ಸೌರವ್ ಗಂಗೂಲಿ @ 49; ಹ್ಯಾಪಿ ಬರ್ತ್​​ ಡೇ ದಾದಾ

ಸೌರವ್ ಗಂಗೂಲಿ @ 49; ಹ್ಯಾಪಿ ಬರ್ತ್​​ ಡೇ ದಾದಾ

ಭಾರತೀಯ ಕ್ರಿಕೆಟ್​​ನಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ಶ್ರೇಷ್ಠ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಾಯಕನಾಗಿ ಜವಾಬ್ದಾರಿ ಹೊತ್ತ ಬಳಿಕ ಭಾರತದಲ್ಲಿ ಕ್ರಿಕೆಟ್​ ಹುಚ್ಚು ಹೆಚ್ಚಿಸಿದ ಬಂಗಾಳದ ಮಹಾರಾಜ. 2000ರ ಅವಧಿಯಲ್ಲಿ ಟೀಮ್​​ ಇಂಡಿಯಾ ಮ್ಯಾಚ್​​ ಫಿಕ್ಸಿಂಗ್​ ಕಳಂಕದಿಂದ ಅವಮಾನಕ್ಕೆ ಒಳಗಾಗಿತ್ತು. ಅಂತಹ ಸಂಕಷ್ಟದ ಸಂದರ್ಭದಲ್ಲಿ ತಂಡದ ಜವಾಬ್ದಾರಿ ಹೊತ್ತ ಗಂಗೂಲಿ, ಹೊಸ ಭಾಷ್ಯ ಬರೆದ್ರು. ಜೊತೆಗೆ ಕ್ರಿಕೆಟ್​ ಲೋಕದಲ್ಲಿ ಹೊಸ ಕ್ರಾಂತಿಕಾರಿಯನ್ನ ಸೃಷ್ಟಿಸಿದ ದಾದ, ಲೆಜೆಂಡರಿ ಕ್ರಿಕೆಟರ್​​​ಗಳನ್ನ ಸೃಷ್ಟಿಸಿದ ಅದ್ಭುತ ನಾಯಕ ಕೂಡ ಹೌದು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ, ಟೀಮ್ ಇಂಡಿಯಾ ಹಾಲಿ ಮತ್ತು ಮಾಜಿ ಕ್ರಿಕೆಟಿಗರು, ಹುಟ್ಟುಹಬ್ಬದ ಸಂಭ್ರಮವನ್ನ ಕೋರಿದ್ದಾರೆ.

The post ಸೌರವ್ ಗಂಗೂಲಿ @ 49; ಹ್ಯಾಪಿ ಬರ್ತ್​​ ಡೇ ದಾದಾ appeared first on News First Kannada.

Source: newsfirstlive.com

Source link