2 ಲಕ್ಷ ಮೌಲ್ಯದ ಚಿನ್ನಾಭರಣ, ಹಣವಿರುವ ಬ್ಯಾಗ್ ಹಿಂದಿರುಗಿಸಿದ ಆಟೋ ಚಾಲಕ..!

– ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಚಿತ್ರದುರ್ಗ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟುಹೋಗಿದ್ದ ಬ್ಯಾಗನ್ನು ಪೊಲೀಸರಿಗೆ ಮರಳಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ಹರಿಪ್ರಿಯ ಎಂಬ ಮಹಿಳೆ 2 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಹಾಗೂ 2 ಮೊಬೈಲ್ ಇದ್ದ ಬ್ಯಾಗ್ ಅನ್ನು ಆಟೋದಲ್ಲೇ ಬಿಟ್ಟುಹೋಗಿದ್ದರು. ಇದನ್ನು ಗಮನಿಸಿದ ಚಾಲಕ ಕೂಡಲೇ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಉಡುಪಿ-ಚಿಕ್ಕಮಗಳೂರು ಜನತೆಗೆ ಮೊದಲ ಧನ್ಯವಾದ: ಶೋಭಾ ಕರಂದ್ಲಾಜೆ

ಜೂನ್ 29ರ ಸಂಜೆ 5 ಗಂಟೆ ವೇಳೆ ಮಹಿಳೆ ಚಂದ್ರವಳ್ಳಿಯಿಂದ ಆಟೋದಲ್ಲಿ ಮನೆಗೆ ತೆರಳಿದ್ದರು. ಇಳಿಯುವ ಗಡಿಬಿಡಿಯಲ್ಲಿ ತಮ್ಮ ಬ್ಯಾಗ್ ಅನ್ನು ಆಟೋದಲ್ಲೇ ಮರೆತು ಬಿಟ್ಟು ಹೋಗಿದ್ದರು. ಕೆಲ ಸಮಯದ ನಂತರ ಆಟೋ ಚಾಲಕ ಆ ಬ್ಯಾಗ್ ಅನ್ನು ಗಮನಿಸಿದಾಗ ಅದರಲ್ಲಿ 2 ಲಕ್ಷ 50 ಸಾವಿರ ಮೌಲ್ಯದ ಮಾಂಗಲ್ಯಸರ, ಎರಡು ಮೊಬೈಲ್ ಹಾಗು ಹಣ ಇರುವುದು ಗೊತ್ತಾಗಿದೆ.

ಕುಡಲೇ ಆಟೋ ಚಾಲಕ ಸೈಯದ್ ಯಾಹಿಯಾ ಅವರು ಆ ಬ್ಯಾಗ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಬ್ಯಾಗ್ ವಾರಸುದಾರರನ್ನು ಪತ್ತೆ ಹಚ್ಚಿ ಹಿಂದಿರುಗಿಸಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಗೆ ಕೋಟೆನಾಡಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಎಸ್‍ಪಿ ರಾಧಿಕಾ ಅವರು ಸನ್ಮಾನಿಸಿ, ಈ ಕಾರ್ಯ ಇತರೆ ಚಾಲಕರಿಗೆ ಮಾದರಿ ಅಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

The post 2 ಲಕ್ಷ ಮೌಲ್ಯದ ಚಿನ್ನಾಭರಣ, ಹಣವಿರುವ ಬ್ಯಾಗ್ ಹಿಂದಿರುಗಿಸಿದ ಆಟೋ ಚಾಲಕ..! appeared first on Public TV.

Source: publictv.in

Source link