ಅಂಬರೀಶ್​ ಇದ್ದಾಗ ಯಾರ್ಯಾರು ಕೈಕಟ್ಟಿ ನಿಲ್ತಿದ್ರು? ವೈರಲ್​ ಆಯ್ತು ಹೆಚ್​​ಡಿಕೆ ಫೋಟೋ

ಅಂಬರೀಶ್​ ಇದ್ದಾಗ ಯಾರ್ಯಾರು ಕೈಕಟ್ಟಿ ನಿಲ್ತಿದ್ರು? ವೈರಲ್​ ಆಯ್ತು ಹೆಚ್​​ಡಿಕೆ ಫೋಟೋ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನಡುವಿನ ಸಂಘರ್ಷ ದಿನಕಳೆದಂತೆ ಮತ್ತಷ್ಟು ತೀವ್ರವಾಗ್ತಿದೆ. ಈ ನಡುವೆ ಅಂಬರೀಶ್ ಇದ್ದಾಗ ಯಾರ್ಯಾರು ಕೈಕಟ್ಟಿ ನಿಲ್ತಿದ್ರು ಗೊತ್ತು ಎಂಬ ಸುಮಲತಾ ಅಂಬರೀಶ್ ಹೇಳಿಕೆ ಬೆನ್ನಲ್ಲೇ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ಕೆಲವು ಫೋಟೋಗಳು ವೈರಲ್​ ಆಗಿದೆ.

ಇಂದು ಸುಮಲತಾ ಹಾಗೂ ಹೆಚ್​ಡಿ ಕುಮಾರಸ್ವಾಮಿ ನಡುವೆ ನಿನ್ನೆ ಮತ್ತೊಂದು ಸುತ್ತಿನ ಮಾತಿನ ಕಾಳಗ ನಡೆದಿತ್ತು. ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳ ಸಮರದಲ್ಲಿ ವಾಗ್ಬಾಣಗಳು ಮತ್ತಷ್ಟು ಹರಿತವಾಗಿದ್ದವು. ಈ ನಡುವೆ ಸುಮಲತಾ ಅವರ ಬೆಂಬಲಕ್ಕೆ ನಿಂತಿರುವ ಕೆಲವು ಟ್ರೋಲ್​ ಪೇಜ್​​ಗಳು ಕುಮಾರಸ್ವಾಮಿ ಅವರು ಅಂಬರೀಶ್​ ಅವರೊಂದಿಗೆ ಫೋಟೋಗಳನ್ನು ಶೇರ್​​ ಮಾಡಿದ್ದು, ಫೋಟೋಗಳಿಗೆ ವ್ಯಂಗ್ಯಭರಿತ ಕ್ಯಾಪ್ಶನ್​ ನೀಡಿ ವೈರಲ್ ಮಾಡುತ್ತಿದ್ದಾರೆ.

blank

ಈ ನಡುವೆ ಕೆಆರ್​ಎಸ್ ಕದನ ದಿನಕ್ಕೊಂದು ಹೊಸ ಮಜಲು ಪಡೆದುಕೊಳ್ತಿದೆ. ನಿನ್ನೆ ಸುಮಲತಾ ಅವರು ಕೆಆರ್​ಎಸ್​ ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದರ ನಡುವೆಯೇ ಇಂದು ಸ್ಥಳಕ್ಕೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ 60 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಗೇಟ್ ಬದಲಾವಣೆ ಕಾಮಗಾರಿಯನ್ನೂ ವೀಕ್ಷಿಸಿದರು.

The post ಅಂಬರೀಶ್​ ಇದ್ದಾಗ ಯಾರ್ಯಾರು ಕೈಕಟ್ಟಿ ನಿಲ್ತಿದ್ರು? ವೈರಲ್​ ಆಯ್ತು ಹೆಚ್​​ಡಿಕೆ ಫೋಟೋ appeared first on News First Kannada.

Source: newsfirstlive.com

Source link