ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಮಾತಾಡೋಕೆ ಅಸಹ್ಯ.., ರಾಜಕೀಯವೇ ಬೇಡ ಅನ್ನಿಸುತ್ತೆ- ರೇಣುಕಾಚಾರ್ಯ

ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಮಾತಾಡೋಕೆ ಅಸಹ್ಯ.., ರಾಜಕೀಯವೇ ಬೇಡ ಅನ್ನಿಸುತ್ತೆ- ರೇಣುಕಾಚಾರ್ಯ

ಬೆಂಗಳೂರು: ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ರಾಜ್ಯಕ್ಕೆ ಬಂಪರ್​ ಕೊಡುಗೆ ಸಿಕ್ಕಿದೆ, ಇದನ್ನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಶಾಸಕ ಎಂ.ಪಿ ರೇಣುಕಾಚಾರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ ಕಾಪಾಡಿಕೊಂಡು ಸಂಪುಟ ಪುನಾರಚಿಸಿದ ಪ್ರಧಾನಿ ಮೋದಿ, ಸಚಿವ ಅಮಿತ್​ ಶಾ, ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಇನ್ನು ದೆಹಲಿಗೆ ಬಿಜೆಪಿ ಶಾಸಕರ ನಿಯೋಗ ಕೊಂಡ್ಯೊಯ್ಯುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರದ ಬಳಿ ನಿಯೋಗ ಕೊಂಡ್ಯೊಯ್ಯಬೇಕೇ, ಬೇಡವೇ? ಎಂಬುದನ್ನು ಚರ್ಚಿಸುತ್ತೇವೆ. ಪಕ್ಷದ ಬಗ್ಗೆ, ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವವರು ಮತ್ತು ವಿರೋಧಿಸುವವರನ್ನು ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ರು.

ಇದೇ ವೇಳೆ ಡಿ. ವಿ. ಸದಾನಂದಗೌಡರನ್ನು ಸಂಪುಟದಿಂದ ಕೈಬಿಟ್ಟ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡುವವಷ್ಟು ದೊಡ್ಡವನು ನಾನಲ್ಲ, ನನ್ನ ಕ್ಷೇತ್ರದ ಬಗ್ಗೆ ಕೇಳಿ, ಕೋವಿಡ್​ 19 ನಿರ್ವಹಣೆಯ ಕುರಿತು ಕೇಳಿ ಉತ್ತರಿಸುತ್ತೇನೆ. ಆದರೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಕುರಿತು ಮಾತನಾಡಲು ಅಸಹ್ಯ ಎನಿಸುತ್ತದೆ ಎಂದರು.  ರಾಜಕೀಯವೇ ಬೇಡ ಎನಿಸುತ್ತದೆ ಅಂತ ಪ್ರಸ್ತುತ ರಾಜಕೀಯದ ಬೆಳವಣಿಗೆಗಳ ಕುರಿತು ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.

The post ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಮಾತಾಡೋಕೆ ಅಸಹ್ಯ.., ರಾಜಕೀಯವೇ ಬೇಡ ಅನ್ನಿಸುತ್ತೆ- ರೇಣುಕಾಚಾರ್ಯ appeared first on News First Kannada.

Source: newsfirstlive.com

Source link