BiggBoss ಯಾಕಿಂಗ್​ ಆಡ್ತಿದ್ದಾರೆ ಚಕ್ರವರ್ತಿ ಚಂದ್ರಚೂಡ್​?

BiggBoss ಯಾಕಿಂಗ್​ ಆಡ್ತಿದ್ದಾರೆ ಚಕ್ರವರ್ತಿ ಚಂದ್ರಚೂಡ್​?

ಅದೇನೋ ಗೊತ್ತಿಲ್ಲ, ಚಕ್ರವರ್ತಿ ಅವರಿಂದಲೇ ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಸದ್ದು ಗದ್ದಲ ಉಂಟಾಗ್ತಿದೆ ಅನ್ನೋದು ವೀಕ್ಷಕರ ​ಅಭಿಪ್ರಾಯ. ಈಗ ಮತ್ತೇನು ಮಾಡಿದ್ರು ಅಂತಿರಾ.. ನಿನ್ನೆ ನಡೆದ ಟಾಸ್ಕ್​ನಲ್ಲಿ ಮತ್ತೆ ಪ್ರಿಯಾಂಕಾ ಮತ್ತು ಚಕ್ರವರ್ತಿ ಅವರ ನಡುವೆ ವಾಕ್ಸಸಮರ ನಡೆದಿದೆ. ಇದಕ್ಕೆ ಕಾರಣ ಮತ್ತೆ ಅದೇ ಶಮಂತ್​.

ಚಿನ್ನದ ಮೊಟ್ಟೆ ಟಾಸ್ಕ್​ನಲ್ಲಿ ಗೆದ್ದವರಿಗೆ ಬಿಗ್​ ಬಾಸ್​ ನೀಡಿದ ಅಡ್ವಾಂಟೇಜ್​ ಬಳಸಲು ಸದಸ್ಯರು ಹರ ಸಾಹಸಪಟ್ಟರು. ಇಲ್ಲೇ ನೋಡಿ ಬೆಂಕಿ ಹತ್ತಿದ್ದು, ಟಾಪ್​ 5 ಒಂದು ಟೀಮ್​ ಆದ್ರೇ, ಕಡಿಮೆ ಮೊಟ್ಟೆ ಒಡೆದವರು ಒಂದು ಟೀಮ್​. ಇಲ್ಲಿ ಸೋತ ಸ್ಪರ್ಧಿಗಳಿಗೆ ಯಾರ ಕೈಗೂ ಸಿಗಬೇಡಿ ಬಾತ್​ ರೂಂ ನಲ್ಲಿ ಬಚ್ಚಿಟ್ಟುಕೊಳ್ಳಿ ಎಂದು ಪ್ರಶಾಂತ್​ ಅವರು ಹೇಳುತ್ತಾರೆ. ಹೀಗಾಗಿ ಶುಭಾ, ವೈಷ್ಣವಿ, ಪ್ರಿಯಾಂಕಾ ಬಚ್ಚಿಟ್ಟುಕೊಳ್ಳುತ್ತಾರೆ. ಇನ್ನೂ ರಘು, ಪ್ರಶಾಂತ್​ ಹೊರಗೆ ಉಳಿಯುತ್ತಾರೆ.

ಈ ಕಡೆ ಟಾಪ್​ 5 ಅಲ್ಲಿ ಇರುವ ಸದಸ್ಯರು ಮಾತನಾಡಿಕೊಂಡು ನಮ್ಮ ನಮ್ಮಲ್ಲಿ ಒಡೆಯುವುದು ಬೇಡ, ಸೋತಿರುವ ಸದಸ್ಯರಿಗೆ ಒಡೆಯೊನಾ ಎಂದುಕೊಳ್ಳುತ್ತಾರೆ.

