ವಿಜಯಪುರದಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರ.. 10ಕ್ಕೂ ಅಧಿಕ ವಿದ್ಯುತ್ ಕಂಬ-ಮರಗಳು ನೆಲಸಮ

ವಿಜಯಪುರದಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರ.. 10ಕ್ಕೂ ಅಧಿಕ ವಿದ್ಯುತ್ ಕಂಬ-ಮರಗಳು ನೆಲಸಮ

ವಿಜಯಪುರ: ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಇದರ ಪರಿಣಾಮ ಹಲವೆಡೆ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ.

blankನಿನ್ನೆ ಸಾಯಂಕಾಲ ಆಲಮೇಲ ಪಟ್ಟಣ ಸೇರಿ ಸುತ್ತಮುತ್ತಲು ಬಿರುಗಾಳಿ ಸಹಿತ  ಭಾರೀ ಮಳೆ ಸುರಿದ ಪರಿಣಾಮ ಆಲಮೇಲ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. 10ಕ್ಕು ಅಧಿಕ ವಿದ್ಯುತ್​ ಕಂಬಗಳು ಹಾಗೂ ರಸ್ತೆಬದಿಯ ಮರಗಳು ಧರಾಶಾಯಿಯಾಗಿವೆ.

blankಭಾರೀ ಪ್ರಮಾಣದ ಮಳೆನೀರು ಹರಿದು ರಸ್ತೆಗಳು ಹಳ್ಳದಂತಾಗಿವೆ. ಆಲಮೇಲ-ಸಿಂದಗಿ ರಸ್ತೆಬದಿಯ ರೈತರ ಜಮೀನುಗಳಲ್ಲಿ ಮಳೆ ನೀರು ನಿಂತು, ಜಮೀನುಗಳು ಕೆರೆಯಂತಾಗಿವೆ.

blank

The post ವಿಜಯಪುರದಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರ.. 10ಕ್ಕೂ ಅಧಿಕ ವಿದ್ಯುತ್ ಕಂಬ-ಮರಗಳು ನೆಲಸಮ appeared first on News First Kannada.

Source: newsfirstlive.com

Source link