ಉತ್ತರ ಕೊರಿಯದಲ್ಲಿ ಈ ವರ್ಷ 8,60,000 ಟನ್ ಆಹಾರ ಕೊರತೆ

ಉತ್ತರ ಕೊರಿಯದಲ್ಲಿ ಈ ವರ್ಷ 8,60,000 ಟನ್ ಆಹಾರ ಕೊರತೆ

ಉತ್ತರ ಕೊರಿಯಾವು ಈ ವರ್ಷ ಸುಮಾರು 8 ಲಕ್ಷದ 60 ಸಾವಿರ ಟನ್ ಆಹಾರ ಕೊರತೆಯನ್ನು ಎದುರಿಸುತ್ತಿದೆ. ಮುಂದಿನ ತಿಂಗಳು ದೇಶ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುವ ಸಾಧ್ಯತೆ ಇದೆ ಅಂತ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಮುನ್ನೆಚ್ಚರಿಕೆ ನೀಡಿದೆ.

ತನ್ನ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಮೇಲೆ ಉತ್ತರಕೊರಿಯಾ ಅನೇಕ ವಿಧದ ಅಂತರರಾಷ್ಟ್ರೀಯ ನಿರ್ಬಂಧಗಳ ಅಡಿಯಲ್ಲಿದೆ.  ದೀರ್ಘಕಾಲದ ಆಹಾರ ಕೊರತೆಯಿಂದ ಬಳಲುತ್ತಿರುವ ಉತ್ತರಕೊರಿಯಾ ಪ್ರಜೆಗಳ ಹೊಟ್ಟೆ ತುಂಬಿಸಲು  ಹೆಣಗಾಡುತ್ತಿದೆ.

ಕಳೆದ ವರ್ಷ ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಸರಣಿ ಚಂಡಮಾರುತಗಳು ದೇಶದ ಕುಸಿಯುತ್ತಿರುವ ಆರ್ಥಿಕತೆಯ ಮೇಲೆ ಇನ್ನಷ್ಟು ಹೊರೆಯನ್ನು ಹೇರಿವೆ. ತಾನು ತೀವ್ರ ಆಹಾರ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಉತ್ತರ ಕೊರಿಯ ಒಪ್ಪಿಕೊಂಡಿದೆ.

ಉತ್ತರ ಕೊರಿಯಾ ಈ ವರ್ಷ 56 ಲಕ್ಷ ಟನ್ ಧಾನ್ಯವನ್ನು  ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಎಫ್‌ಎಒ ವರದಿಯಲ್ಲಿ ತಿಳಿಸಲಾಗಿದೆ. ಇದು ದೇಶದ ಸಂಪೂರ್ಣ ಜನಸಂಖ್ಯೆಗೆ ಹೊಟ್ಟೆ ತುಂಬಿಸಲು ಅಗತ್ಯವಿರುವ ಮೊತ್ತಕ್ಕಿಂತ ಸುಮಾರು 11 ಲಕ್ಷ ಟನ್​​ಗಳಷ್ಟು ಕಡಿಮೆಯಾಗಿದೆ. ಇನ್ನು ಅಧಿಕೃತವಾಗಿ 205,000 ಟನ್‌ಗಳಷ್ಟು ವಾಣಿಜ್ಯ ಆಮದಿಗೆ ಯೋಜಿಸಲಾಗಿದ್ದು, ಉತ್ತರ ಕೊರಿಯಾವು ಸುಮಾರು 8,60,000 ಟನ್‌ಗಳ ಆಹಾರ ಕೊರತೆಯನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ.

The post ಉತ್ತರ ಕೊರಿಯದಲ್ಲಿ ಈ ವರ್ಷ 8,60,000 ಟನ್ ಆಹಾರ ಕೊರತೆ appeared first on News First Kannada.

Source: newsfirstlive.com

Source link