ರೋಷನ್ ಬೇಗ್​ ಕೋಟಿ ಕೋಟಿ ಆಸ್ತಿ ಜಪ್ತಿ; ಏನೆಲ್ಲಾ ಸೀಜ್ ಆಗಿದೆ ಗೊತ್ತಾ..?

ರೋಷನ್ ಬೇಗ್​ ಕೋಟಿ ಕೋಟಿ ಆಸ್ತಿ ಜಪ್ತಿ; ಏನೆಲ್ಲಾ ಸೀಜ್ ಆಗಿದೆ ಗೊತ್ತಾ..?

ಬೆಂಗಳೂರು: ಐಎಂಎ ಸಂಸ್ಥೆ ತನ್ನ ಗ್ರಾಹಕರಿಗೆ ಬಹುಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿಯನ್ನ ಸರ್ಕಾರ ಜಪ್ತಿ ಮಾಡಿದೆ. ರೋಷನ್ ಬೇಗ್ ಬಳಿ ಸಕ್ಷಮ ಪ್ರಾಧಿಕಾರ ಸೀಜ್ ಮಾಡಿದ್ದೇನು‌.? ಎಂಬ ಎಕ್ಸ್​ಕ್ಲೂಸೀವ್ ಡಿಟೇಲ್ಸ್ ನ್ಯೂಸ್ ಫಸ್ಟ್​​ಗೆ ಲಭ್ಯವಾಗಿದೆ.

ಒಟ್ಟು 16.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಸರ್ಕಾರ ಸೀಜ್ ಮಾಡಿದೆ. ಅದರ ವಿವರ ಇಂತಿದೆ:

 • ಬ್ಯಾಂಕ್ ಅಕೌಂಟ್​ಗಳಲ್ಲಿದ್ದ ₹2.32 ಕೋಟಿ
 • ₹8.91 ಕೋಟಿ ಮೌಲ್ಯದ ಸೈಟ್​ಗಳು
 • ₹42.4 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಸ್ತುಗಳು
 • ₹6.80 ಲಕ್ಷ ಮೌಲ್ಯದ ಶೇರ್ & ಹೂಡಿಕೆ
 • 1.73 ಕೋಟಿ ಮೌಲ್ಯದ ರೋಷನ್ ವಾಣಿಜ್ಯ ಕಟ್ಟಡಗಳು ಸೀಜ್
 • ಹಳೆ ಮನೆ ರೇಟ್ ಬಿಟ್ಟು ₹3.64 ಕೋಟಿ ಮೌಲ್ಯದ ಮನೆ ಸೀಜ್

ರೋಷನ್ ಬೇಗ್ ಅವರಿಗೆ ಸೇರಿದ ಒಟ್ಟು 6 ಬ್ಯಾಂಕ್​ ಅಕೌಂಟ್​ಗಳನ್ನ ಸೀಜ್ ಮಾಡಲಾಗಿದೆ; ಅದರ ಡೀಟೇಲ್ಸ್ ಇಲ್ಲಿದೆ;

 • ಕೋ ಅಪರೇಟಿವ್ ಬ್ಯಾಂಕ್ – ವಿಧಾನಸೌಧ: 33 ಲಕ್ಷ ರೂಪಾಯಿ
 • ಕಾರ್ಪೋರೇಷನ್ ಬ್ಯಾಂಕ್ – ಸದಾಶಿವನಗರ: 4,265 ರೂಪಾಯಿ
 • ಕೆನರಾ ಬ್ಯಾಂಕ್ – ವಸಂತನಗರ: 16 ಲಕ್ಷ ರೂಪಾಯಿ
 • ಹೆಚ್​​ಡಿಎಫ್​ಸಿ ಬ್ಯಾಂಕ್ – ತಿಪ್ಪಸಂದ್ರ: 1.08 ಕೋಟಿ ರೂಪಾಯಿ
 • ಸಿಂಡಿಕೇಟ್ ಬ್ಯಾಂಕ್ – ಫ್ರೇಜರ್ ಟೌನ್: 88 ಸಾವಿರ ರೂಪಾಯಿ
 • ಕೆನರಾ ಬ್ಯಾಂಕ್ – ಜಯನಗರ: 76 ಲಕ್ಷ ರೂಪಾಯಿ
 • ಒಟ್ಟು 2.32 ಕೋಟಿ ರೂಪಾಯಿ ಜಪ್ತಿ

