ಪತಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ ಆರೋಪ; ಆ ಒಂದು ಕಾರಣಕ್ಕಾಗಿ ಸುಪಾರಿ ನೀಡಿದ್ದಳಾ ಪತ್ನಿ?

ಪತಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ ಆರೋಪ; ಆ ಒಂದು ಕಾರಣಕ್ಕಾಗಿ ಸುಪಾರಿ ನೀಡಿದ್ದಳಾ ಪತ್ನಿ?

ಬೆಂಗಳೂರು: ಪತಿ ಹತ್ಯೆಗೆ ಪತ್ನಿಯೇ ಸುಪಾರಿ ನೀಡಿರುವ ಸಂಶಯ ವ್ಯಕ್ತವಾದ ಪ್ರಕರಣ ಡಿಜೆ ಹಳ್ಳಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ. ಜುಲೈ 2ರಂದು ಕಾವಲ್​ ಭೈರಸಂದ್ರದ ಅಂಬೇಡ್ಕರ್​ ಕಾಲೇಜು ಬಳಿ  ಕೃಷ್ಣಮೂರ್ತಿ ಎಂಬುವವರನ್ನು ಭೀಕರವಾಗಿ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲ್ಲಲಾಗಿತ್ತು.

ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಿದ್ದಾರೆ. ಎರಡು ತಂಡವಾಗಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಕೆ. ಆರ್.ಪುರಂ ಮತ್ತು ಕೋಲಾರದಲ್ಲಿ ಪತ್ತೆ ಮಾಡಿ ಕಸ್ಟಡಿಗೆ ತೆಗೆದು ಕೊಂಡಿದ್ದಾರೆ.

ವಿಚಾರಣೆ ಮಾಡಿದ ಪೊಲೀಸರು ಪತಿಯ ಹತ್ಯೆಗೆ ಪತ್ನಿಯೇ ಸುಪಾರಿ ನೀಡಿದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಪತ್ನಿಯ ವಿಚಾರಣೆ ನಡೆಸಿದ ಪೊಲೀಸರು ದಿನಾ ಕುಡಿದು ಬಂದು ಮನೆಯಲ್ಲಿ ಕಿರಿಕ್​ ಮಾಡ್ತಿದ್ದ ಅನ್ನೋ ಕಾರಣಕ್ಕಾಗಿ ತನ್ನ ಸ್ನೇಹಿತರಿಗೆ ಪತಿಯನ್ನು ಮುಗಿಸಲು ಡೀಲ್​ ನೀಡಿರುವದಾಗಿ ಶಂಕೆ ವ್ಯಕ್ತ ಪಡಿಸಿದ್ದಾರೆ.  ಸದ್ಯ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು  ಹೆಚ್ಚಿನ ವಿಚಾರಣೆ ಮಾಡುತ್ತಿರುವದಾಗಿ ತಿಳಿದು ಬಂದಿದೆ.

The post ಪತಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ ಆರೋಪ; ಆ ಒಂದು ಕಾರಣಕ್ಕಾಗಿ ಸುಪಾರಿ ನೀಡಿದ್ದಳಾ ಪತ್ನಿ? appeared first on News First Kannada.

Source: newsfirstlive.com

Source link