IPL 2021ರ ದ್ವಿತೀಯಾರ್ಧಕ್ಕೆ ಶ್ರೇಯಸ್ ಲಭ್ಯ -​​​​​​​​​​​​​​​​​​​​​​​​​​​​​​ಪಂತ್ ನಾಯಕತ್ವಕ್ಕೆ ತರುತ್ತಾ ಕುತ್ತು..?

IPL 2021ರ ದ್ವಿತೀಯಾರ್ಧಕ್ಕೆ ಶ್ರೇಯಸ್ ಲಭ್ಯ -​​​​​​​​​​​​​​​​​​​​​​​​​​​​​​ಪಂತ್ ನಾಯಕತ್ವಕ್ಕೆ ತರುತ್ತಾ ಕುತ್ತು..?

14ನೇ ಆವೃತ್ತಿಯ ಐಪಿಎಲ್ ಮೊದಲಾರ್ಧ ತಪ್ಪಿಸಿಕೊಂಡಿದ್ದ ಶ್ರೇಯಸ್, ದ್ವಿತೀಯಾರ್ಧದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದವನ್ನ ಕೂಡಿಕೊಳ್ತಿದ್ದಾರೆ. ಇದರಿಂದ ಸಹಜವಾಗೇ ಡೆಲ್ಲಿ ಬಳಗಕ್ಕೆ ದುಪ್ಪಟ್ಟು ಬಲ ಬಂದಂತಾಗಿದೆ. ಆದ್ರೆ ಶ್ರೇಯಸ್​ ಆಗಮನದಿಂದ, ಡೆಲ್ಲಿ ಕ್ಯಾಪಿಟಲ್ಸ್ ತಂಡದ​ ಕ್ಯಾಪ್ಟನ್ಸಿ ದಂಗಲ್ ಶುರುವಾಗಿದೆ.

ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಇಂಜುರಿಗೆ ಒಳಗಾಗಿದ್ದ ಶ್ರೇಯಸ್​ ಅಯ್ಯರ್, 14ನೇ ಆವೃತ್ತಿಯ ಮೊದಲಾರ್ಧದ ಐಪಿಎಲ್​ಗೆ ಗೈರಾಗಿದ್ದರು. ಭುಜದ ಶಸ್ತ್ರ ಚಿಕಿತ್ಸೆ ಕಾರಣ ಮೂರು ತಿಂಗಳ ವಿಶ್ರಾಂತಿ ಮೊರೆ ಹೋಗಿದ್ದ ಶ್ರೇಯಸ್​, ಈಗ ಐಪಿಎಲ್ ದ್ವಿತೀಯಾರ್ಧಕ್ಕೆ ಕಮ್​ಬ್ಯಾಕ್ ಮಾಡ್ತಿದ್ದಾರೆ. ಈ ಯಶಸ್ವಿ ನಾಯಕನ ಆಗಮನದಿಂದ ಡೆಲ್ಲಿ ಕ್ಯಾಪಿಟಲ್ಸ್​ಗೆ ಬಲ ಬಂದಂತಾಗಿದೆ. ಆದ್ರೆ ಶ್ರೇಯಸ್ ಅಯ್ಯರ್ ಹಿಂತಿರುಗುತ್ತಿದ್ದಂತೆ, ಐಪಿಎಲ್ ಸೆಕೆಂಡ್ ಫೇಸ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ಪಟ್ಟ ಯಾರಿಗೆ ನೀಡ್ತಾರೆಂಬ ಕುತೂಹಲ ಮೂಡಿಸಿದೆ.

blank

ಶ್ರೇಯಸ್​ ಆಗಮನ, ರಿಷಭ್ ಪಂತ್ ನಾಯಕತ್ವಕ್ಕೆ ಕುತ್ತು..?
ಶ್ರೇಯಸ್ ಅನುಪಸ್ಥಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್ ಆಗಿದ್ದ ಪಂತ್, 14ನೇ ಆವೃತ್ತಿಯ ಐಪಿಎಲ್​​ ಮೊದಲಾರ್ಧದಲ್ಲಿ, ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. 8 ಪಂದ್ಯಗಳ ಪೈಕಿ, 6 ಪಂದ್ಯಗಳಲ್ಲಿ ಡೆಲ್ಲಿ ಗೆಲುವು ದಾಖಲಿಸಿದೆ. ಆ ಮೂಲಕ ಐಪಿಎಲ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದ್ರೀಗ ಡೆಲ್ಲಿ ಕ್ಯಾಪಿಟಲ್ಸ್​ನ ಸಕ್ಸಸ್​ಫುಲ್ ಕ್ಯಾಪ್ಟನ್ ಶ್ರೇಯಸ್​ ತಂಡಕ್ಕೆ ವಾಪಸ್ ಆಗ್ತಿದ್ದಾರೆ. ಹೀಗಾಗಿ ಪಂತ್​ ಪಟ್ಟವನ್ನ ಶ್ರೇಯಸ್ ಅಯ್ಯರ್ ಕಸಿದುಕೊಳ್ಳುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ.

