ಯೋಗೇಶ್ ಗೌಡ ಕೊಲೆ‌ ಕೇಸ್​​ನಲ್ಲಿ ವಿನಯ್ ಕುಲಕರ್ಣಿಗೆ ಬಿಗ್ ಶಾಕ್.. ಮಾಜಿ ಆಪ್ತ ಕಾರ್ಯದರ್ಶಿ ಅರೆಸ್ಟ್​

ಯೋಗೇಶ್ ಗೌಡ ಕೊಲೆ‌ ಕೇಸ್​​ನಲ್ಲಿ ವಿನಯ್ ಕುಲಕರ್ಣಿಗೆ ಬಿಗ್ ಶಾಕ್.. ಮಾಜಿ ಆಪ್ತ ಕಾರ್ಯದರ್ಶಿ ಅರೆಸ್ಟ್​

ಧಾರವಾಡ: ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ‌ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಿಬಿಐ ಬಿಗ್ ಶಾಕ್ ನೀಡಿದೆ.

ವಿನಯ್ ಕುಲಕರ್ಣಿ ಸುಪ್ರೀಂಕೋರ್ಟ್​​ನಲ್ಲಿ‌ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಈ ಹೊತ್ತಲ್ಲಿ ವಿನಯ್ ಕುಲಕರ್ಣಿಯ ಮಾಜಿ ಆಪ್ತ ಕಾರ್ಯದರ್ಶಿಯನ್ನ ಸಿಬಿಐ ಬಂಧಿಸಿದೆ. ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಬಂಧಿತ ವ್ಯಕ್ತಿ.

blank

ವಿನಯ್ ಕುಲಕರ್ಣಿ ಸಚಿವರಾಗಿದ್ದಾಗ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಈ ಸಂದರ್ಭದಲ್ಲಿ ಸೋಮು, ಮೂರು ವರ್ಷಗಳ ಕಾಲ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದ. ಇಂದು ಬೆಳಂಬೆಳ್ಳಗೆ ಕುಲಕರ್ಣಿ ತಂಡಕ್ಕೆ ಶಾಕ್ ನೀಡಿದ ಸಿಬಿಐ, ಸೂಕ್ತ ಸಾಕ್ಷ್ಯಾಧಾರಗಳ ಸಮೇತ ಸೋಮು‌ನನ್ನ ಅರೆಸ್ಟ್​ ಮಾಡಿದೆ. ಈ ಹಿನ್ನೆಲೆ ವಿನಯ್ ಕುಲಕರ್ಣಿ ಆಪ್ತರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ ಅಂತ ಹೇಳಲಾಗ್ತಿದೆ.

blank

ಯೋಗೇಶ್ ಗೌಡ ಹತ್ಯೆಯ ಮುಂಚಿನ ಎಲ್ಲ ಮಾಹಿತಿ ಸೋಮುಗೆ ಗೊತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಸಿಬಿಐ ವಿಚಾರಣೆ ನಡೆಸುತ್ತಿದೆ. ಯೋಗೇಶ್​​ ಹತ್ಯೆಗೂ ಮುನ್ನ ಸೋಮು ನ್ಯಾಮಗೌಡ ವಿನಯ್ ಕುಲಕರ್ಣಿಯ ದೆಹಲಿ ಟೂರ್ ಪ್ಲಾನ್ ಆರೇಂಜ್ ಮಾಡಿದ್ದನಂತೆ. ಹತ್ಯೆಯ ಎರಡು ದಿನ ಮುಂಚಿತವಾಗಿ ವಿನಯ್ ಕುಲಕರ್ಣಿ ನಕಲಿ ಪ್ರವಾಸದ ವೇಳಾ ಪಟ್ಟಿ ತಯಾರಿಸಿದ್ದ. ಹತ್ಯೆ ನಡೆದ ಮೇಲೆ ತಮ್ಮ‌ ಮೇಲೆ‌ ಆರೋಪ ಬರಬಾರದು ಅಂತ ದೆಹಲಿ ಪ್ರವಾಸದ ನಾಟಕವಾಡಿದ್ದರು ಎಂದು ಆರೋಪಿಸಲಾಗಿದೆ.

ಅಷ್ಟೇ ಅಲ್ಲ ದೆಹಲಿ ಪ್ರವಾಸದಲ್ಲಿ ಇದ್ದರು ಎಂದು ಬಿಂಬಿಸಲು ವಿಮಾನದ ಟಿಕೆಟ್ ಬುಕ್ ಮಾಡಿದ್ದ ಎನ್ನಲಾಗಿದೆ. ಆದ್ರೆ ವಿನಯ್ ಕುಲಕರ್ಣಿ ದೆಹಲಿಗೆ ಹೋಗಿರಲಿಲ್ಲ, ಬೆಂಗಳೂರಿನ ಮೌರ್ಯ್ಯ ಹೋಟೆಲ್‌ನಲ್ಲಿ ತಂಗಿದ್ದರು. ಯೋಗೇಶ್ ಗೌಡ ಹತ್ಯೆಯ ಆರೋಪಿಗಳನ್ನು ಅದೇ ರಾತ್ರಿ ಸೋಮು‌ ನ್ಯಾಮಗೌಡ ಹಾಗು ವಿನಯ್ ಕುಲಕರ್ಣಿ ಭೇಟಿಯಾಗಿದ್ದರು ಅನ್ನೋ ಮಾತುಗಳು ಕೇಳಿಬಂದಿವೆ. ಈ ಸಂಬಂಧ ಸಿಬಿಐ ತನಿಖೆ ಮುಂದುವರೆಸಿದೆ.

The post ಯೋಗೇಶ್ ಗೌಡ ಕೊಲೆ‌ ಕೇಸ್​​ನಲ್ಲಿ ವಿನಯ್ ಕುಲಕರ್ಣಿಗೆ ಬಿಗ್ ಶಾಕ್.. ಮಾಜಿ ಆಪ್ತ ಕಾರ್ಯದರ್ಶಿ ಅರೆಸ್ಟ್​ appeared first on News First Kannada.

Source: newsfirstlive.com

Source link