ಆಯ್ಕೆ ಸಮಿತಿ, ಮ್ಯಾನೇಜ್​​ಮೆಂಟ್ ನಡುವೆ ಭಿನ್ನಾಭಿಪ್ರಾಯ -ಕೊಹ್ಲಿಗೆ ಅಸಮಾಧಾನ?

ಆಯ್ಕೆ ಸಮಿತಿ, ಮ್ಯಾನೇಜ್​​ಮೆಂಟ್ ನಡುವೆ ಭಿನ್ನಾಭಿಪ್ರಾಯ -ಕೊಹ್ಲಿಗೆ ಅಸಮಾಧಾನ?

ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗ್ತಿರುವ ವಿರಾಟ್​ ಪಡೆಗೆ, ಸರಣಿ ಆರಂಭಕ್ಕೂ ಮುನ್ನವೇ ಹಿನ್ನಡೆಯಾಗಿದೆ. ಒಂದೆಡೆ ಶುಭ್​​ಮನ್ ಗಿಲ್ ಇಂಜುರಿ.. ಮತ್ತೊಂದೆಡೆ ಬಿಸಿಸಿಐ ವರ್ಸಸ್​ ಮ್ಯಾನೇಜ್​ಮೆಂಟ್​​ ನಡುವೆ ಕೋಲ್ಡ್​ವಾರ್. ಎಲ್ಲವನ್ನ ಗಮನಿಸ್ತಿದ್ರೆ ಬಿಸಿಸಿಐನಲ್ಲಿ, ಮನೆಯೊಂದು ಮೂರು ಬಾಗಿಲಾಗಿದೆಯಾ ಎಂಬ ಅನುಮಾನ ಹುಟ್ಟಿಸಿದೆ.

ಟೀಮ್ ಇಂಡಿಯಾದಲ್ಲೀಗ, ಬಿರುಕಿನ ಬಿರುಗಾಳಿ ಎದ್ದಿದೆ. ಶುಭ್​​ಮನ್​ ಗಿಲ್ ಇಂಜುರಿ ರಿಪ್ಲೇಸ್​ಮೆಂಟ್ ವಿಚಾರವಾಗಿ, ಟೀಮ್ ಮ್ಯಾನೇಜ್​ಮೆಂಟ್ ಹಾಗೂ ಸಲೆಕ್ಟರ್ಸ್ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಇದಕ್ಕೆ ಕಾರಣವಾಗಿರೋದು, ಕ್ಯಾಪ್ಟನ್ ಕೊಹ್ಲಿ ನಡೆ.
ಹೌದು, ಗಿಲ್ ಇಂಜುರಿ ಬೆನ್ನಲ್ಲೇ ಟೀಮ್ ಮ್ಯಾನೇಜ್​ಮೆಂಟ್​, ಬ್ಯಾಕ್ ಆಪ್ ಓಪನರ್ಸ್​ಗಾಗಿ ಇಬ್ಬರನ್ನ ಕಳುಹಿಸಿಕೊಡುವಂತೆ ಮನವಿ ಮಾಡಿದೆ. ಆದ್ರೆ ಇದಕ್ಕೆ ನಕಾರ ವ್ಯಕ್ತಪಡಿಸಿರುವ ಸೆಲೆಕ್ಟರ್ಸ್, ಸುಪ್ರೀಂ ನಾಯಕ ಎನಿಸಿಕೊಂಡಿದ್ದ ವಿರಾಟ್​ಗೆ ಸೆಡ್ಡು ಹೊಡೆದಿದೆ.

blank

ತಂಡದ ಆಯ್ಕೆ ವೇಳೆ ನಾಯಕನಿಗೆ ಇರಲಿಲ್ವಾ ಸ್ಪಷ್ಟತೆ..?
ಅಭಿಮನ್ಯು ಈಶ್ವರನ್​​ ರಿಪ್ಲೇಸ್​​ಮೆಂಟ್​​​ಗೆ ಇಲ್ವಾ ಒಲವು..?

ವಿರಾಟ್​ ಕೊಹ್ಲಿ ಮತ್ತು ಕೋಚ್ ಶಾಸ್ತ್ರಿಗೆ, ತಂಡದ ಆಯ್ಕೆ ಬಗ್ಗೆ ಕ್ಲಾರಿಟಿ ಇರಲಿಲ್ವಾ..? ಇಂಥಹದೊಂದು ಪ್ರಶ್ನೆಯ ಉದ್ಭವಕ್ಕೆ ಕಾರಣ ಶುಭ್​​ಮನ್​ ಇಂಜುರಿ ಬಳಿಕ, ಕ್ಯಾಪ್ಟನ್​​ ಕೊಹ್ಲಿ ತೆಗೆದುಕೊಂಡಿರೋ ನಿರ್ಧಾರ. ಈಗಾಗಲೇ ತಂಡದಲ್ಲಿ ರಿಸರ್ವ್ ಓಪನರ್​ ಆಗಿ ಅಭಿಮನ್ಯು ಈಶ್ವರನ್ ಇದ್ದಾರೆ. ಗಾಯಾಳು ಶುಭ್​​ಮನ್ ರಿಪ್ಲೇಸ್​ಮೆಂಟ್​ಗೆ, ಈಶ್ವರನ್​ಗೆ ಮೊದಲ ಆದ್ಯತೆ ನೀಡಲಾಗುತ್ತೆ.
ಆದ್ರೆ ಇಂಗ್ಲೆಂಡ್ ಕಂಡೀಷನ್ಸ್​​ನಲ್ಲಿ ಮೂವರು ಸ್ಪೆಷಲಿಸ್ಟ್​ ಓಪನರ್ಸ್​, ಓರ್ವ ರಿಸರ್ವ್ ಓಪನರ್ ಸೇರಿ, ಒಟ್ಟು ನಾಲ್ವರು ಆರಂಭಿಕರಿದ್ದಾರೆ. ಹೀಗಿರುವಾಗ ಮತ್ತಿಬ್ಬರು ಆರಂಭಿಕರನ್ನ ಕಳುಹಿಸುವಂತೆ, ಮ್ಯಾನೇಜ್​ಮೆಂಟ್ ಮನವಿ ಮಾಡಿದೆ. ಆದ್ರೀಗ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿರುವ ಬಿಸಿಸಿಐ, ಟೀಮ್ ಮ್ಯಾನೇಜ್​ಮೆಂಟ್ ನಿರ್ಧಾರವನ್ನ ಪ್ರಶ್ನಿಸುತ್ತಿದೆ. ಅಭಿಮನ್ಯು ಈಶ್ವರನ್ ಯಾಕೆ ಬೇಡ ಅಂತ ಸ್ಪಷ್ಟ ಕಾರಣ ನೀಡಿ ಅಂತ, ಮ್ಯಾನೇಜ್​ಮೆಂಟ್​ಗೆ ನೇರ ಪ್ರಶ್ನೆ ಕೇಳಿದೆ.​