blank

ಇಲ್ಲಿ ಮೊದಲಿಗೆ ಸಿಕ್ಕವರೇ ರಘು. ಚಂದ್ರಚೂಡ್,​ ರಘು ಅವರನ್ನು ಅಟ್ಟಿಸಿಕೊಂಡು ಹೋಗಿ ಮೊಟ್ಟೆ ಒಡೆಯಲು ಪ್ರಯತ್ನಿಸುತ್ತಾರೆ. ಆದ್ರೇ ಮೊಟ್ಟೆ ಕೈಯಲ್ಲಿಯೇ ಒಡೆದಿರುತ್ತದೆ. ಈ ಕುರಿತು ರಘು ಹಾಗೂ ಚಂದ್ರಚೂಡ್​ ಅವರ ನಡುವೆ ಮಾತುಕತೆ ನಡೆಯುವ ಸಂದರ್ಭದಲ್ಲಿಯೇ, ಅರವಿಂದ್ ತಮ್ಮ ಮೊಟ್ಟೆಯನ್ನು ರಘು ಅವರ ತಲೆಗೆ ಒಡೆಯುತ್ತಾರೆ.

ನಂತರ ಉಳಿದ ಸೋತ ಸದಸ್ಯರು ಬಾತ್​ ರೂಂ ನಿಂದ ಬರುವುದನ್ನೇ ಕಾಯುತ್ತಿದ್ದ ಸದಸ್ಯರಿಗೆ ಅವಕಾಶ ಸಿಗುತ್ತದೆ. ಪ್ರಿಯಾಂಕಾ ಡೋರ್​ ತೆಗೆಯುವಷ್ಟರಲ್ಲಿ ಶಮಂತ್​ ಆವರನ್ನು ಆಚೆಗೆ ಎಳೆದು ತರುತ್ತಾರೆ. ಆದ್ರೇ, ಪ್ರಿಯಾಂಕಾ ತಪ್ಪಿಸಿಕೊಂಡು ಸ್ವಿಮಿಂಗ್​ ಪೂಲ್​ನಲ್ಲಿ ಧುಮಕುತ್ತಾರೆ. ಅಷ್ಟರಲ್ಲಿ ಚಂದ್ರಚೂಡ್ ಅವರು ದಿವ್ಯಾ ಸುರೇಶ್​ ಅವರಿಗೆ ಮೊಟ್ಟೆ ಓಡಿ ಎಂದು ಹುರಿದುಂಬಿಸುತ್ತಾರೆ. ಅಷ್ಟೇ ಅಲ್ಲ ಶಮಂತ್​ಗೆ ಪ್ರಿಯಾಂಕಾ ಅವರನ್ನು ಹಿಡಿಯಲು ಹೇಳುತ್ತಾರೆ. ದಿವ್ಯಾ ಸುರೇಶ್ ಬಂದು ಪ್ರಿಯಾಂಕಾ ಅವರ ವಿರೋಧದ ನಡುವೆ ಮೊಟ್ಟೆ ಒಡೆಯುತ್ತಾರೆ.

blank

ಇಲ್ಲಿ ಇಬ್ಬರ ನಡುವೆ ವಾದ ನಡೆಯಬೇಕಾದ್ರೇ ಶಮಂತ್​ಗೆ ಪ್ರಿಯಾಂಕಾ ಕ್ಲಾಸ್​ ತೆಗೆದುಕೊಳ್ಳುತ್ತಾರೆ. ಮತ್ತೆ ಚಂದ್ರಚೂಡ್​ ಮಧ್ಯಪ್ರವೇಶ ಮಾಡ್ತಾರೆ. ಇಲ್ಲೇ ನೋಡಿ ಪ್ರಿಯಾಂಕಾ ಕೆರಳಿ ಕೆಂಡವಾಗೋದು. ಚಂದ್ರಚೂಡ್​ ಅವರಿಗೆ ಬಾಯಿ ಮಚ್ಕೊಂಡು ಹೋಗಿ, ಇಲ್ಲಾ ಅಂದ್ರೇ ಚೆನ್ನಾಗಿರಲ್ಲ ಎನ್ನುತ್ತಾರೆ.

