ಜುಲೈ 10ರಂದು ತುಳುನಾಡ್ದ ಕಟ್ಟು ಕಟ್ಟಲೆ ವಿಚಾರಗೋಷ್ಠಿ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶ್ವದ ಎಲ್ಲಾ ತುಳು ಕೂಟ-ಸಂಘಟನೆಯ ಒಟ್ಟು ಕೂಡುವಿಕೆಯಲ್ಲಿ ‘ತುಳುನಾಡ್ದ ಕಟ್ಟು ಕಟ್ಟಲೆ’ ಎಂಬ ವಿಷಯದಲ್ಲಿ ಪ್ರಪ್ರಥಮವಾಗಿ ಅಂತರ್ಜಾಲ ತುಳು ವಿಚಾರಗೋಷ್ಠಿ ನಡೆಯಲಿದೆ.

ಜುಲೈ 10ರಂದು ಸಂಜೆ 7 ಗಂಟೆಗೆ ಈ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ. ಎಲ್ಲಾ ತುಳು ಕೂಟ-ಸಂಘಟನೆಯ ಪ್ರಮುಖರಿಂದ ಅಭಿಪ್ರಾಯ ಮಂಡನೆ ನಡೆಯಲಿದೆ.

ಸಾಹಿತಿ ಮತ್ತು ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್‍ಸಾರ್ ವಹಿಸಲಿದ್ದಾರೆ. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

The post ಜುಲೈ 10ರಂದು ತುಳುನಾಡ್ದ ಕಟ್ಟು ಕಟ್ಟಲೆ ವಿಚಾರಗೋಷ್ಠಿ appeared first on Public TV.

Source: publictv.in

Source link