವಾಗಿತ್ತು. ಅವತ್ತು ಚಿತ್ರತಂಡದವರಿಗೇ ಗೊತ್ತಿರಲಿಲ್ಲ ಕೆಜಿಎಫ್ ಪ್ಯಾನ್ ಇಂಡಿಯನ್ ಸಿನಿಮಾವಾಗುತ್ತೆ ಅಂತ. ಒಂದು ಒಳ್ಳೆಯ ಕಥೆಯುಳ್ಳ ಸಿನಿಮಾ ತನಗೇನು ಬೇಕು ಅದನ್ನ ತಾನಾಗಿ ತಾನು ಮಾಡಿಸಿಕೊಳ್ಳುತ್ತೆ ಅನ್ನೋ ಸಿನಿಮಾ ಮಂದಿಯ ನಂಬಿಕೆಗೆ ಕಳಶವಿದ್ಧಂತೆ ಕೋಲಾರ ಗೋಲ್ಡ್ ಫಿಲ್ಡ್.

blank
ಪ್ಯಾನ್ ಇಂಡಿಯನ್ ಲಿವೆಲ್​​​ನಲ್ಲಿ ಐದೈದು ಭಾಷೆಯಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 1ಕ್ಕೆ ಅಭೂತಪೂರ್ವ ಯಶಸ್ಸು ಸಿಗುತ್ತೆ. ಒಂದನೇ ಕೆಜಿಎಫ್ ಮಾಡಿದ ಅಬ್ಬರ ರೆಕಾರ್ಡ್ ಮೀರಿಸುತ್ತೆ ಎರಡನೇ ಕೆಜಿಎಫ್  ಮೇಲಿನ ನಿರೀಕ್ಷೆ ದೇಶದ ತುಂಬ ಇದೆ. ಈ ರೈಟ್ ಟೈಮ್​ನಲ್ಲೇ ಎರಡನೇ ಲಾಕ್ ಡೌನ್ ಮುಗಿದು ಸಹಜ ಸ್ಥಿತಿಗೆ ಪರಿಸ್ಥಿತಿಗಳು ಬರುತ್ತಿರೋ ಹಿನ್ನಲೆ ಯಾವಾಗ ಸಿನಿಮಾ ರಿಲೀಸ್ ಅನ್ನೊ ಕುತೂಹಲ ಎಲ್ಲರಲ್ಲಿ ಅಡಗಿದೆ.

2ನೇ ಲಾಕ್​ಡೌನ್​ಗೂ ಮುನ್ನ ಜುಲೈ 16ನೇ ತಾರೀಖು ಕೆಜಿಎಫ್ 2 ವರ್ಲ್ಡ್​ ವೈಡ್ ರಿಲೀಸ್ ಅನ್ನೋ ಘೋಷಣೆ ಆಗಿತ್ತು. ಆದ್ರೆ ಲಾಕ್​​ಡೌನ್ ಆದ ಕಾರಣ ಆ ಡೇಟ್​ಗೆ ಕೆಜಿಎಫ್ ಅಧ್ಯಾಯ-2 ಬರ್ತಿಲ್ಲ. ಹಾಗಾದ್ರೆ ಯಾವಾಗ ಈ ನಿರೀಕ್ಷಿತ ಸಿನಿಮಾ ರಿಲೀಸು? ಈ ಪ್ರಶ್ನೆಗೆ ಹೊಂಬಾಳೆ ಫಿಲಂಸ್ ಮುಂಬವರುವ ಸೋಮವಾರ ಉತ್ತರವನ್ನ ಹೇಳೋ ಸಾಧ್ಯತೆ ಇದೆ.

blank
ಒಂದು ಮಾಹಿತಿಯ ಪ್ರಕಾರ ಕೆಜಿಎಫ್-2 ಸಿನಿಮಾ ಈ ವರ್ಷದ ಕಡೆಯಲ್ಲಿ ಬರೋ ಸಾಧ್ಯತೆ ಇದೆ. ಕಾರಣವೆನಪ್ಪ ಅಂದ್ರೆ ಸಿನಿಮಾದ ಕೆಲವೊಂದಿಷ್ಟು ಕೆಲಸ ಕಾರ್ಯಗಳು ಬಾಕಿ ಇವೆ ಅಂತೆ. ಇನ್ನೂ ಕೂಡ ಕೆಜಿಎಫ್ -2 ಸಿನಿಮಾ ಡಿಐ ಕಾರ್ಯ ಆಗಿಲ್ವಂತೆ. ಬರೋಬ್ಬರಿ 44 ದಿನಗಳ ಕಾಲ ಕಲರ್ ಗ್ರೇಡಿಂಗ್ ಕಾರ್ಯವಾಗಲಿದೆ. ಇನ್ನೂ ಕೂಡ ಸಂಜಯ್ ದತ್ ಅವರ ಅಧೀರಾ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್ ಆಗಿಲ್ಲ. ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಡಿಸೆಂಬರ್ ಲಕ್ಕಿ ಮಂತ್ ಆಗಿರೋ ಕಾರಣ ಡಿಸೆಂಬರ್ ಮೇಲೆ ಚಿತ್ರತಂಡದ ರಿಲೀಸ್ ಒಲವಿದೆ ಎನ್ನಲಾಗುತ್ತಿದೆ. ಇನ್ನೇನು ಅತಿ ಶೀಘ್ರದಲ್ಲೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್ ಘೋಷಣೆಯಾಗಲಿದೆ. ಅಲ್ಲಿವರೆಗೆ ಕಾಯಬೇಕು.

The post ರಾಕಿಂಗ್​ ಸ್ಟಾರ್​ ಯಶ್​​ ಲಕ್ಕಿ ಮಂತ್​ನಲ್ಲಿ ರಿಲೀಸ್​ ಆಗುತ್ತಾ ಕೆಜಿಎಫ್​-2..? appeared first on News First Kannada.

Source: newsfirstlive.com

Source link