ಆನ್​ಲೈನ್​ ಕ್ಲಾಸ್ ಕಷ್ಟ; ಮೊಬೈಲ್​ ಖರೀದಿಸಲು ಸಹಾಯ ಮಾಡಿ ಎಂದು ಸಹೋದರಿಯರ ಮನವಿ

ಆನ್​ಲೈನ್​ ಕ್ಲಾಸ್ ಕಷ್ಟ; ಮೊಬೈಲ್​ ಖರೀದಿಸಲು ಸಹಾಯ ಮಾಡಿ ಎಂದು ಸಹೋದರಿಯರ ಮನವಿ

ಕೊಪ್ಪಳ: ಆನ್​ಲೈನ್​ ತರಗತಿಗಳು ಸೃಷ್ಟಿಸುತ್ತಿರುವ ಅವಾಂತರಗಳು ಒಂದೆರಡಲ್ಲ, ಒಂದೆಡೆ ನೆಟ್​ವರ್ಕ್​ ಸಮಸ್ಯೆಯಾದರೆ ಇನ್ನೊಂದೆಡೆ ಮೊಬೈಲ್​ ಇಲ್ಲದೆ ಆನ್​ಲೈನ್​ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಪರಾದಾಡ್ತಿದ್ದಾರೆ. ಇತ್ತೀಚೆಗೆ ಆನ್​ಲೈನ್​ ಕ್ಲಾಸ್​ಗೆಂದು ಮೊಬೈಲ್​ ಕೊಳ್ಳಲು ವಿದ್ಯಾರ್ಥಿಯೊರ್ವಳು ಮಾರುಕಟ್ಟೆಯಲ್ಲಿ ಸೊಪ್ಪು ಮಾರುತ್ತಿದ್ದ ಘಟನೆ ಕಂಡ ಬೆನ್ನಲ್ಲೆ, ಕೊಪ್ಪಳದಲ್ಲಿ ಇಬ್ಬರು ಸಹೋದರಿಯರು ಆನ್​ಲೈನ್​ ಕ್ಲಾಸ್​ಗೆ ಮೊಬೈಲ್​ ಖರೀದಿಸಲು ಸಹಾಯ ಮಾಡುವಂತೆ ಕೋರಿ ಭಿತ್ತಿ ಪತ್ರ ಹಿಡಿದು ನಿಂತಿದ್ದಾರೆ!

ಕೊಪ್ಪಳದ ಗಾಂಧಿನಗರದ ನಿವಾಸಿಗಳಾದ ಎಂಟನೇ ತರಗತಿ ಓದುತ್ತಿರುವ ಗೀರಿಜಾ, ಹತ್ತನೇ ತರಗತಿ ಓದುತ್ತಿರುವ ಪ್ರೀತಿ ಎಂಬ ಸಹೋದರಿಯರು ಮೊಬೈಲ್​ ಖರೀದಿಸಲು ಹಣ ಇಲ್ಲದೆ, ಮೊಬೈಲ್​ ಖರೀದಿಸಲು ಸಹಾಯ ಮಾಡಿ ಎಂದು ಭಿತ್ತಿ ಪತ್ರ ಹಿಡಿದು ನಿಂತಿದ್ದಾರೆ. ಹತ್ತು ವರ್ಷಗಳ ಹಿಂದೆಯೇ ತಂದೆಯನ್ನು ಕಳೆದುಕೊಂಡಿರುವ ಸಹೋದರಿಯರು, ತಾಯಿ ಮಲ್ಲಮ್ಮ ನಿಂಬೆ ಹಣ್ಣಿನ ವ್ಯಾಪಾರ ಮಾಡಿ ಮಕ್ಕಳ ಪಾಲನೆ ಮಾಡುತ್ತಿದ್ದು ಕೋವಿಡ್​ ಕಾಲದಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟವಾಗಿದ್ದು ಮೊಬೈಲ್​ ಖರೀದಿಸುವ ಶಕ್ತಿ ಇಲ್ಲವೆಂದು ನೋವು ತೋಡಿಕೊಂಡಿದ್ದಾರೆ.

The post ಆನ್​ಲೈನ್​ ಕ್ಲಾಸ್ ಕಷ್ಟ; ಮೊಬೈಲ್​ ಖರೀದಿಸಲು ಸಹಾಯ ಮಾಡಿ ಎಂದು ಸಹೋದರಿಯರ ಮನವಿ appeared first on News First Kannada.

Source: newsfirstlive.com

Source link