ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

ಬಿಗ್ ಬಾಸ್ ನೀಡಿದ್ದ ಚಿನ್ನದ ಮೊಟ್ಟೆ ಟಾಸ್ಕ್ ವೇಳೆ ಪ್ರಿಯಾಂಕ ತಿಮ್ಮೇಶ್ ತಲೆಯ ಮೇಲೆ ದಿವ್ಯಾ ಸುರೇಶ್ ಮೊಟ್ಟೆ ಒಡೆದು ಗೆಲ್ಲುತ್ತಾರೆ. ಇದರಿಂದ ತಮ್ಮ ಬಳಿ ಇದ್ದ ಸಂಪೂರ್ಣ ಹಣ ಕಳೆದುಕೊಂಡ ಪ್ರಿಯಾಂಕ ತಿಮ್ಮೇಶ್, ಶಮಂತ್‍ರಿಂದಾಗಿ ದಿವ್ಯಾ ಸುರೇಶ್ ಗೆದ್ದರು ಎಂಬ ಕಾರಣಕ್ಕೆ ಶಮಂತ್ ಲಾಕರ್‌ನಲ್ಲಿದ್ದ ಹಣವನ್ನು ಕದಿಯಲು ಮುಂದಾಗುತ್ತಾರೆ.

ಈ ವೇಳೆ ಲಾಕರ್‍ನಲ್ಲಿದ್ದ ಹಣವನ್ನು ಕಾಪಾಡಿಕೊಳ್ಳಲು ಶಮಂತ್, ಪ್ರಿಯಾಂಕ ತಿಮ್ಮೇಶ್ ಜೊತೆ ಡೀಲ್ ಮಾಡಿಕೊಳ್ಳುತ್ತಾರೆ. ನಾನು ಈಗ ನಿನಗೆ 14 ಸಾವಿರ ರೂ. ನೀಡುತ್ತೇನೆ. ಆದರೆ ಮುಂದಿನ ಟಾಸ್ಕ್‌ನಲ್ಲಿ ನೀನು ಎಷ್ಟೇ ಗೆದ್ದರೂ 25 ಸಾವಿರ ಮೇಲೆ ದಾಟುವುದಿಲ್ಲ. ಆಗ ನಿನ್ನ ಬಳಿ ಇರುವ ಹಣದಲ್ಲಿ ನನಗೆ ಪಾಲು ನೀಡುವುದಾಗಿ ಪ್ರಾಮಿಸ್ ಮಾಡಿದರೆ ಕೊಡುತ್ತೇನೆ ಎನ್ನುತ್ತಾರೆ. ಅದರಂತೆ ಡೀಲ್ ಓಕೆ ಮಾಡಿಕೊಂಡು ಪ್ರಿಯಾಂಕಗೆ ಶಮಂತ್ ಹಣ ನೀಡುತ್ತಾರೆ.

ನಂತರ ರಾತ್ರಿ ಗಾರ್ಡನ್ ಏರಿಯಾದಲ್ಲಿ ಶಮಂತ್, ಪ್ರಶಾಂತ್, ಚಕ್ರವರ್ತಿ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಪ್ರಿಯಾಂಕ ಬಳಿ 14,800ರೂ ಇತ್ತು. ಸದ್ಯ ಅವರ ಲಾಕರ್‌ನಲ್ಲಿ 14,800 ರೂ ಇಟ್ಟಿದ್ದೇನೆ ಅದು ನನಗೆ ಆಮೇಲೆ ವಾಪಸ್ ಬರುತ್ತದೆ ಎಂದು ಹೇಳಿದ್ದಾರೆ. ಆಗ ಚಕ್ರವರ್ತಿಯವರು ನಿನ್ನ ಬಳಿ ಪ್ರಿಯಾಂಕ ಹಣವನ್ನು ಕಿತ್ತುಕೊಂಡು ಹೋಗಿದ್ದಾರಾ ಎಂದಾಗ, ಲಾಕರ್‌ನಲ್ಲಿದ್ದ ಎಲ್ಲವನ್ನು ಎತ್ತಿಕೊಂಡು ಹೋಗಿ ಬಿಟ್ಟಿದ್ದರು ಎಂದು ಶಮಂತ್ ಹೇಳುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮೊಟ್ಟೆ ಒಡೆದಿರುವುದು ದಿವ್ಯಾ ಸುರೇಶ್, ಹಣ ಕೊಟ್ಟಿರುವುದು ಇವನು, ಇವನೆಷ್ಟು ಮುಟ್ಟಾಳ ಎಂದು ಪ್ರಶಾಂತ್ ಬಳಿ ಮಾತು ಒಪ್ಪಿಸುತ್ತಾ, ಹೊಸ ಚಾಪ್ಟರ್ ಎಂದು ಅಣುಕಿಸುತ್ತಾರೆ.