blank

ಸರ್ಕಾರ ಸೀಜ್ ಮಾಡಿರುವ ರೋಷನ್ ಬೇಗ್​ರ ಆಸ್ತಿಗಳು

 • HBR ಲೇಔಟ್: 4000 ಸಾವಿರ ಅಡಿ ಸೈಟ್ -₹96 ಲಕ್ಷ ಮೌಲ್ಯ
 • ಫ್ರೇಜರ್ ಟೌನ್: 5545 ಸಾವಿರ ಅಡಿ ಸೈಟ್ -₹7.16 ಲಕ್ಷ ಮೌಲ್ಯ
 • ಫ್ರೇಜರ್ ಟೌನ್: 1844 ಸಾವಿರ ಅಡಿ ಸೈಟ್ -₹1.64 ಲಕ್ಷ ಮೌಲ್ಯ
 • ಒಟ್ಟು 8.91 ಕೋಟಿ ಮೌಲ್ಯದ ಆಸ್ತಿಗಳ ಸೀಜ್

ಸರ್ಕಾರ ಸೀಜ್ ಮಾಡಿರುವ ಚಿನ್ನಾಭರಣ

 • 120 ಸವರನ್ ಚಿನ್ನದ ಆಭರಣಗಳ ಜಪ್ತಿ
 • ಬರೋಬ್ಬರಿ 26.5 ಲಕ್ಷ ಮೌಲ್ಯದ 960 ಗ್ರಾಂ ಚಿನ್ನಾಭರಣ
 • 32 ಕೆ.ಜಿ ಬೆಳ್ಳಿ‌ ಆಭರಣ, ಸಾಮಗ್ರಿ ಹಾಗೂ ವಸ್ತುಗಳು ಸೀಜ್
 • ಬರೋಬ್ಬರಿ 16 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಸೀಜ್
 • ಒಟ್ಟು 42.4 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ವಸ್ತುಗಳು ಸೀಜ್
 • blank

ಸರ್ಕಾರ ಸೀಜ್ ಮಾಡಿರುವ ರೋಷನ್ ಶೇರ್ & ಹೂಡಿಕೆಗಳು

 • ದಾನಿಷ್ ಪಬ್ಲಿಕೇಷನ್ಸ್​ನ 3.75 ಲಕ್ಷ ಮೌಲ್ಯದ 3750 ಶೇರ್​​ಗಳು
 • ಪ್ರೇಸ್ಟಿಜ್ ಎಸ್ಟೇಟ್ ಲಿಮಿಟೆಡ್ನ 98.8 ಸಾವಿರ ಮೌಲ್ಯದ 540 ಶೇರ್ಗಳು
 • ಚರನ್ ಕೋ ಅಪರೇಟಿವ್ ಬ್ಯಾಂಕ್ ಸದಸ್ಯತ್ವದ 31.5 ಸಾವಿರ ಮೌಲ್ಯದ ಶೇರ್
 • ದಾನಿಷ್ ಪಬ್ಲಿಕೇಷನ್ ಈಕ್ವಿಟಿ 12.5 ಲಕ್ಷ ಮೌಲ್ಯದ 1250 ಶೇರ್ಗಳು
 • ಸಬೀಹಾ ಅಪೆರಲ್ಸ್ ಈಕ್ವಿಟಿ 50 ಸಾವಿರ ಮೌಲ್ಯದ 5000 ಶೇರ್ಗಳು
 • ಒಟ್ಟು 6.80 ಲಕ್ಷ ಮೌಲ್ಯದ ಶೇರ್ & ಹೂಡಿಕೆ ಸೀಜ್

