6 ಬಾರಿ ಹಿಮಾಚಲಪ್ರದೇಶ ಸಿಎಂ ಆಗಿದ್ದ ವೀರ್​ಭದ್ರಸಿಂಗ್ ವಿಧಿವಶ

6 ಬಾರಿ ಹಿಮಾಚಲಪ್ರದೇಶ ಸಿಎಂ ಆಗಿದ್ದ ವೀರ್​ಭದ್ರಸಿಂಗ್ ವಿಧಿವಶ

ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರ್​ಭದ್ರ ಸಿಂಗ್ ವಿಧಿವಶರಾಗಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಶಿಮ್ಲಾದ ಇಂದಿರಾಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಏಪ್ರಿಲ್ 12 ಹಾಗೂ ಜೂನ್ 11ರಂದು ಸಿಂಗ್ ಅವರು ಎರಡು ಸಲ ಕೊರೊನಾ ಸೋಂಕಿಗೀಡಾಗಿದ್ದರು. ಎರಡನೇ ಬಾರಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಹಿಂದಿರುಗಿದ ಬೆನ್ನಲ್ಲೇ  ಅವರಿಗೆ ಹೃದಯ ಸಮಸ್ಯೆ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕಳೆದ ಸೋಮವಾರದಂದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಬಳಿಕ ಉಸಿರಾಟದ ತೊಂದರೆ ಹೆಚ್ಚಾದಾಗ ವೆಂಟಿಲೇಟರ್​​ ಸಪೋರ್ಟ್​ನಲ್ಲಿಟ್ಟು ವೈದ್ಯರು ನಿಗಾ ವಹಿಸಿದ್ದರು ಎಂದು ವರದಿಯಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಿಂಗ್ ಇಹಲೋಕ ತ್ಯಜಿಸಿದ್ದಾರೆ.

ವೀರ್​ಭದ್ರ ಸಿಂಗ್ ಅವರು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಹಾಗೂ ಐದು ಬಾರಿ ಸಂಸದರಾಗಿದ್ದರು. 6 ಬಾರಿ ಹಿಮಾಚಲಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಸಿಂಗ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

The post 6 ಬಾರಿ ಹಿಮಾಚಲಪ್ರದೇಶ ಸಿಎಂ ಆಗಿದ್ದ ವೀರ್​ಭದ್ರಸಿಂಗ್ ವಿಧಿವಶ appeared first on News First Kannada.

Source: newsfirstlive.com

Source link