blank

ಈ ವೇಳೆ ಶಮಂತ್ ನಗುತ್ತಾ ನಿಮಗೇಕೆ, ನೋಡಿ ನಾನು ಒಂದು ಪ್ರಾಮಿಸ್ ಮೇಲಿನ ನಂಬಿಕೆಯಿಂದ ಹಣ ನೀಡಿದ್ದೇನೆ ಎನ್ನುತ್ತಾರೆ. ಅದಕ್ಕೆ ಚಕ್ರವರ್ತಿಯವರು ನಿನ್ನನ್ನು ನಾನು ಕರೆಸಿ, ನಿನ್ನ ತಲೆಯ ಮೇಲೆ ಮೊಟ್ಟೆ ಹೊಡೆಸಿ, ಇವನಿಗೆ ದುಡ್ಡು ಕೊಟ್ಟು, ಇಷ್ಟೇಲ್ಲಾ ನಾವು ಈ ಹುಡುಗನಿಗೋಸ್ಕರ ಮಾಡಿದರೆ, ಒಂದು ಹುಡುಗಿಗೆ ಹೆದರಿಕೊಂಡು ಹಣ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ಹೇಳುತ್ತಾರೆ.

blank

ಈ ಮಧ್ಯೆ ಹೆದರಿಕೊಂಡಿರುವ ಪದವನ್ನು ವಾಪಸ್ ತೆಗೆದುಕೊಳ್ಳಿ ಎಂದು ಶಮಂತ್ ಹೇಳುವ ವೇಳೆ ಪ್ರಶಾಂತ್, ಹಾಗದರೆ ಇವನು ಪ್ರಿಯಾಂಕಗೆ ದುಡ್ಡು ನೀಡಿದ್ದಾನಾ ಎಂದು ಚಕ್ರವರ್ತಿಯವರನ್ನು ಪ್ರಶ್ನಿಸುತ್ತಾರೆ. ಬಳಿಕ ಹಣ ಕೊಟ್ಟಿರುವ ವಿಚಾರ ತಿಳಿದು, ಸೋಫಾ ಮೇಲೆ ಮಲಗಿಕೊಂಡು ನಗುತ್ತಾ, ಬಳಿಕ ಎದ್ದು ತಮ್ಮ ಎರಡು ಚಪ್ಪಲಿಗಳನ್ನು ಪ್ರಶಾಂತ್, ಶಮಂತ್ ಮೇಲೆ ಎಸೆದಿದ್ದಾರೆ.

blank

ನಂತರ ಈಗ ನೀವು ನಗುತ್ತಿದ್ದೀರಾ ಅಲ್ವಾ, ನಾಳೆಯವರೆಗೂ ನನಗೆ ಟೈಮ್ ಕೊಡಿ ಎನ್ನುತ್ತಾರೆ. ಆಗ ಚಕ್ರವರ್ತಿಯವರು, ಮೊಟ್ಟೆ ಹೊಡೆದಿದ್ದು ಡಿಎಸ್, ಜಗಳ ಆಡಿದ್ದು ಡಿಎಸ್, ಇವನಿಗೋಸ್ಕರ ನೀನು ಅಷ್ಟೇಲ್ಲಾ ತ್ಯಾಗ ಮಾಡಿದೆ ಆದರೆ ಇವನು ಪ್ರಿಯಾಂಕಳನ್ನು ಸೇವ್ ಮಾಡುತ್ತಿದ್ದಾನೆ ಎಂದು ಪ್ರಶಾಂತ್‍ಗೆ ಹೇಳುತ್ತಾ ನಕ್ಕಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

The post ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ appeared first on Public TV.

Source: publictv.in

Source link