ಸರ್ಕಾರ ಸೀಜ್ ಮಾಡಿರುವ ರೋಷನ್ ಅವರ ವಾಣಿಜ್ಯ ಸಂಕಿರ್ಣಗಳು

 • ಹೊಸೂರು ರಸ್ತೆಯ 30,217 ಚದರ ಅಡಿಗಳ ವಾಣಿಜ್ಯ ಫ್ಲಾಟ್
 • ಬರೋಬ್ಬರಿ‌ 96.8 ಲಕ್ಷ ಮೌಲ್ಯದ ಕಟ್ಟಡ ಸೀಜ್
 • ರೆಸಿಡೆನ್ಸಿ ರಸ್ತೆ ಪ್ರಸ್ಟೀಜ್ ಟವರ್ ನಲ್ಲಿರುವ 1979 ಚ.ಅಡಿಯ ಫ್ಲಾಟ್
 • ಬರೋಬ್ಬರಿ 76.6 ಲಕ್ಷ ಮೌಲ್ಯದ ಫ್ಲಾಟ್ ಸೀಜ್
 • ಒಟ್ಟು 1.73 ಕೋಟಿ ಮೌಲ್ಯದ ರೋಷನ್ ವಾಣಿಜ್ಯ ಕಟ್ಟಡಗಳು ಸೀಜ್
 • blank

ರೋಷನ್ ಬೇಗ್​ರ 2 ಮನೆಗಳ ಸೀಜ್.!

 • ತನ್ನ ವಂಶಸ್ಥರಿಂದ ಬಂದಿದ್ದ ಫ್ರೇಜರ್ ಟೌನ್ ಸ್ಟಾಂಡರ್ಸ್ ರಸ್ತೆಯ ಮನೆ ಸೀಜ್
 • 2800 ಚ. ಅಡಿ ಸೈಟ್ ನಲ್ಲಿರುವ ಮನೆ
 • ಸದ್ಯ 3500 ಚ. ಅಡಿ ಬಿಲ್ಟ್ ಅಪ್ ಏರಿಯಾದ ಮನೆ
 • ಫ್ರೇಜರ್ ಟೌನ್ ಕೆ.ಆರ್.ಡಬ್ಲ್ಯೂ ನಗರದ ಮನೆ ಸೀಜ್
 • 13.500 ಚ. ಅಡಿಯ ಹೊಸ ಮನೆ ಸಹ ಸೀಜ್
 • 3.64 ಲಕ್ಷ ಮೌಲ್ಯದ ಹೊಸ ಮನೆ ಸೀಜ್ ಮಾಡಲಾಗಿದೆ
 • ಹಳೆ ಮನೆ ರೇಟ್ ಬಿಟ್ಟು 3.64 ಕೋಟಿ ಮೌಲ್ಯದ ಮನೆ ಸೀಜ್

ಮೇಲ್ಕಂಡ ಆಸ್ತಿ ವಿವರಗಳನ್ನು ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ಹೈ ಕೋರ್ಟ್​ಗೆ ಸಲ್ಲಿಕೆ ಮಾಡಿದ್ರು ಅನ್ನೋ ಮಾಹಿತಿ ನ್ಯೂಸ್​ಫಸ್ಟ್​ಗೆ ಎಕ್ಸ್​ಕ್ಲೂಸಿವ್ ಆಗಿ ಸಿಕ್ಕಿದೆ.

ವಿಶೇಷ ವರದಿ: ವಿಷ್ಣುಪ್ರಸಾದ್, ಕ್ರೈಂ ಬ್ಯೂರೋ

The post ರೋಷನ್ ಬೇಗ್​ ಕೋಟಿ ಕೋಟಿ ಆಸ್ತಿ ಜಪ್ತಿ; ಏನೆಲ್ಲಾ ಸೀಜ್ ಆಗಿದೆ ಗೊತ್ತಾ..? appeared first on News First Kannada.

Source: newsfirstlive.com

Source link