ಬೌಲಿಂಗ್ ಅಭ್ಯಾಸದಲ್ಲಿ ಪಾಂಡ್ಯ -T20 ವಿಶ್ವಕಪ್​​​ಗೆ ಮರಳೋಕೆ ಲಂಕಾ ಟೂರ್ ಅಗ್ನಿಪರೀಕ್ಷೆ

ಬೌಲಿಂಗ್ ಅಭ್ಯಾಸದಲ್ಲಿ ಪಾಂಡ್ಯ -T20 ವಿಶ್ವಕಪ್​​​ಗೆ ಮರಳೋಕೆ ಲಂಕಾ ಟೂರ್ ಅಗ್ನಿಪರೀಕ್ಷೆ

ಭಾರತ -ಶ್ರೀಲಂಕಾ ನಡುವಿನ ಸರಣಿ ಪ್ರಾರಂಭಕ್ಕೆ ಕೇವಲ ಐದು ದಿನಗಳಷ್ಟೆ ಬಾಕಿ ಉಳಿದಿದೆ. ಉಭಯ ತಂಡಗಳ ಆಟಗಾರರ​​ ಸಮರಾಭ್ಯಾಸ ಜೋರಾಗಿದೆ. ಆದರೆ ಇಲ್ಲಿ ಅಚ್ಚರಿ ಮೂಡಿಸಿರೋದು ನೆಟ್ಸ್​ನಲ್ಲಿ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಪ್ರಾಕ್ಟೀಸ್​. ಬೆನ್ನಿನ ಶಸ್ತ್ರಚಿಕಿತ್ಸೆ ನಂತರ ಬೌಲಿಂಗ್​ನಿಂದ ದೂರ ಉಳಿದಿದ್ದ ಹಾರ್ದಿಕ್, ಲಂಕಾ ಪ್ರವಾಸದಲ್ಲಿ ಪೂರ್ಣ ಪ್ರಮಾಣದ ಬೌಲಿಂಗ್​​​ ಮಾಡೋದಕ್ಕೆ ಸಜ್ಜಾಗ್ತಿದ್ದಾರೆ. ಆ ಮೂಲಕ ಟಿ20 ವಿಶ್ವಕಪ್​​​ಗೆ, ಈಗಿನಿಂದಲೇ ತಯಾರಿ ಮಾಡಿಕೊಳ್ತಿದ್ದಾರೆ.

ಸದ್ಯ ಟೀಮ್​ ಇಂಡಿಯಾಕ್ಕೆ ಫಾಸ್ಟ್ ಬೌಲಿಂಗ್ ಆಲ್​​​ರೌಂಡರ್​ ಅನಿವಾರ್ಯ. ಪೇಸ್​​ ಆಲ್​​ರೌಂಡರ್​​ ಕೊರತೆಯಿಂದ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್ ಕಳೆದುಕೊಳ್ಳುವಂತಾಯ್ತು. ಹಾಗಾಗಿ ಲಂಕಾ ಸರಣಿ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯಗೆ ಅಗ್ನಿಪರೀಕ್ಷೆಯ ವೇದಿಕೆ. ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಂತರ ಹಾರ್ದಿಕ್​ ಬೌಲಿಂಗ್​ ಮಾಡಿಲ್ಲ. ಕೇವಲ ಬ್ಯಾಟಿಂಗ್​​ನತ್ತ​ ಫೋಕಸ್​​ ಮಾಡ್ತಿರೋ ಪಾಂಡ್ಯಗೆ ವಿಶ್ವಕಪ್ ತಂಡದಿಂದ ಕೋಕ್​​ ನೀಡಿದ್ರು ಅಚ್ಚರಿ ಇಲ್ಲ. ಪಾಂಡ್ಯ ಬದಲಿಗೆ ಮ್ಯಾನೇಜ್​ಮೆಂಟ್​ ಮತ್ತೊಬ್ಬ ಆಲ್​​ರೌಂಡರ್​​ಗೆ ಮಣೆ ಹಾಕುವ ಸಾಧ್ಯತೆ ಇದೆ.

ಹಾರ್ದಿಕ್​ ಪಾಂಡ್ಯಗೆ ಲಂಕಾ ಟೂರ್​​ ವೆರಿ ಇಂಪಾರ್ಟೆಂಟ್​​!
ಹಾರ್ದಿಕ್​ ನೆಟ್ಸ್​​​ನಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿ ಭರವಸೆ ಮೂಡಿಸಿದ್ದಾರೆ. ಆದರೆ ಈ ಭರವಸೆ ಈಡೇರಬೇಕೆಂದರೆ ಲಂಕನ್ನರ ನಾಡಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಿದೆ. ಆದರೆ ಪಾಂಡ್ಯ ಬೌಲಿಂಗ್ ಮಾಡಬೇಕೋ.? ಬೇಡವೋ..? ಅನ್ನೋದ್ರ ಬಗ್ಗೆ ನಿರ್ವಹಣಾ ಸಮಿತಿ ನಿರ್ಧಾರ ಕೈಗೊಳ್ಳುತ್ತೆ. ಟಿ20 ಮತ್ತು ಏಕದಿನ ಸರಣಿಯಲ್ಲಿ ಆಡೋದು 6 ಪಂದ್ಯಗಳಷ್ಟೆ. ಹಾಗಾಗಿ ಇಷ್ಟು ಪಂದ್ಯಗಳಲ್ಲಿ ಹಾರ್ದಿಕ್, ತನ್ನ ಎಫೆಕ್ಟೀವ್ ಆಟವನ್ನ​ ಪ್ರೂವ್​ ಮಾಡಬೇಕಿದೆ. ಆಗ ಮಾತ್ರ ಪಾಂಡ್ಯ, ಟಿ20 ವಿಶ್ವಕಪ್​​ಗೆ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯ.

