ಕರಾವಳಿಯಲ್ಲಿ RSS ವಿರುದ್ಧ ಡಿ‌.ಕೆ ಶಿವಕುಮಾರ್‌ ಪ್ರಯೋಗಿಸಿದ್ರಾ ಮತ್ಯಾಸ್ತ್ರ..?

ಕರಾವಳಿಯಲ್ಲಿ RSS ವಿರುದ್ಧ ಡಿ‌.ಕೆ ಶಿವಕುಮಾರ್‌ ಪ್ರಯೋಗಿಸಿದ್ರಾ ಮತ್ಯಾಸ್ತ್ರ..?

ಮಂಗಳೂರು: ಕರಾವಳಿಯ ಮೂರು ಜಿಲ್ಲೆಯ 19 ಕ್ಷೇತ್ರಗಳ ಪೈಕಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಶಾಸಕರು ಜಯಗಳಿಸಿದ್ದು 2 ಕ್ಷೇತ್ರಗಳಲ್ಲಿ ಮಾತ್ರ. ಈ ಹಿನ್ನೆಲೆಯಲ್ಲಿ ಆ ಮೂರು ಜಿಲ್ಲೆಯ ಮೀನುಗಾರ ಸಮುದಾಯದ ಮನವೊಲಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗ್ತಿದೆ.

ಮೊಗವೀರ, ಮೊಗೆರಾ, ಹರಿಕಾಂತ, ಕೊಂಕಣ ಖಾರ್ವಿ, ಜಾಲ್ದಿ, ಈಡಿಗ, ಮೇಸ್ತ ಸಮುದಾಯಗಳ ಮನವೊಲಿಕೆಗೆ ಶಿವಕುಮಾರ್​ ಮುಂದಾಗಿದ್ದಾರೆ. ಈ ಸಮುದಾಯಗಳೆಲ್ಲಾ ಆರ್‌ಎಸ್‌ಎಸ್‌ನ ಪಕ್ಕಾ ಬೆಂಬಲಿಗರಾಗಿದ್ದು, ಪರಿವಾರ ಸಂಘಟನೆಗಳಲ್ಲಿ ಇದೇ ಸಮುದಾಯದ ಕಾರ್ಯಕರ್ತರ ಪಾರುಪಾತ್ಯವಿದೆ. ಅದ್ರೆ ಈಗ ಸಂಕಷ್ಟದಲ್ಲಿರುವ ಈ ಸಮುದಾಯಗಳನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಶಿವಕುಮಾರ್ ತಂತ್ರ ರೂಪಿಸಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಇವರನ್ನು ಬಿಜೆಪಿಯಿಂದ ತಮ್ಮತ್ತ ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರಂತೆ ಶಿವಕುಮಾರ್.

ಮೀನುಗಾರರ ಭೇಟಿ ಬಳಿಕ ಡಿ.ಕೆ.ಶಿವಕುಮಾರ್ ಅವರ ಸಮಸ್ಯೆಗಳನ್ನ ಪಟ್ಟಿ ಮಾಡಿದ್ದಾರೆ. ಆ ಲಿಸ್ಟ್​ ನ್ಯೂಸ್​​ಫಸ್ಟ್​ಗೆ ಲಭ್ಯವಾಗಿದೆ.

