ಇನ್ವೆಸ್ಟ್​​ಮೆಂಟ್​ ಮಾಡೋದಾಗಿ ನಂಬಿಸಿ ವ್ಯಕ್ತಿಗೆ ಲಕ್ಷ ಲಕ್ಷ ವಂಚಿಸಿದ ಖದೀಮರು

ಬೆಂಗಳೂರು: ಹೊಸ ಉದ್ಯಮ ಆರಂಭ ಮಾಡಲು ಆನ್​​ಲೈನ್​​ನಲ್ಲಿ ಹೂಡಿಕೆದಾರರನ್ನು ಹುಡುಕುತ್ತಿದ್ದ ವ್ಯಕ್ತಿಗೆ, ಖದೀಮರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ವಿಧಾನಸೌಧ ಪೊಲೀಸರು ಆರೋಪಿಗಳನ್ನ ಅರೆಸ್ಟ್​ ಮಾಡಿದ್ದಾರೆ.

ಬೆಯೇಕ್ ಸ್ಯಾಮ್ಯುಯೆಲ್ ರೌಲ್ ಮತ್ತು ಜಾನ್ ಬಂಧಿತರು. ಆಂಧ್ರ ಮೂಲದ ವ್ಯಕ್ತಿಗೆ 20 ಲಕ್ಷ ರೂಪಾಯಿ ವಂಚನೆ ಮಾಡಿ ಆರೋಪಿಗಳು ಎಸ್ಕೇಪ್​ ಆಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಪ್ರಕರಣ?
ಮೆಡಿಕಲ್ ಸ್ಟೋರ್ ಓಪನ್ ಮಾಡುತ್ತಿದ್ದೀನಿ, ಇದಕ್ಕಾಗಿ ಕೋ ಇನ್ವೆಸ್ಟರ್​​​ಗಳು ಬೇಕಾಗಿದ್ದಾರೆ ಅಂತಾ ಆಂಧ್ರಪ್ರದೇಶ ಮೂಲಕ ವ್ಯಕ್ತಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಅವರನ್ನು ಸಂಪರ್ಕ ಮಾಡಿದ್ದ ಆರೋಪಿಗಳು ಕಳೆದ ಜೂನ್ 24 ರಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮೀಟ್​ ಮಾಡಿ ಮಾತುಕತೆ ನಡೆಸಿದ್ದರು.

ಈ ವೇಳೆ ಮೆಡಿಕಲ್ ಸ್ಟೋರ್​​ಗೆ ಬಂಡವಾಳ ಹೂಡಿಕೆ ಮಾಡುವುದಾಗಿ ಹೇಳಿದ್ದ ಆರೋಪಿಗಳು, ನಮ್ಮ ಬಳಿ ಭಾರತದ ಕರೆನ್ಸಿ ಇಲ್ಲ, ಡಾಲರ್ ಮಾತ್ರ ಇದೆ. ಡಾಲರ್ ಎಕ್ಸ್ಚೇಂಜ್ ಮಾಡಬೇಕಾದರೆ 20 ಲಕ್ಷ ರೂಪಾಯಿ ಹಣ ಬೇಕು. ಅಷ್ಟು ಹಣ ನೀವು ಕೊಟ್ಟರೆ 1 ಮಿಲಿಯನ್ ಅಮೆರಿಕನ್ ಡಾಲರ್​ ನಿಮಗೆ ನೀಡ್ತೀವಿ ಅಂತ ಹೇಳಿದ್ದರು ಎನ್ನಲಾಗಿದೆ.

ಇನ್ವೆಸ್ಟ್​​ಮೆಂಟ್​ ಮಾಡೋದಾಗಿ ನಂಬಿಸಿ ವ್ಯಕ್ತಿಗೆ ಲಕ್ಷ ಲಕ್ಷ ವಂಚಿಸಿದ ಖದೀಮರುಇದರಂತೆ ಆರೋಪಿಗಳಿಗೆ 20 ಲಕ್ಷ ರೂಪಾಯಿ ನೀಡಿದ್ದ ವ್ಯಕ್ತಿ ಅವರಿಂದ ಡಾಲರ್ ಪಡೆದುಕೊಂಡಿದ್ದರು. ಆದರೆ ಕೆಲ ದಿನಗಳ ಬಳಿಕ ಡಾಲರ್​ ಹಣ ಚಲಾವಣೆ ಆಗದ ಕಾರಣ ಮತ್ತೆ ಆರೋಪಿಗಳಿಗೆ ಕರೆ ಮಾಡಿ ತಮ್ಮ ಹಣವನ್ನು ವಾಪಸ್ ನೀಡಲು ಕೇಳಿದ್ದರು. ಇದರಂತೆ ಹಣ ನೀಡುವ ಸಂದರ್ಭದಲ್ಲಿ ಎರಡು ಸಾವಿರ ಮುಖಬೆಲೆಯ ಇಪ್ಪತ್ತು ಲಕ್ಷ ನಕಲಿ ನೋಟು ನೀಡಿ ಆರೋಪಿಗಳು ಎಸ್ಕೇಪ್ ಆಗಿದ್ದರು ಅಂತ ತಿಳಿದುಬಂದಿದೆ.

ತಮಗೆ ಕೊಟ್ಟಿರುವುದು ನಕಲಿ ನೋಟು ಎಂದು ತಿಳಿದ ವ್ಯಕ್ತಿ ವಿಧಾನಸೌಧ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಆರೋಪಿಗಳನ್ನು ಬಂಧನ ಮಾಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

The post ಇನ್ವೆಸ್ಟ್​​ಮೆಂಟ್​ ಮಾಡೋದಾಗಿ ನಂಬಿಸಿ ವ್ಯಕ್ತಿಗೆ ಲಕ್ಷ ಲಕ್ಷ ವಂಚಿಸಿದ ಖದೀಮರು appeared first on News First Kannada.

Source: newsfirstlive.com

Source link