ಬಯೋ ಬಬಲ್​ನಲ್ಲಿದ್ದ ಆಂಗ್ಲ ಆಟಗಾರರಿಗೆ ಸೋಂಕು- ಪಾಠ ಕಲಿತಿಲ್ವಾ BCCI?

ಬಯೋ ಬಬಲ್​ನಲ್ಲಿದ್ದ ಆಂಗ್ಲ ಆಟಗಾರರಿಗೆ ಸೋಂಕು- ಪಾಠ ಕಲಿತಿಲ್ವಾ BCCI?

ಇಂಗ್ಲೆಂಡ್​​ ಸರಣಿಗೂ ಮುನ್ನ ಸಿಕ್ಕಿರುವ ಬಿಡುವಿನಲ್ಲಿ, ಟೀಮ್​ ಇಂಡಿಯಾ ಆಟಗಾರರು ಆಂಗ್ಲರ ನಾಡಲ್ಲಿ ಸುತ್ತಾಟ ನಡೆಸ್ತಾ ಇದ್ದಾರೆ. ಬಯೋ ಬಬಲ್​ ತೊರೆದು ರಿಲ್ಯಾಕ್ಸ್​​​ ಮೂಡ್​ಗೆ ಜಾರೋಕೆ ಬಿಸಿಸಿಐ ಕೂಡ ಸಮ್ಮತಿ ನೀಡಿದೆ. ಇಂತಹ ಕೊರೊನಾ ಕಾಲಘಟ್ಟದಲ್ಲಿ ಮಹತ್ವದ ಟೆಸ್ಟ್​​ ಸರಣಿ ಮುಂದಿರುವಾಗ, ಬಯೋ ಬಬಲ್​ ನಿಯಮಗಳನ್ನ ಸಡಿಲ ಗೊಳಿಸಿರೋ ನಡೆ ಎಷ್ಟು ಸರಿ..? ಎಂಬ ಪ್ರಶ್ನೆ ಕೇಳಿಬಂದಿದೆ.

ಮುಂಬೈನಲ್ಲಿ ಕ್ವಾರಂಟೀನ್​ ಅವಧಿ ಮುಗಿಸಿ ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಿದ್ದ ಟೀಮ್​ ಇಂಡಿಯಾ, ಅಲ್ಲಿ ಮತ್ತೆ 3 ದಿನಗಳ ಕಠಿಣ ಕ್ವಾರಂಟೀನ್​ಗೆ ಒಳಗಾಗಿತ್ತು. ಬಳಿಕ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯವನ್ನಾಡಿದ ಕೊಹ್ಲಿ ಪಡೆ, ಸದ್ಯ ವಿಶ್ರಾಂತಿಯಲ್ಲಿದೆ. ​ ಫೈನಲ್​ ಫೈಟ್​​​ ಮುಗಿದ ಮರುದಿನವೇ ಕೊಹ್ಲಿ ಬಾಯ್ಸ್​​ಗೆ ಬಯೋ ಸೆಕ್ಯೂರ್​ ನಿಯಮಗಳಿಂದ ಮುಕ್ತಿ ನೀಡಲಾಗಿದ್ದು, ಆಟಗಾರರು ಸದ್ಯ ಯುಕೆಯಲ್ಲಿ ಸುತ್ತಾಟ ನಡೆಸ್ತಿದ್ದಾರೆ.

 

View this post on Instagram

 

A post shared by Mayank Agarwal (@mayankagarawal)

ಫೈನಲ್​ ಪಂದ್ಯ ಮುಗಿದ ದಿನದಿಂದ ಇಂಗ್ಲೆಂಡ್​​ ವಿರುದ್ಧದ ಸರಣಿ ಆರಂಭಕ್ಕೆ ಸುದೀರ್ಘ 6 ವಾರಗಳ ಅಂತರವಿತ್ತು. 5 ಪಂದ್ಯಗಳ ಟೆಸ್ಟ್​​ ಸರಣಿ ಮುಗಿಯೋದು 6 ವಾರಗಳ ನಂತರ. ಇಷ್ಟು ಸುದೀರ್ಘ ಕಾಲ ಬಯೋ ಸೆಕ್ಯೂರ್​ ವಾತಾವರಣದಲ್ಲಿರೋದು, ಮಾನಸಿಕ ಒತ್ತಡವನ್ನ ಉಂಟು ಮಾಡಬಹುದು ಅನ್ನೋ ಕಾರಣಕ್ಕೆ ನಿಯಮಗಳನ್ನ ಬಿಸಿಸಿಐ ಸಡಿಲಿಸಿದೆ. ಈ ನಿರ್ಧಾರ ಸರಿಯಾಗೇ ಇತ್ತು. ಆದ್ರೆ ಈಗ ಕೊರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿದೆ. ಹೀಗಾಗಿ ಮತ್ತೆ ಆಟಗಾರರನ್ನ ಸುರಕ್ಷಿತ ವಲಯದಲ್ಲಿ ಬಿಸಿಸಿಐ ಇರಿಸಬೇಕು ಎಂಬ ಚರ್ಚೆ ಆರಂಭವಾಗಿದೆ.