ಇದಕ್ಕೆ ಚಂದ್ರಚೂಡ್​ ಅವರು ನಾನು ಶಮಂತ್​ಗೆ ಹೇಳುತ್ತಿದ್ದೇನೆ. ನಿಂಗಲ್ಲ, ನೀನು ಅವನ ಇನ್ನೊಂದು, ಮತ್ತೊಂದು ತೋಳಿ ನನಗೇನು ಆಗಬೇಕಿಲ್ಲ. ನನ್ನ ಕೆಣಕಬೇಡ. ನಾನು ತುಂಬಾ ಕೆಟ್ಟದಾಗಿ ಮಾತನಾಡಬೇಕಾಗುತ್ತದೆ ಎನ್ನುತ್ತಾರೆ. ನಂತರ ಶಮಂತ್​ ಮಧ್ಯ ಪ್ರವೇಶಿಸಿ ಜಗಳ ಬಿಡಿಸುತ್ತಾರೆ.

ಇದು ಇಷ್ಟಕ್ಕೆ ನಿಲ್ಲದೇ ಮುಂದುವರೆದು ಪ್ರಶಾಂತ್​ ಹಾಗೂ ಶಮಂತ್​ ಪ್ರಿಯಾಂಕಾ ಮತ್ತು ಚಂದ್ರಚೂಡ್​ ಅವರಿಗೆ ರಾಜಿ ಮಾಡಿಸಲು ನೋಡುತ್ತಾರೆ.

ಚಂದ್ರಚೂಡ್​: ನನ್ನ ಸಮಸ್ಯೆ ಏನಿದ್ರೂ ನನ್ನ ಜೊತೆ ಮಾತಾಡ್ಬೇಕು. ಇನ್ನೊಬ್ಬರ ಮುಂದೆ ಮಾತಾಡಿದ್ರೇ ನಂಗೆ ಉರಿಯುತ್ತೆ.

ಶಮಂತ್​: ಇನ್ನೂ ಎಷ್ಟೂ ದಿನ ಈ ರೀತಿ ಕೋಪ, ತಾಪಗಳನ್ನು ಇಟ್ಕೋತೀರಿ.

ಪ್ರಿಯಾಂಕಾ: ಬಿಗ್​ಬಾಸ್​ ನನ್ನನ್ನು ಹೊರಗೆ ಕರೆಯುವವರೆಗೂ. ಅದರ ನಂತರ ನನಗೆ ಏನೂ ಆಗಬೇಕಿಲ್ಲ.

ಚಂದ್ರಚೂಡ್​: ನನ್ನ ಜೀವನ ಪೂರ್ತಿ ಬಿಡುವುದಿಲ್ಲ. ನಾನು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಈ ಟಾಸ್ಕ್​ನಲ್ಲಿ ನಾನು ಒಳ್ಳೆದೇ ಮಾಡಿದ್ದೇನೆ. ಇಲ್ಲಾಂದ್ರೇ ಬೂಟ್​ನಲ್ಲಿ ಹೊಡಿ. ನನ್ನ ಬಗ್ಗೆ ಸುಮ್​ಸುಮ್ನೆ ಕಮೆಂಟ್​ ಮಾಡಿದ್ರೇ ನಂಗೆ ಆಗಲ್ಲ.

ಪ್ರಿಯಾಂಕಾ: ಸೇಮ್​ ಎನ್ನುತ್ತಾರೆ.

ಒಟ್ಟಿನಲ್ಲಿ ಇದು ಬಗೆ ಹರಿಯದ ಕಾಳಗ ಎಂದೆನುಸುತ್ತದೆ. ಇನ್ನೊಂದು ಪ್ರಮುಖ ವಿಷಯ ಎಂದ್ರೇ ಇಲ್ಲಿ ಪದೇ ಪದೇ ವೈಮನಸ್ಸು ಉಂಟಾಗುತ್ತಿರುವುದು ಶಮಂತ್​ ವಿಷಯಕ್ಕೆ. ಇಬ್ಬರ ಜಗಳದಲ್ಲಿ ಶಮಂತ್​ ಮೊಟ್ಟೆಯಂತೆ ಒಡೆದು ಹೊಗ್ತಿದ್ದಾರೆ.

The post BiggBoss ಯಾಕಿಂಗ್​ ಆಡ್ತಿದ್ದಾರೆ ಚಕ್ರವರ್ತಿ ಚಂದ್ರಚೂಡ್​? appeared first on News First Kannada.

Source: newsfirstlive.com

Source link