  • 1. ಕರಾವಳಿ ಜಿಲ್ಲೆಯಲ್ಲಿ ಮೀನುಗಾರರ ಸಮುದಾಯದ ಮುಖಂಡರು ಹಾಗೂ ಮೀನುಗಾರಿಕಾ ಉದ್ಯಮಿಗಳ ಜೊತೆಗೆ ಶಿವಕುಮಾರ್ ಸಂವಾದ.
  • 2. ಪರಿಸ್ಥಿತಿ ಹೀಗೆ ಮುಂದುವರೆದ್ರೆ, ಡಿಸೆಂಬರ್‌ನಲ್ಲಿ ಮೀನುಗಾರಿಕೆ ಉದ್ಯಮವೇ ಮುಚ್ಚುವ ಭೀತಿಯಲ್ಲಿ ಮೀನುಗಾರರು.
  • 3. ದುಬಾರಿ ಬೆಲೆಯಲ್ಲಿ ವಾಣಿಜ್ಯ ವಿದ್ಯುತ್ ಬಳಕೆ ಹಿನ್ನೆಲೆಯಲ್ಲಿ, ಕರಾವಳಿಯ ಬಹುತೇಕ ಐಸ್ ಪ್ಲಾಂಟ್, ಫಿಶ್ ಮಿಲ್, ಫ್ರೀಜಿಂಗ್ ಪ್ಲಾಂಟ್ ಗಳು ನಷ್ಟದಲ್ಲಿವೆ.
  • 4. ಹೆಚ್ಚಿದ ಡಿಸೇಲ್ ಬೆಲೆ, ಯಾಂತ್ರಿಕೃತ ಮೀನುಗಾರಿಕೆ ಸ್ಥಗಿತಗೊಳ್ಳುವ ಭೀತಿ.
  • 5. ಕೋವಿಡ್-19 ಹಿನ್ನೆಲೆಯಲ್ಲಿ, ಮೀನುಗಾರಿಕಾ ಉದ್ಯಮಕ್ಕೆ ಪುನರ್‌ಜೀವನಗೊಳಿಸಲು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರಾಸಕ್ತಿ.
  • 6. 25 ಹೆಚ್.ಪಿ. ಔಟ್‌ಬೋರ್ಡ್ ಇಂಜಿನ್ ಉಪಯೋಗಿಸುವ ನಾಡದೋಣಿಗಳ ಸಂಖ್ಯೆ ಹೆಚ್ಚಾಗಿದ್ದು, ಸಿಗದ ಸೀಮೆಎಣ್ಣೆ ಸಬ್ಸಿಡಿ.
  • 7. ನಾಡದೋಣಿಯ ಹೊಸ ಪರ್ಮಿಟ್‌ಗಳಿಗೆ ಮುನ್ನೂರು ಲೀಟರ್ ಸೀಮೆಎಣ್ಣೆ ಬದಲಿಗೆ 40 ಲೀಟರ್ ಸೀಮೆಎಣ್ಣೆ ಪೂರೈಕೆ.
  • 8. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸದ ಮೀನುಗಾರಿಕಾ ಬೋಟ್‌ಗಳು. ಹಾಗಾಗಿ, ಎರಡು ವರ್ಷಗಳಿಂದ ಸ್ಥಳೀಯರಿಗೆ ಉದ್ಯೋಗವಿಲ್ಲ.
  • 9. ಸಣ್ಣ ಮೀನುಗಾರರಿಗೆ ಇನ್ನು ಸಿಗದ, ಕೇಂದ್ರ ಸರ್ಕಾರದ ಮಳೆಗಾಲದ ಸಹಾಯಧನ.
  • 10. ಸಹಕಾರಿ ಸಂಸ್ಥೆಗಳಲ್ಲಿ ಉದ್ಯಮಕ್ಕೆ ಸಾಲ ಸಿಗದೇ ಮೀನುಗಾರರ ಪರೆದಾಟ.

ಹೀಗೆ ಸಮಸ್ಯೆಗಳನ್ನು ಪಟ್ಟಿ ಮಾಡಿ, ನೇರವಾಗಿ ಕರಾವಳಿ ಭಾಗದಲ್ಲಿ ಹಸ್ತಕ್ಕೆ ವಿಜಯಮಾಲೆ ತೊಡಿಸಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗ್ತಿದೆ.

The post ಕರಾವಳಿಯಲ್ಲಿ RSS ವಿರುದ್ಧ ಡಿ‌.ಕೆ ಶಿವಕುಮಾರ್‌ ಪ್ರಯೋಗಿಸಿದ್ರಾ ಮತ್ಯಾಸ್ತ್ರ..? appeared first on News First Kannada.

Source: newsfirstlive.com

Source link