‘ಬಬಲ್​ನಲ್ಲೂ ಆಪಾಯವಿದೆ’..!
‘ಜೀವವರಕ್ಷಕ ವಾತಾವರಣದಲ್ಲಿ ಡೆಲ್ಟಾ ವೈರಸ್ ಪ್ರವೇಶಿಸಿದ್ರೆ, ಪ್ರಸರಣವು ವೇಗವಾಗಿ ಆಗುವ ಅಪಾಯ ಇದೆ’
-ಟಾಮ್ ಹ್ಯಾರಿಸನ್, ECB CEO

ಇಂಗ್ಲೆಂಡ್ ತಂಡದ 7 ಸದಸ್ಯರಿಗೆ ಕೊರೊನಾ​ ಸೋಂಕು
ಕಳೆದ ವಾರ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ತಂಡವನ್ನೇ, ಪಾಕಿಸ್ತಾನ ವಿರುದ್ಧದ ಸರಣಿಗೆ ಇಂಗ್ಲೆಂಡ್​​ ಬೋರ್ಡ್​ ಪ್ರಕಟಿಸಿತ್ತು. ಆದ್ರೆ ಬಯೋ ಬಬಲ್​ನಲ್ಲಿದ್ದು ಸರಣಿಯನ್ನಾಡಿದ ತಂಡದ 7 ಸದಸ್ಯರಿಗೆ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಪರಿಣಾಮ ಪಾಕ್​ ವಿರುದ್ಧದ ಸರಣಿಗೆ, ಇಂಗ್ಲೆಂಡ್​ ಇದೀಗ ಸಂಪೂರ್ಣ ಹೊಸ ತಂಡವನ್ನ ಪ್ರಕಟಿಸಿದೆ. ಈ ಒಂದು ಪ್ರಹಸನವೇ ಭಾರತೀಯ ಆಟಗಾರರನ್ನ ಮತ್ತೇ ಬಯೋ ಸೆಕ್ಯೂರ್​​ ವಲಯದಲ್ಲಿರಿಸಬೇಕು ಎಂಬ ಕೂಗನ್ನ ಹುಟ್ಟು ಹಾಕಿದೆ.

 

View this post on Instagram

 

A post shared by Ajinkya Rahane (@ajinkyarahane)

‘ಯಥಾಸ್ಥಿತಿ ಮುಂದುವರೆಯುತ್ತದೆ’
‘ಇಸಿಬಿ ಮತ್ತು ಸ್ಥಳೀಯ ಆರೋಗ್ಯ ಸಿಬ್ಬಂದಿಯ ಸಂಪರ್ಕದಲ್ಲಿದ್ದೇವೆ. ಹೊಸದಾಗಿ ಶಿಷ್ಟಾಚಾರ ಜಾರಿಗೆ ಬಂದರೆ ಕೂಡಲೇ ಪಾಲಿಸಲಾಗುವುದು’
-ಬಿಸಿಸಿಐ ಹಿರಿಯ ಅಧಿಕಾರಿ

ಆದ್ರೆ ಬಿಸಿಸಿಐ ಮಾತ್ರ ಟೀಮ್​ ಇಂಡಿಯಾ ಯಥಾಸ್ಥಿತಿ ಮುಂದುವರೆಯುತ್ತದೆ ಎಂದು ಹೇಳ್ತಿದೆ. ಆಟಗಾರರ ಒಂದು ಡೋಸ್​ ವ್ಯಾಕ್ಸಿನ್​ ಆಗಿದೆ. ನಾವು ಆರೋಗ್ಯ ಸಿಬ್ಬಂದಿಯ ಸಂಪರ್ಕದಲ್ಲಿದ್ದೇವೆ ಅನ್ನೋದು ಬಿಸಿಸಿಐ ಮೂಲದ ಮಾಹಿತಿಯಾಗಿದೆ. ಆದ್ರೆ ಇಂಗ್ಲೆಂಡ್​​ ಕ್ರಿಕೆಟ್​ ಮಂಡಳಿಯ ಸಿಇಒ, ಡೆಲ್ಟಾ ವೈರಸ್​​ ಪ್ರಸರಣದ ವೇಗದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಎರಡು ಕ್ರಿಕೆಟ್​​ ಮಂಡಳಿಗಳ ತದ್ವಿರುದ್ಧ ನಿಲುವುಗಳು, ಇದೀಗ ಹಲವು ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿದೆ.

The post ಬಯೋ ಬಬಲ್​ನಲ್ಲಿದ್ದ ಆಂಗ್ಲ ಆಟಗಾರರಿಗೆ ಸೋಂಕು- ಪಾಠ ಕಲಿತಿಲ್ವಾ BCCI? appeared first on News First Kannada.

Source: newsfirstlive.com

Source link