ಡೆಲ್ಲಿಯ ಮೋಸ್ಟ್ ಸಕ್ಸಸ್​​ಫುಲ್ ಕ್ಯಾಪ್ಟನ್ ಶ್ರೇಯಸ್​
ಹೌದು, ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಪರ ವಿರೇಂದ್ರ ಸೆಹ್ವಾಗ್, ಡೇವಿಡ್​ ವಾರ್ನರ್​, ಎಬಿ ಡಿವಿಲಿಯರ್ಸ್, ಗೌತಮ್ ಗಂಭೀರ್, ಕೆವಿನ್ ಪೀಟರರ್ಸನ್ ಸೇರಿದಂತೆ ಇತರೆ ದಿಗ್ಗಜ ಆಟಗಾರರು ತಂಡವನ್ನ ಮುನ್ನಡೆಸಿದ್ರು. ಆರಂಭದ ನಾಲ್ಕು ಸೀಸನ್​ ಬಿಟ್ಟರೆ, 2018ರ ತನಕ ಡೆಲ್ಲಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟ ಉದಾಹರಣೆಯೇ ಇಲ್ಲ. ಆದ್ರೆ 2018ರ ಮಧ್ಯಭಾಗದಲ್ಲಿ ನಾಯಕತ್ವ ವಹಿಸಿಕೊಂಡ ಶ್ರೇಯಸ್​​​​​​​​​​​​​​​, 2019ರ ಐಪಿಎಲ್ ಸೀಸನ್​ನಲ್ಲಿ ತಂಡವನ್ನ ಪ್ಲೇ ಆಫ್​ಗೆ ಕೊಂಡ್ಯೊಯ್ದಿದ್ದರು.

blankನಂತರ ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್​​ನಲ್ಲೂ, ಶ್ರೇಯಸ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. ಐಪಿಎಲ್ ಇತಿಹಾಸದಲ್ಲೇ ಫಸ್ಟ್ ಟೈಮ್ ಡೆಲ್ಲಿ ತಂಡವನ್ನ​​, ಫೈನಲ್​​ಗೆ ಕೊಂಡೊಯ್ದ ನಾಯಕ ಎನಿಸಿದ್ದಾರೆ. ಆದ್ರೀಗ 14ನೇ ಆವೃತ್ತಿಯ ಮೊದಲಾರ್ಧದಲ್ಲಿ ಕ್ಯಾಪ್ಟನ್​​ ಆಗಿ ಸಕ್ಸಸ್​ ಕಂಡಿರುವ ಪಂತ್ ಪಟ್ಟಕ್ಕೆ ಕುತ್ತಾಗ್ತಾರಾ ಎಂಬ ಅನುಮಾನ ಮೂಡಿಸಿದೆ.

‘ನಾಯಕತ್ವ ನಿರ್ಧಾರ ಫ್ರಾಂಚೈಸಿಗೆ ಬಿಟ್ಟಿದ್ದು’
ನಾನು ಮ್ಯಾಚ್‌ ಫಿಟ್ನೆಸ್‌ಗೆ ಮರಳಲು ಒಂದು ತಿಂಗಳ ಸಮಯ ಬೇಕಾಗಬಹುದು. ಸದ್ಯ ನನ್ನ ತರಬೇತಿ ನಡೆಯುತ್ತಿದೆ. ಒಂದು ವೇಳೆ ನಾನು ಸಂಪೂರ್ಣ ಫಿಟ್‌ ಆಗಿದ್ದೇನೆಂಬ ಭಾವನೆ ಉಂಟಾದರೆ, ಐಪಿಎಲ್​​ನಲ್ಲಿ ಕಾಣಿಸಿಕೊಳ್ಳುತ್ತೇನೆ. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಫ್ರಾಂಚೈಸಿ ಮಾಲೀಕರಿಗೆ ಬಿಟ್ಟಿದ್ದು. ಆದರೆ ತಂಡ ಈಗಾಗಲೇ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ನಮ್ಮ ತಂಡ ಯಾವಾಗಲೂ ಅಗ್ರ ಸ್ಥಾನದಲ್ಲಿರುವುದು ನನಗೆ ಮುಖ್ಯ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಂತೆ ಮಾಡುವುದು ನಮ್ಮ ಗುರಿ‘
-ಶ್ರೇಯಸ್ ಅಯ್ಯರ್, ಮಾಜಿ ನಾಯಕ

ಶ್ರೇಯಸ್​ ಅಯ್ಯರ್ ಹೇಳಿದಂತೆ, ಈಗ ಡೆಲ್ಲಿ ಕ್ಯಾಪ್ಟನ್​ ಆಗಿ ಯಾರನ್ನ ಮುಂದುವರಿಸಬೇಕು ಅನ್ನೋದು ಫ್ರಾಂಚೈಸಿ ಮಾಲೀಕರಿಗೆ ಬಿಟ್ಟಿದ್ದಾಗಿದೆ. ಆದ್ರೆ ಇಬ್ಬರು ಯುವ ಆಟಗಾರರು ತಂಡವನ್ನ ಯಶಸ್ಸಿನ ಹಾದಿಯಲ್ಲೇ ಮುನ್ನಡೆಸಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಮೊದಲ ಶ್ರೇಯಸ್ಸು ತಂದ ಶ್ರೇಯಸ್​ಗೆ ಮರು ಪಟ್ಟ ಕಟ್ಟೋದಾ..? ಇಲ್ಲಾ ರಿಷಭ್​​ ಪಂತ್​​​ರನ್ನ ಪಟ್ಟದಿಂದ ಕೆಳಗಿಸಿಸೋದಾ ಎಂಬ ಎರಡು ಪ್ರಶ್ನೆಗಳಿಗೆ ಫ್ರಾಂಚೈಸಿ ಉತ್ತರಿಸಬೇಕಿದೆ.

The post IPL 2021ರ ದ್ವಿತೀಯಾರ್ಧಕ್ಕೆ ಶ್ರೇಯಸ್ ಲಭ್ಯ -​​​​​​​​​​​​​​​​​​​​​​​​​​​​​​ಪಂತ್ ನಾಯಕತ್ವಕ್ಕೆ ತರುತ್ತಾ ಕುತ್ತು..? appeared first on News First Kannada.

Source: newsfirstlive.com

Source link