‘ವಿಶ್ವದಲ್ಲೇ ಬೆಸ್ಟ್ ವೆಜ್​ ಬಿರಿಯಾನಿ ತಿನ್ನಿಸಿದ್ರಿ..’ ಸೋನು ಸೂದ್​​ರಿಂದ KTR ಗುಣಗಾನ

‘ವಿಶ್ವದಲ್ಲೇ ಬೆಸ್ಟ್ ವೆಜ್​ ಬಿರಿಯಾನಿ ತಿನ್ನಿಸಿದ್ರಿ..’ ಸೋನು ಸೂದ್​​ರಿಂದ KTR ಗುಣಗಾನ

ಸೋನು ಸೂದ್​​ ಕೊರೊನಾ ಸಂಕಷ್ಟ ಕಾಲದಲ್ಲಿ ದೇಶಾದ್ಯಂತ ಅನೇಕ ಮಂದಿಗೆ ಸಹಾಯ ಮಾಡಿ ಜನಮನ್ನಣೆ ಗಳಿಸಿರೋ ನಟ. ಅದ್ರಲ್ಲೂ ತೆಲಂಗಾಣದಲ್ಲಿ ಸೂದ್​ಗೆ ಸಾಕಷ್ಟು ಜನ ಅಭಿಮಾನಿಗಳಾಗಿದ್ದಾರೆ. ಅಷ್ಟೇ ಯಾಕೆ ಸೋನು ಸೂದ್​​ಗಾಗಿ ಒಂದು ದೇವಾಲಯವನ್ನೇ ಕಟ್ಟಿಸಿದ್ದಾರೆ ತೆಲುಗು ಫ್ಯಾನ್ಸ್​. ಈ ಮಧ್ಯೆ ರಾಜ್ಯದ ಜನ ಸೋನು ಸೂದ್​ ಮತ್ತು ತೆಲಂಗಾಣ ಸಚಿವ ಕೆ.ಟಿ ರಾಮರಾವ್​ ಅವರ ಸ್ನೇಹ ಕಂಡು ಮೆಚ್ಚಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಟ್ವೀಟ್​ ಸಂಭಾಷಣೆ ವೈರಲ್ ಆಗಿದೆ.

ಇದನ್ನೂ ಓದಿ: ಸೋನು ಸೂದ್​​ಗಾಗಿ ದೇವಾಲಯ ನಿರ್ಮಿಸಿದ ತೆಲಂಗಾಣ ಜನತೆ 

ಸೋನು ಸೂದ್​ ತೆಲಂಗಾಣದಲ್ಲಿ, ಐಟಿ ಮತ್ತು ಕೈಗಾರಿಕೆ ಸಚಿವ ಕೆ.ಟಿ ರಾಮರಾವ್ ಅವರನ್ನ ಭೇಟಿಯಾಗಿ ಕೆಲ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ. ಸೋನು ಸೂದ್​ಗೆ ಕೆಟಿಆರ್​ ವೆಜ್​ ಬಿರಿಯಾನಿ ಊಟವನ್ನ ಉಣಬಡಿಸಿ, ಪ್ರೀತಿಯಿಂದ ಸತ್ಕರಿಸಿ ಕಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೂದ್​, ನಿಮ್ಮ ಪ್ರೀತಿಗೆ ಧನ್ಯವಾದಗಳು ಬ್ರದರ್​. ನಿಮ್ಮ ಆತಿಥ್ಯದ ಬಗ್ಗೆ ಹೇಳಲು ನನಗೆ ಪದಗಳೇ ಸಾಲುತ್ತಿಲ್ಲ. ಮತ್ತಷ್ಟು ಬಡಜನರ ಮುಖದಲ್ಲಿ ಖುಷಿ ಮೂಡಿಸುವ ನಿಟ್ಟಿನಲ್ಲಿ ಆ ದೇವರು ನಮ್ಮನ್ನ ಮುನ್ನಡೆಸಲಿ. ನೀವು ದೂರದೃಷ್ಟಿ ಉಳ್ಳವರು. ಸಹಾನುಭೂತಿಗೆ ಮಾದರಿಯಾಗುವಂಥ ನಾಯಕ ಅಂತ ಹಾಡಿ ಹೊಗಳಿದ್ದಾರೆ. ಜೊತೆಗೆ ಕೆಟಿಆರ್​​ ಭೇಟಿ ಸಂದರ್ಭದ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಇದಕ್ಕೆ ರಿಪ್ಲೈ ಮಾಡಿ ಟ್ವೀಟ್ ಮಾಡಿರುವ ಕೆಟಿಆರ್​, ನಿಮ್ಮನ್ನು ಭೇಟಿಯಾಗಿ ನನಗೂ ಖುಷಿಯಾಯಿತು ಬ್ರದರ್​. ನಿಮ್ಮ ನಿಸ್ವಾರ್ಥ ಸೇವೆ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸೇವೆ ಸಲ್ಲಿಸುವ ನಿಮ್ಮ ಉತ್ಸಾಹ ಶ್ಲಾಘನೀಯ. ಸಂಪರ್ಕದಲ್ಲಿರೋಣ ಮತ್ತು ನಾವು ಚರ್ಚಿಸಿದ ವಿಚಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗೋಣ ಅಂತ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿ ಮತ್ತೆ ಟ್ವೀಟ್ ಮಾಡಿರೋ ಸೂದ್​​, ವಿಶ್ವದ ಬೆಸ್ಟ್​ ವೆಜ್​ ಬಿರಿಯಾನಿ ಉಣಬಡಿಸಿದ್ದಕ್ಕೆ ಧನ್ಯವಾದ ಬ್ರದರ್​.  ಆತಿಥ್ಯ ನೀಡುವಲ್ಲಿ ತೆಲಂಗಾಣದಲ್ಲಿ ನೀವು ಬೆಸ್ಟ್​​ ಅಂತ ಈಗ ನಾನು ಅಧಿಕೃತವಾಗಿ ಹೇಳಬಹುದು ಅಂತ ಶ್ಲಾಘಿಸಿದ್ದಾರೆ.

ಅಂದ್ಹಾಗೆ ಸೋನು ಸೂದ್​ ಅವರ ಸಮಾಜಮುಖಿ ಕಾರ್ಯಗಳನ್ನ ಮೆಚ್ಚಿ ಈ ಹಿಂದೆ ಒಮ್ಮೆ ಟ್ವೀಟ್​ ಮಾಡಿದ್ದ ಕೆಟಿಆರ್​​, ಸೂದ್​ರನ್ನ ಸೂಪರ್ ಹೀರೋ ಅಂತ ಬಣ್ಣಿಸಿದ್ದರು.

 

The post ‘ವಿಶ್ವದಲ್ಲೇ ಬೆಸ್ಟ್ ವೆಜ್​ ಬಿರಿಯಾನಿ ತಿನ್ನಿಸಿದ್ರಿ..’ ಸೋನು ಸೂದ್​​ರಿಂದ KTR ಗುಣಗಾನ appeared first on News First Kannada.

Source: newsfirstlive.com

Source link