ಉತ್ತಮ ಪ್ರದರ್ಶನ ತೋರದಿದ್ದರೆ ತಂಡದಿಂದ ಔಟ್?​​​
ಟೀಮ್​ ಇಂಡಿಯಾದಲ್ಲಿ ಹಾರ್ದಿಕ್​ ಪಾಂಡ್ಯದು ಬಹಳ ಇಂಪಾರ್ಟೆಂಟ್​ ರೋಲ್​. ಆದರೆ ಬೆನ್ನಿನ ಶಸ್ತ್ರಚಿಕಿತ್ಸೆಯಿಂದಾಗಿ ಕೇವಲ ಬ್ಯಾಟಿಂಗ್​​ಗಷ್ಟೇ ಸೀಮಿತವಾಗಿರೋದು ತಂಡಕ್ಕೆ ತಲೆಬಿಸಿ ಹೆಚ್ಚಿಸಿದೆ. ತಂಡಕ್ಕೆ ಬೌಲಿಂಗ್​ ಆಲ್​ರೌಂಡರ್​ ಅನಿವಾರ್ಯ ಇರೋ ಕಾರಣ, ಪಾಂಡ್ಯ ಬೌಲಿಂಗ್​​ನಲ್ಲೂ ಸೂಪರ್​​ ಸ್ಪೆಲ್​ ಮಾಡಲೇಬೇಕಿದೆ. ಕೇವಲ ಲಂಕಾ ಸರಣಿ ಮಾತ್ರವಲ್ಲ, ಸೆಪ್ಟೆಂಬರ್​​ನಲ್ಲಿ ನಡೆಯಲಿರೋ ಐಪಿಎಲ್​​ನಲ್ಲೂ ಪಾಂಡ್ಯ ಬೌಲಿಂಗ್​ ಮಾಡೋದು ಅತ್ಯಗತ್ಯ. ಇಲ್ಲವಾದಲ್ಲಿ ತಂಡದಿಂದ ಹೊರಗುಳಿಯೋದು ಬಹುತೇಖ ಕನ್ಫರ್ಮ್​​.

ಕಾಂಪಿಟೇಶನ್​ ಮೇಲೆ ಕಾಂಪಿಟೇಶನ್​ – ಪಾಂಡ್ಯಗೆ ಟೆನ್ಶನ್​​
ಪೇಸ್​ ಬೌಲಿಂಗ್​ ಆಲ್​ರೌಂಡರ್​ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದೆ. ಹಾಗಾಗಿ ಪಾಂಡ್ಯಗೆ ಒತ್ತಡ ಹೆಚ್ಚಾಗಿದೆ. ಹಾರ್ದಿಕ್​ಗೆ ಶಾರ್ದೂಲ್​​ ಠಾಕೂರ್​, ಹರ್ಷಲ್​ ಪಟೇಲ್​, ವಿಜಯ್​ ಶಂಕರ್, ಶಿವಂ ದುಬೆ ಕೂಡ ನೇರ ಸ್ಫರ್ಧಿಗಳಾಗಿದ್ದಾರೆ. ಹೀಗಾಗಿ ಪಾಂಡ್ಯ, ಲಂಕಾ ಟೂರ್ ಮತ್ತು ಐಪಿಎಲ್​ನಲ್ಲಿ ದಿ ಬೆಸ್ಟ್ ಪರ್ಫಾಮೆನ್ಸ್ ನೀಡಲೇಬೇಕಿದೆ. ಇಲ್ದಿದ್ರೆ ಉಳಿದವರಲ್ಲಿ, ಒಬ್ಬರಿಗೆ ಚಾನ್ಸ್​ ನೀಡಲಾಗುತ್ತೆ.

blank

The post ಬೌಲಿಂಗ್ ಅಭ್ಯಾಸದಲ್ಲಿ ಪಾಂಡ್ಯ -T20 ವಿಶ್ವಕಪ್​​​ಗೆ ಮರಳೋಕೆ ಲಂಕಾ ಟೂರ್ ಅಗ್ನಿಪರೀಕ್ಷೆ appeared first on News First Kannada.

Source: newsfirstlive.com

Source link