24 ಗಂಟೆಯಲ್ಲಿ ಐವರು ಉಗ್ರರು ಮಟಾಶ್

ಶ್ರೀನಗರ: ಕಳೆದ 24 ಗಂಟೆಯಲ್ಲಿ ಭಾರತೀಯ ಸೈನಿಕರು ಐವರು ಉಗ್ರರನ್ನು ಹೊಡೆದುರಳಿಸಿದ್ದಾರೆ. ಕುಲ್ಗಾಮಾ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಐವರು ಹತರಾಗಿದ್ದಾರೆ.

ಕುಲ್ಗಾಮಾದ ಝೋಡರ್ ಕಾರ್ಡರ್ ಪ್ರದೇಶದಲ್ಲಿ ಉಗ್ರರ ಇರುವಿಕೆ ಖಚಿತ ಮಾಹಿತಿ ಪಡೆದ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಸೈನಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಭಾರತೀಯ ಸೈನಿಕರು ಪ್ರತ್ಯುತ್ತರವಾಗಿ ಗುಂಡಿನ ದಾಳಿ ನಡೆಸಿ, ಲಷ್ಕರ್-ಇ-ತೈಬಾ ಸಂಘಟನೆಯ ಇಬ್ಬರನ್ನು ಹೊಡೆದುರಿಳಿಸಿದೆ

ಪುಲ್ವಾಮಾದಲ್ಲಿ ನಡೆದ ಎರಡು ಪ್ರತ್ಯೇಕ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮತ್ತೊಬ್ಬನನ್ನು ಹಂದ್ವಾರಾದ ಎನ್‍ಕೌಂಟರ್ ನಲ್ಲಿ ಹೊಡೆದುರಳಿಸಲಾಗಿದೆ. ಹಂದ್ವಾರದಲ್ಲಿ ಸಾವನ್ನಪ್ಪಿದ ಉಗ್ರ ಮೆಹ್ರಜುದ್ದೀನ್ ಹಲ್ವಾಯಿ ಅಲಿಯಾಸ್ ಉಬೈದ್ ಎಂದು ಗುರುತಿಸಲಾಗಿದೆ.  ಇದನ್ನೂ ಓದಿ:ರಾಜ್ಯದಲ್ಲೂ ಸಚಿವ ಸಂಪುಟ ಪುನಾರಚನೆಗೆ ಮುಂದಾಗುತ್ತಾ ಬಿಜೆಪಿ ಹೈಕಮಾಂಡ್?

The post 24 ಗಂಟೆಯಲ್ಲಿ ಐವರು ಉಗ್ರರು ಮಟಾಶ್ appeared first on Public TV.

Source: publictv.in

Source link