blank

ಮೊದಲು ಕಾರಣ ಹೇಳಿ..?
ಟೀಮ್ ಮ್ಯಾನೇಜ್​ಮೆಂಟ್​​ಗೆ ಸ್ಪಷ್ಟ ಮುಂದಾಲೋಚನೆ ಇರಬೇಕು. ಟೀಮ್ ಮ್ಯಾನೇಜ್​​ಮೆಂಟ್ ಬೇಡಿಕೆ ಅನುಗುಣವಾಗಿಯೇ ತಂಡವನ್ನ, ಆಯ್ಕೆ ಮಾಡಲಾಗುತ್ತೆ. ನಾಯಕ ಕೊಹ್ಲಿಯ ಉಪಸ್ಥಿತಿಯಲ್ಲೇ ತಂಡವನ್ನ ಆಯ್ಕೆ ಮಾಡುತ್ತಾರೆ. ಕೆ.ಎಲ್.ರಾಹುಲ್​​ರನ್ನ ಆರಂಭಿಕರಾಗಿ ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಈಗ ನೀವು ಯೋಜನೆ ಬದಲಾಯಿಸಿದ್ರೆ, ಈ ಬಗ್ಗೆ ಸ್ಪಷ್ಟವಾಗಿ ತಿಳುಹಿಸಿ. ಅಭಿಮನ್ಯು ಈಶ್ವರನ್, ತವರಿನಲ್ಲಿ ನಡೆದ ಇಂಗ್ಲೆಂಡ್ ಸರಣಿಯಿಂದಲೂ ತಂಡದೊಂದಿಗೆ ಇದ್ದಾರೆ. ಟೀಮ್ ಮ್ಯಾನೇಜ್​​​ಮೆಂಟ್​ಗೆ ಈಶ್ವರನ್ ಬಗ್ಗೆ ನಂಬಿಕೆ ಇಲ್ವಾ..?

ಬಿಸಿಸಿಐ ಅಧಿಕಾರಿ

ಹೌದು, ಬಿಸಿಸಿಐ ಪ್ರಶ್ನಿಸುವಂತೆ ತಂಡದ ಆಯ್ಕೆ ವೇಳೆ ನಾಯಕ ವಿರಾಟ್​, ಅಭಿಮನ್ಯು ಈಶ್ವರನ್ ಬಗ್ಗೆ ಮೌನವಹಿಸಿದ್ರಾ? ಎರಡು ತಿಂಗಳ ಕಾಲ ತಂಡದೊಂದಿಗಿದ್ದ ಈಶ್ವರನ್ ಆಟದಲ್ಲಿ, ಗುಣಮಟ್ಟ ಇರದಾಗ ಆಯ್ಕೆ ವೇಳೆಯೇ ರಿಜೆಕ್ಟ್​ ಮಾಡಬಹುದಿತ್ತು. ಆದ್ರೆ ಈ ವೇಳೆ ಸುಮ್ಮನಿದ್ದ ವಿರಾಟ್ ಮತ್ತು ಕೋಚ್ ಶಾಸ್ತ್ರಿ, ಮತ್ತಿಬ್ಬರು ಆರಂಭಿಕರ ಬುಲಾವ್​ಗೆ ಮನವಿ ಮಾಡಿದ್ದಾರೆ. ಇದು ಟೀಮ್ ಮ್ಯಾನೇಜ್​ಮೆಂಟ್ ವರ್ಸಸ್ ಸೆಲೆಕ್ಷನ್ ಕಮಿಟಿ ಎಂಬಂತಾಗಿದೆ. ಹೀಗಾಗಿ ಈ ಕೋಲ್ಡ್​ವಾರ್, ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

blank

The post ಆಯ್ಕೆ ಸಮಿತಿ, ಮ್ಯಾನೇಜ್​​ಮೆಂಟ್ ನಡುವೆ ಭಿನ್ನಾಭಿಪ್ರಾಯ -ಕೊಹ್ಲಿಗೆ ಅಸಮಾಧಾನ? appeared first on News First Kannada.

Source: newsfirstlive.com

Source link